For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ರಾಜೀವ್ ಕಪೂರ್ ಹೃದಯಾಘಾತದಿಂದ ನಿಧನ

  |

  ಬಾಲಿವುಡ್ ನ ಖ್ಯಾತ ನಟ ಮತ್ತು ರಾಜ್ ಕಪೂರ್ ಪುತ್ರ ರಾಜೀವ್ ಕಪೂರ್ ಹೃದಯಾಘಾತದಿಂದ ನಿಧನಹೊಂದಿದ್ದಾರೆ. 58 ವರ್ಷದ ನಟ ರಾಜೀವ್ ಅವರಿಗೆ ತನ್ನ ನಿವಾಸದಲ್ಲಿ ಇಂದು ( ಫೆಬ್ರವರಿ 09) ಬೆಳಗ್ಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಜೀವ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

  ರಾಜೀವ್ ನಿಧನದ ಬಗ್ಗೆ ಅತ್ತಿಗೆ ನೀತು ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ರಾಜೀವ್ ಫೋಟೋವನ್ನು ಶೇರ್ ಮಾಡಿ, ಆತ್ಮಕ್ಕೆ ಶಾಂತಿ ಕೋರಿದ್ದಾರೆ.

  ಸುಶಾಂತ್ ಸಾವು: ಸಿಬಿಐ ವರದಿ ಬಗ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

  ರಾಜೀವ್ ಕಪೂರ್ ವಂಶದ ಕುಡಿ. ಬಾಲಿವುಡ್ ನ ಖ್ಯಾತ ನಟರಾದ ರಣಧೀರ್ ಕಪೂರ್ ಮತ್ತು ದಿವಂಗತ ರಿಷಿ ಕಪೂರ್ ಅವರ ಸಹೋದರ. ಅಭಿನಯದ ಜೊತೆಗೆ ನಿರ್ಮಾಣ ಮತ್ತು ಸಿನಿಮಾ ನಿರ್ದೇಶನವನ್ನು ಮಾಡಿದ್ದಾರೆ. ರಾಮ್ ತೇರಿ ಗಂಗಾ ಮೈಲಿ, ಮೆರಾ ಸಾಥಿ ಮತ್ತು ಹಮ್ ತೋ ಚಲೆ ಪರ್ದೆಸ್ ಸಿನಿಮಾಗಳಲ್ಲಿ ರಾಜೀವ್ ನಟಿಸಿದ್ದಾರೆ.

  ಟಾಪ್ ಟಾಪ್ ಟಾಪ್ ಟಕ್ಕರ್ ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ | Top Tucker /Filmibeat kannada

  ರಾಜೀವ್ ನಿಧನಕ್ಕೆ ಬಾಲಿವುಡ್ ನ ಅನೇಕ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

  English summary
  Bollywood actor Rajiv Kapoor passed away at 58.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X