»   » ಬಾಲಿವುಡ್ ನಟ ರಾಜ್ ಪಾಲ್ ಗೆ 6 ತಿಂಗಳು ಜೈಲು ಶಿಕ್ಷೆ

ಬಾಲಿವುಡ್ ನಟ ರಾಜ್ ಪಾಲ್ ಗೆ 6 ತಿಂಗಳು ಜೈಲು ಶಿಕ್ಷೆ

Posted By:
Subscribe to Filmibeat Kannada

ದೆಹಲಿಯ ಉದ್ಯಮಿಯೊಬ್ಬರ ಬಳಿ 5 ಕೋಟಿ ಸಾಲ ಪಡೆದು ಹಿಂತಿರುಗಿಸದ ಕಾರಣ ಬಾಲಿವುಡ್ ನಟ ರಾಜ್‌ ಪಾಲ್ ಯಾದವ್‌ ಗೆ ದಿಲ್ಲಿ ಸೆಷನ್ಸ್ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

'ಭೂಲ್ ಭೂಲಯ್ಯಾ', 'ಪಾರ್ಟನರ್', 'ಹಂಗಾಮಾ' ಸಿನಿಮಾಗಳಲ್ಲಿ ಅಭಿನಯಿಸಿದ್ದ ರಾಜ್‌ ಪಾಲ್ ಯಾದವ್ ಗೆ ಆರು ತಿಂಗಳ ಶಿಕ್ಷೆಯ ಜತೆಗೆ, 11.2 ಕೋಟಿ ರೂಪಾಯಿ ದಂಡ, ಆತನ ಪತ್ನಿ ರಾಧಾ ಯಾದವ್‌ ಗೆ 70 ಲಕ್ಷ ದಂಡ ವಿಧಿಸಿದ್ದಾರೆ.

ಶಿಕ್ಷೆಯಾದ ಬಳಿಕ ಜಾಮೀನು ಅರ್ಜಿ ಹಾಕಿದ ರಾಜ್ ಪಾಲ್ ಗೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಮಿತ್ ಅರೋರಾ, 50 ಸಾವಿರ ರೂಪಾಯಿ ಭದ್ರತೆ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ.

Bollywood Actor Rajpal Yadav gets 6 month jail

ಘಟನೆ ವಿವರ:
2010 ರಲ್ಲಿ ರಾಜ್‌ ಪಾಲ್ ನಟಿಸಿ, ನಿರ್ದೇಶಿಸಿದ ಚೊಚ್ಚಲ ಸಿನಿಮಾ 'ಆಟ ಪಾಟ ಲಪಾಟ' ಸಿನಿಮಾಗಾಗಿ ದಿಲ್ಲಿ ಮೂಲದ ಮುರಳಿ ಪ್ರಾಜೆಕ್ಟ್ ಕಂಪೆನಿ ಮಾಲೀಕ ಎಮ್ ಜಿ ಅಗರ್ವಾಲ್ ಬಳಿ 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಈ ಮೊತ್ತಕ್ಕೆ ಬಡ್ಡಿ ಸೇರಿ 2011, ಡಿಸೆಂಬರ್ 3ರ ಸಮಯಕ್ಕೆ ಮತ್ತೆ ವಾಪಸ್ ಮಾಡುತ್ತೇನೆ ಎಂದು ಹೇಳಿದ್ದರು. ಆದ್ರೆ, ಕೊಟ್ಟಿಲ್ಲ.

ಈ ಸಂಬಂಧ ರಾಜ್‌ ಪಾಲ್ ದಂಪತಿಗಳ ವಿರುದ್ಧ ಅಗರವಾಲ್ ಪೊಲೀಸ್ ದೂರು ನೀಡಿದರು. ವಿಚಾರಣೆ ನಡೆಸಿದ ದಿಲ್ಲಿ ಕೋರ್ಟ್ ಸಾಲ ಹಿಂತಿರುಗಿಸಲು ಈ ದಂಪತಿಗಳಿಗೆ ಹಲವು ಬಾರಿ ಅವಕಾಶ ಕಲ್ಪಿಸಿತು. ಆದರೆ ಅವರು ಸಾಲ ಹಿಂತಿರುಗಿಸಲಿಲ್ಲ. ಹಾಗಾಗಿ ಕೋರ್ಟ್ ತೀರ್ಪು ನೀಡಿ ಶಿಕ್ಷೆ ಜಾರಿಗೊಳಿಸಿದೆ.

English summary
Bollywood actor Rajpal Yadav was today awarded six-month imprisonment by a Delhi court in seven cheque bounce cases for not repaying loan worth over Rs eight crore to a businessman.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X