ಬಾಲಿವುಡ್ ನಟ ರಣ್ವೀರ್ ಶೌರಿಗೆ ಕೊರೊನಾ ಪಾಸಿಟಿವ್
ಬಾಲಿವುಡ್ ಖ್ಯಾತ ಸಹನಟ ರಣವೀರ್ ಶೌರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟ್ವೀಟ್ ಮಾಡಿರುವ ರಣವೀರ್ ಶೌರಿ, ಪರೀಕ್ಷೆಗೆ ಒಳಗಾದಾಗ ಕೊರೊನಾ ಪಾಸಿಟಿವ್ ಬಂದಿದೆ. ರೋಗಲಕ್ಷಣಗಳು ಕಡಿಮೆ ಇವೆ, ನಾನು ಪ್ರಸ್ತುತ ಕ್ವಾರಂಟೈನ್‌ನಲ್ಲಿದ್ದೇನೆ ಎಂದು ರಣ್ವೀರ್ ಶೌರಿ ಟ್ವೀಟ್ ಮಾಡಿದ್ದಾರೆ.
ರಣವೀರ್ ಶೌರಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅವರ ಅಭಿಮಾನಿಗಳು, ಬೇಗನೆ ಗುಣಮುಖರಾಗಿ ಎಂದು ಹಾರೈಸಿದ್ದಾರೆ. 'ದೇವರು ನಿಮಗೆ ಶಕ್ತಿ ನೀಡಲಿ', 'ಟೆನ್ಶನ್ ಆಗಬೇಡಿ ಎಲ್ಲ ಸರಿ ಹೋಗುತ್ತದೆ' ಎಂಬಿತ್ಯಾದಿ ಧೈರ್ಯ ತುಂಬುವ ಕಮೆಂಟ್‌ಗಳನ್ನು ಮಾಡಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಉಚ್ರಾಯ ಸ್ಥಿತಿಯಲ್ಲಿದ್ದಾಗ ಅಮೆರಿಕಕ್ಕೆ ತೆರಳಿ ವೆಬ್ ಸರಣಿಯ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಆಗ ಅವರಿಗೆ ಕೊರೊನಾ ಸೋಂಕು ತಗುಲಿರಲಿಲ್ಲ. ಆದರೆ ಈಗ ಶೌರಿಗೆ ಕೊರೊನಾ ಪಾಸಿಟಿವ್ ಆಗಿದೆ.
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಸಂದೀಪ್ ನಾಹರ್ ಅವರ ಗೆಳೆಯರಾಗಿದ್ದ ರಣವೀರ್ ಶೌರಿ, ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ, 'ತೆರೆಯ ಹಿಂದಿನ ಒತ್ತಡವನ್ನು ಚಿತ್ರಮಂದಿರದ ಬಾಲ್ಕನಿಗಳಿಂದ ನೋಡಲು ಸಾಧ್ಯವಿಲ್ಲ' ಎಂದು ಹೇಳಿದ್ದರು.
ರಣ್ವೀರ್ ಶೌರಿ, ಸಲ್ಮಾನ್ ಖಾನ್ ಜೊತೆಗೆ 'ಏಕ್ ತಾ ಟೈಗರ್' ಸೇರಿದಂತೆ, ಜಿಸ್ಮ್, ಮಿಡ್‌ನೈಟ್ ಚಿಲ್ಡ್ರನ್ಸ್, ಲಕ್ಷ್ಯ, ಹಮ್ ದಮ್, ಹನಿಮೂನ್ ಟ್ರಾವೆಲ್ ಪ್ರೈವೇಟ್ ಲಿಮಿಟೆಡ್, ಸಿಂಗ್ ಈಸ್ ಕಿಂಗ್ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











