ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ರಿಷಿ ಕಪೂರ್
ಯು.ಎಸ್ ನಲ್ಲಿ ಹತ್ತತ್ರ ಒಂದು ವರ್ಷ ಕಾಲ ಚಿಕಿತ್ಸೆ ಪಡೆದ ನಂತರ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಷ್ಟೇ ಬಾಲಿವುಡ್ ನಟ ರಿಷಿ ಕಪೂರ್ ಭಾರತಕ್ಕೆ ವಾಪಸ್ ಆಗಿದ್ದರು. ಇದೀಗ ದುರಾದೃಷ್ಟವಶಾತ್, ರಿಷಿ ಕಪೂರ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ಆಗಿದೆ.
ದೆಹಲಿಯಲ್ಲಿ ಫ್ಯಾಮಿಲಿ ಫಂಕ್ಷನ್ ವೊಂದರಲ್ಲಿ ರಿಷಿ ಕಪೂರ್ ಭಾಗವಹಿಸಬೇಕಿತ್ತು. ಆದ್ರೆ, ಅಷ್ಟರಲ್ಲಿ ಅವರನ್ನ ದೆಹಲಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಪತ್ನಿ ನೀತು ಕಪೂರ್, ಪುತ್ರ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಆಸ್ಪತ್ರೆಯಲ್ಲಿದ್ದು, ರಿಷಿ ಕಪೂರ್ ಅವರ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.

ಅರ್ಮಾನ್ ಜೈನ್ ರವರ ಮೆಹಂದಿ ಸಮಾರಂಭದಲ್ಲಿ ರಿಷಿ ಕಪೂರ್ ಮತ್ತು ಕುಟುಂಬ ಪಾಲ್ಗೊಳ್ಳಲಿಲ್ಲ ಎಂದು ಸುದ್ದಿ ಆಗಿತ್ತು. ಈ ಬೆನ್ನಲ್ಲೇ ರಿಷಿ ಕಪೂರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಲಭಿಸಿದೆ. ಅಂದ್ಹಾಗೆ, ರಿಷಿ ಕಪೂರ್ ಸಹೋದರಿ ರೀಮಾ ಜೈನ್ ರವರ ಪುತ್ರ ಅರ್ಮಾನ್ ಜೈನ್ ರವರ ವಿವಾಹ ಮಹೋತ್ಸವ ದೆಹಲಿಯಲ್ಲಿ ನಡೆಯುತ್ತಿದೆ.
ಅರ್ಮಾನ್ ಜೈನ್ ಮದುವೆಯಲ್ಲಿ ಪಾಲ್ಗೊಳ್ಳಲು ರಿಷಿ ಕಪೂರ್ ಮತ್ತು ಕುಟುಂಬ ದೆಹಲಿಗೆ ತೆರಳಿತ್ತು. ಆದ್ರೆ, ದಿಢೀರನೆ ರಿಷಿ ಕಪೂರ್ ಅಸ್ತವ್ಯಸ್ತಗೊಂಡಿದ್ದರಿಂದ ಅವರನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ರಿಷಿ ಕಪೂರ್ ಅನಾರೋಗ್ಯಕ್ಕೆ ದೆಹಲಿಯ ಮಾಲಿನ್ಯ ಕಾರಣ ಎನ್ನಲಾಗುತ್ತಿದೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಕಪೂರ್ ಯು.ಎಸ್ ನಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಭಾರತಕ್ಕೆ ಮರಳಿದ್ದರು.


Click it and Unblock the Notifications











