ಬಾಲಿವುಡ್ ಗೆ ಮತ್ತೊಂದು ಆಘಾತ ; 90 ರ ದಶಕದ ಖ್ಯಾತ ನಟ ಇನ್ನು ನೆನಪು ಮಾತ್ರ ...!

90ರ ದಶಕದಲ್ಲಿ ಟೋಲ್ ಮೋಲ್ ಕೆ ಬೋಲ್ ರಿಯಾಲಿಟಿ ಗೇಮ್ ಶೋನ ನಿರೂಪಣೆ ಮಾಡುವುದರ ಮೂಲಕ ತಮ್ಮದೇ ಚಾಪನ್ನ ಮೂಡಿಸಿದವರು ರಿತುರಾಜ್ ಸಿಂಗ್. ಕಹಾನಿ ಘರ್ ಘರ್ ಕಿ, ಬನೇಗಿ ಅಪ್ನಿ ಬಾತ್' , ಹಿಟ್ಲರ್ ದೀದಿ', 'ಜ್ಯೋತಿ', 'ಶಪತ್', 'ಅದಾಲತ್', 'ಆಹತ್', 'ದಿಯಾ ಔರ್ ಬಾತಿ', ವಾರಿಯರ್ ಹೈ', 'ಲಾಡೋ 2' ಧಾರಾವಾಹಿಗಳಿಂದ ಕೀರ್ತಿಯ ಶಿಖರಕ್ಕೇರಿದ್ದ ರಿತುರಾಜ್ ಸಿಂಗ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ

ಮುಂಬೈನ ಲೋಖಂಡವಾಲಾದಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದ 59ರ ಪ್ರಾಯದ ರಿತುರಾಜ್, ಜೀರ್ಣಾಂಗ ವ್ಯವಸ್ಥೆಯ ಮುಖ್ಯ ಭಾಗವಾದ ಮೇದೋಜ್ಜೀರಕ ಗ್ರಂಥಿಯು ಚಿಕಿತ್ಸೆಗಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಮೇಲೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದರು. ಆದರೆ ಕೆಲವು ಹೃದಯದ ತೊಂದರೆಗಳನ್ನು ಹೊಂದಿದ್ದರು ಎಂದು ಆಪ್ತ ಸ್ನೇಹಿತ ಮತ್ತು ನಟ ಅಮಿತ್ ಬೆಹ್ಲ್ ಹೇಳಿದ್ದಾರೆ.

Bollywood Actor Rituraj Singh Dies Of Cardiac Arrest

ಬದರಿನಾಥ್ ಕಿ ದುಲ್ಹನಿಯಾ , ವಾಶ್-ಪಾಸೆಸ್ಡ್ ಬೈ ದಿ ಒಬ್ಸೆಸ್ಡ್, ಥುನಿವು ಸೇರಿ ಅನೇಕ ಸಿನಿಮಾಗಳಲ್ಲಿ ತಮ್ಮ ಅಭಿನಯದಿಂದ ಜನ ಮನ ಗೆದ್ದಿದ್ದ ರಿತುರಾಜ್, ಕೊನೆಯದಾಗಿ ಯಾರಿಯಾ 2 ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಟೆಸ್ಟ್ ಕೇಸ್, ಹೇ ಪ್ರಭು, ಕ್ರಿಮಿನಲ್, ಅಭಯ್, ಬಂದಿಶ್ ಬ್ಯಾಂಡಿಟ್ಸ್, ನೆವರ್ ಕಿಸ್ ಯುವರ್ ಬೆಸ್ಟ್ ಫ್ರೆಂಡ್ ಮತ್ತು ಮೇಡ್ ಇನ್ ಹೆವನ್ ಸೀಸನ್ 2 ಸೇರಿದಂತೆ ಹಲವಾರು ವೆಬ್ ಸೀರೀಸ್‌ನಲ್ಲಿಯೂ ರಿತುರಾಜ್ ತಮ್ಮ ಛಾಪನ್ನೂ ಮೂಡಿಸಿದ್ದರು. ಸದ್ಯ ಅನುಪಮಾ ಧಾರಾವಾಹಿಯಲ್ಲಿ ರಿತುರಾಜ್ ಯಶ್ ಪಾಲ್ ಪಾತ್ರವನ್ನ ನಿರ್ವಹಿಸಿದ್ದರು.

ಇನ್ನೂ ರಿತುರಾಜ್ ಅವರ ಅಕಾಲಿಕ ನಿಧನಕ್ಕೆ ಬಾಲಿವುಡ್ ನಟ ಅರ್ಷದ್ ವಾರ್ಸಿ, ಮನೋಜ್ ಭಾಜಪೈ, ಸೋನು ಸೂದ್, ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ. ಅಭಿಮಾನಿಗಳು ಕೂಡ ಅಗಲಿದ ನಟನಿಗೆ ಅಶ್ರುತರ್ಪಣ ಸಲ್ಲಿಸುತ್ತಿದ್ದಾರೆ. ರಿತುರಾಜ್ ಅವರ ನಿಧನದಿಂದ ಹಿಂದಿ ಕಿರುತೆರೆ ಜಗತ್ತು ಆಘಾತಕ್ಕೆ ಒಳಗಾಗಿದೆ.

More from Filmibeat

English summary
Badrinath ki dulhania fame actor Rituraj Singh Dies Of Cardic Arrest. Manoj Baypayee to Sonu Sood, celebs mourn his death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X