Breaking: ಬಾಲಿವುಡ್ ನಟ ಸೈಫ್ ಅಲಿಖಾನ್‌ಗೆ ಚಾಕುವಿನಿಂದ ಇರಿತ

ಬಾಲಿವುಡ್ ನಟ ಸೈಫ್ ಅಲಿಖಾನ್‌ ಮೇಲೆ ಚಾಕುವಿನಿಂದ ದಾಳಿ ಮಾಡಲಾಗಿದೆ. ಕಳ್ಳನೊಬ್ಬ ನಟನಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿರುವುದಾಗಿ ವರದಿಯಾಗಿದೆ. ಮುಂಬೈ ಬಾಂದ್ರಾದಲ್ಲಿರುವ ಸೈಫ್ ಅಲಿಖಾನ್ ನಿವಾಸದಲ್ಲಿ ದರೋಡೆ ಮಾಡಲು ಯತ್ನಿಸಿದ್ದ ದುಷ್ಕರ್ಮಿಯಿಂದ ಈ ಹಲ್ಲೆ ನಡೆದಿದೆ.

ಗುರುವಾರ ಬೆಳಗಿನ ಜಾವ 3.30ರ ಸುಮಾರಿಗೆ ಸೈಫ್ ಅಲಿಖಾನ್ ಮನೆಯಲ್ಲಿ ನಿದ್ರೆ ಮಾಡುತ್ತಿದ್ದರು. ಈ ವೇಳೆ ಕಳ್ಳನೊಬ್ಬ ದರೋಡೆಗೆ ಯತ್ನಿಸಿದ್ದಾನೆ. ತಡೆಯಲು ಹೋದ ನಟನ ಮೇಲೆ ಎರಡ್ಮೂರು ಬಾರಿ ಚಾಕುವಿನಿಂದ ಚುಚ್ಚಿ ಪರಾರಿ ಆಗಿದ್ದಾನೆ. ಮುಂಬೈ ಪೊಲೀಸರು ಹಲ್ಲೆ ನಡೆಸಿದ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ.

Bollywood actor Saif Ali Khan getting stabbed in his home during a robbery attempt

ಕೂಡಲೇ ನಟ ಸೈಫ್ ಅಲಿಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ವೇಳೆ ಪತ್ನಿ ಕರೀನಾ ಕಪೂರ್ ಹಾಗೂ ಮಕ್ಕಳು ಜೊತೆಯಲ್ಲೇ ಇದ್ದರು. ಆದರೆ ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಸೈಫ್ ಅಲಿಖಾನ್ ನಿವಾಸಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸದ್ಯ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಅಲಿಖಾನ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟನ ಕುತ್ತಿಗೆ, ಕೈ ಸೇರಿ 6 ಭಾಗಗಳಲ್ಲಿ ಗಾಯವಾಗಿದೆ ಎನ್ನಲಾಗ್ತಿದ್ದು ಎರಡು ಕಡೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಲೀಲಾವತಿ ಆಸ್ಪತ್ರೆ ಸೈಫ್ ಅಲಿಖಾನ್ ಚಿಕಿತ್ಸೆ ಬಗ್ಗೆ ಹೇಳಿಕೆ ನೀಡಿದೆ.

ಲೀಲಾವತಿ ಆಸ್ಪತ್ರೆಯ ಸಿಓಓ ಡಾ. ನಿರಾಜ್ ಉತ್ತಮನಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. "ಅಪರಿಚಿತ ವ್ಯಕ್ತಿಯಿಂದ ನಟ ಸೈಫ್ ಅಲಿಖಾನ್ ಮೇಲೆ ಬೆಳಗಿನ ಜಾವ 3.30ರ ಸುಮಾರಿಗೆ ದಾಳಿ ನಡೆದಿದೆ. ಅವರ ದೇಹದ 6 ಕಡೆಗಳಲ್ಲಿ ಗಾಯವಾಗಿದೆ. ಅದರಲ್ಲಿ ಎರಡು ಗಾಯ ಗಂಭೀರ ಸ್ವರೂಪದ್ದಾಗಿದೆ. ಅದರಲ್ಲಿ ಒಂದು ಬೆನ್ನುಮೂಳೆಗೆ ಸಮೀಪದಲ್ಲಿದೆ. ನಾವು ಚಿಕಿತ್ಸೆ ನೀಡುತ್ತಿದ್ದೇವೆ. ನ್ಯೂರೊಸರ್ಜನ್ ನಿತಿನ್ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞೆ ನಿಶಾ ಗಾಂಧಿ ತಂಡ ಚಿಕಿತ್ಸೆ ನೀಡುತ್ತಿದೆ. ಸರ್ಜರಿ ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ" ಎಂದಿದ್ದಾರೆ.

ಘಟನೆ ಬಗ್ಗೆ ನಟ ಸೈಫ್ ಅಲಿಖಾನ್ ತಂಡ ಪ್ರತಿಕ್ರಿಯಿಸಿದ್ದು "ಅಭಿಮಾನಿಗಳು, ಮಾಧ್ಯಮಗಳು ಈ ವಿಚಾರದಲ್ಲಿ ತಾಳ್ಮೆಯಿಂದ ಇರಬೇಕು, ಇದು ಪೊಲೀಸರಿಗೆ ಸಂಬಂಧಿಸಿದ ವಿಷಯ. ಈ ಬಗ್ಗೆ ನಾವು ಹೆಚ್ಚಿನ ಮಾಹಿತಿ ಕೊಡುತ್ತೇವೆ" ಎಂದು ತಿಳಿಸಿದ್ದಾರೆ.

2012ರಲ್ಲಿ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಮದುವೆ ನಡೆದಿತ್ತು. ಮುಂಬೈನ ಬಾಂದ್ರಾದ ನಿವಾಸದಲ್ಲಿ ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಹೆಚ್ಚು ನೆಗೆಟಿವ್ ರೋಲ್‌ಗಳಲ್ಲಿ ಸೈಫ್ ಅಲಿಖಾನ್ ನಟಿಸುತ್ತಿದ್ದಾರೆ. ತೆಲುಗಿನ 'ದೇವರ' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು.

More from Filmibeat

English summary
Bollywood actor Saif AliKhan injured at his home while there was a robbery attempt
Read more about: bollywood hindi saif ali khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X