For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ'ನಾದ ಪ್ರಭಾಸ್ ಗೆ ವಿಲನ್ ಆಗ್ತಾರಾ ಬಾಲಿವುಡ್ ನ ಈ ಖ್ಯಾತ ನಟ?

  |

  ಟಾಲಿವುಡ್ ಸ್ಟಾರ್ ಪ್ರಭಾಸ್ ಸದ್ಯ 'ರಾಧೆ ಶ್ಯಾಮ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಮೊದಲೆ ಪ್ರಭಾಸ್ 21ನೇ ಸಿನಿಮಾ ಅನೌನ್ಸ್ ಆಗಿದ್ದು, ಈ ಚಿತ್ರದ ಬಗ್ಗೆ ಈಗಾಗಲೆ ಚರ್ಚೆ ಪ್ರಾರಂಭವಾಗಿದೆ. ಈ ನಡುವೆ ಪ್ರಭಾಸ್ 22ನೇ ಸಿನಿಮಾ ಸಹ ಅನೌನ್ಸ್ ಮಾಡಿದ್ದಾರೆ.

  Upendra ಬ್ರಹ್ಮ ಚಿತ್ರದಲ್ಲಿನ ಡುಯೆಟ್ ಹಾಡು ತಯಾರಾದ ಕ್ಷಣಗಳು | Filmibeat Kannada

  ಪ್ರಭಾಸ್ ಸಾಹೋ ಸಿನಿಮಾದ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ. 20ನೇ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವಾಗಲೆ 21ನೇ ಮತ್ತು 22ನೇ ಸಿನಿಮಾ ಬಹಿರಂಗ ಪಡಿಸಿ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದ್ದಾರೆ. ಇತ್ತೀಚಿಗೆ ಅನೌನ್ಸ್ ಆಗಿರುವ 22ನೇ ಸಿನಿಮಾ ಆದಿಪುರುಷ್ ಬಗ್ಗೆ ಒಂದಿಷ್ಟು ಕುತೂಹಲಕಾರಿ ಅಂಶಗಳು ಹರಿದಾಡುತ್ತಿವೆ. ಮುಂದೆ ಓದಿ..

  ಪ್ರಭಾಸ್ ಏಕೆ ನನ್ನ ಆತ್ಮೀಯ ಗೆಳೆಯ: ರಾಜಮೌಳಿ ನೀಡಿದ ಕಾರಣಗಳುಪ್ರಭಾಸ್ ಏಕೆ ನನ್ನ ಆತ್ಮೀಯ ಗೆಳೆಯ: ರಾಜಮೌಳಿ ನೀಡಿದ ಕಾರಣಗಳು

  ಪ್ರಭಾಸ್ ಗೆ ಸೈಫ್ ಅಲಿ ಖಾನ್ ವಿಲನ್

  ಪ್ರಭಾಸ್ ಗೆ ಸೈಫ್ ಅಲಿ ಖಾನ್ ವಿಲನ್

  ತನ್ಹಾಜಿ ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿ ಯಾರಾಗ್ತಾರೆ, ಚಿತ್ರದಲ್ಲಿ ಯಾರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಅದಿಪುರುಷ್ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ಸೈಫ್, ಪ್ರಭಾಸ್ ಗೆ ವಿಲನ್ ಆಗಿ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ.

  ನಟ ಪ್ರಭಾಸ್ ಕಡೆಯಿಂದ ಬಿಗ್ ಅನೌನ್ಸ್ ಮೆಂಟ್: 'ಅದಿಪುರುಷ'ನಾದ ಬಾಹುಬಲಿ ಸ್ಟಾರ್ನಟ ಪ್ರಭಾಸ್ ಕಡೆಯಿಂದ ಬಿಗ್ ಅನೌನ್ಸ್ ಮೆಂಟ್: 'ಅದಿಪುರುಷ'ನಾದ ಬಾಹುಬಲಿ ಸ್ಟಾರ್

  ತನ್ಹಾಜಿ ಸಿನಿಮಾದಲ್ಲಿ ಅಭಿನಯಿಸಿದ್ದ ಸೈಫ್

  ತನ್ಹಾಜಿ ಸಿನಿಮಾದಲ್ಲಿ ಅಭಿನಯಿಸಿದ್ದ ಸೈಫ್

  ಅಂದ್ಹಾಗೆ ಸೈಫ್ ಈ ಮೊದಲು ಓಂ ರಾವತ್ ನಿರ್ದೇಶನದ ತನ್ಹಾಜಿ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಪ್ರಭಾಸ್ ಸಿನಿಮಾದಲ್ಲಿಯೂ ಸೈಫ್ ಅಭಿನಯಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಎರಡನೇ ಬಾರಿ ಸೈಫ್ ಅಲಿ ಖಾನ್, ಓಂ ರಾವತ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಯಕ ಪ್ರಭಾಸ್ ಪಾತ್ರದಷ್ಟೆ ಸ್ಟ್ರಾಂಗ್ ಆಗಿ ಸೈಫ್ ಅಲಿ ಖಾನ್ ಪಾತ್ರ ಕೂಡ ಇರಲಿದೆಯಂತೆ.

  ಪ್ರಭಾಸ್ ಗೆ ಕೀರ್ತಿ ಸುರೇಶ್ ನಾಯಕಿ

  ಪ್ರಭಾಸ್ ಗೆ ಕೀರ್ತಿ ಸುರೇಶ್ ನಾಯಕಿ

  ಪ್ರಭಾಸ್ ಗೆ ನಾಯಕಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀತೆಯಾಗಿ ಕೀರ್ತಿ ಸುರೇಶ್ ಮಿಂಚಲಿದ್ದಾರಂತೆ. ನಿರ್ದೇಶಕ ಓಂ ರಾವತ್ ಕೀರ್ತಿ ಸುರೇಶ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

  ಕನ್ನಡ ಸೇರಿದ್ದಂತೆ 5 ಭಾಷೆಯಲ್ಲಿ ಬರ್ತಿದೆ ಸಿನಿಮಾ

  ಕನ್ನಡ ಸೇರಿದ್ದಂತೆ 5 ಭಾಷೆಯಲ್ಲಿ ಬರ್ತಿದೆ ಸಿನಿಮಾ

  ಪ್ರಭಾಸ್ ಮತ್ತು ಓಂ ರಾವತ್ ಸಿನಿಮಾ ಮುಂದಿನ ಸೆಟ್ಟೇರಲಿದೆ. 2022ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ ಸಿನಿಮಾ ಹಿಂದಿ ಭಾಷೆ ಸೇರಿದ್ದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ರಿಲೀಸ್ ಆಗುತ್ತಿದೆ. ಪ್ರಭಾಸ್ ಸಿನಿಮಾ ಕನ್ನಡದಲ್ಲಿಯೂ ಡಬ್ ಆಗಿ ತೆರೆಗೆ ಬರುತ್ತಿದೆ.

  English summary
  Bollywood Actor Saif Ali Khan to play antagonist in Prabhas's Adi Purush. This movie directed by Om Raut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X