For Quick Alerts
  ALLOW NOTIFICATIONS  
  For Daily Alerts

  ಕುದುರೆ ಜೊತೆ ಸಲ್ಮಾನ್ ಖಾನ್ ರೇಸ್ ನೋಡಿ ಬೆರಗಾದ ಅಭಿಮಾನಿಗಳು

  |

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುವಂತಹ ಕ್ರೇಜಿ ವೀಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಫಿಟ್ ನೆಸ್ ಕಡೆ ಹೆಚ್ಚು ಗಮನ ಕೊಡುವ ಸಲ್ಲು 53ನೇ ವಯಸ್ಸಿನಲ್ಲೂ ವರ್ಕೌಟ್ ಮಾಡುವ ಪರಿ ನೋಡಿದ್ರೆ ಅಭಿಮಾನಿಗಳು ಶಾಕ್ ಆಗಿದ್ದಾರೆ.

  ಸಿನಿಮಾದ ಜೊತೆಗೆ ಫ್ಯಾಮಿಲಿ ಮತ್ತು ಫಿಟ್ ನೆಸ್ ಗಾಗಿ ಹೆಚ್ಚು ಸಮಯ ಕಳೆಯುವ ಸಲ್ಮಾನ್, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕ್ರೇಜಿ ವರ್ಕೌಟ್ ವೀಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಇಬ್ಬರು ಬಾಡಿಗಾರ್ಡ್ಸ್ ಅನ್ನು ಕಾಲಲ್ಲಿ ಲಿಫ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು.

  ಸಲ್ಮಾನ್ ಖಾನ್ ಕ್ರೇಸಿ ಸ್ಟಂಟ್ ಗೆ ಅಭಿಮಾನಿಗಳು ಫಿದಾ

  ಇನ್ನು ಸ್ವಿಮ್ಮಿಂಗ್ ಪೂಲ್ ಬಳಿ ಇರುವ ಎತ್ತರದ ಬಂಡೆಯನ್ನು ಹತ್ತಿ ಸಲ್ಮಾನ್ ಪೂಲ್ ಗೆ ಬ್ಯಾಕ್ ಜಂಪ್ ಮಾಡಿ ಸಾಹಸ ಮೆರೆದಿದ್ದ ವೀಡಿಯೋ ಸಹ ಸಖತ್ ವೈರಲ್ ಆಗಿತ್ತು. ಇನ್ನು ಫ್ಯಾಮಿಲಿ ಜೊತೆ ಇರುವ ಒಂದಿಷ್ಟು ಫನ್ನಿ ವೀಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ ಸಲ್ಲು. ಈಗ ಮತ್ತೊಂದು ಕ್ರೇಜಿ ವೀಡಿಯೋವನ್ನು ಶೇರ್ ಮಾಡಿದ್ದಾರೆ.

  ಸಲ್ಮಾನ್ ಖಾನ್ ಕುದುರೆಯ ಜೊತೆ ರೇಸ್ ಗೆ ಇಳಿದ್ದಾರೆ. ಹೌದು, ಕುದುರೆ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ರೇಸ್ ಶುರುಮಾಡಿದ್ದಾರೆ. ಕೊನೆಗೆ ಸಲ್ಮಾನ್ ಖಾನ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಟೈಗರ್ ವರ್ಸಸ್ ಕುದುರೆ ರೇಸ್ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳಿಂದ ಲೈಕ್ಸ್ ಮತ್ತು ಪ್ರಶಂಸೆಗಳ ಸುರಿಮಳೆಯೆ ಬರುತ್ತಿದೆ.

  English summary
  Bollywood actor salman Khan sharing a video on Instagram where he is racing with a horse. He was Running in full speed ends up beating the sprinting horse.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X