ಸಲ್ಮಾನ್ ಖಾನ್ ಬಾಡಿಗಾರ್ಡ್ ತಿಂಗಳ ಸಂಬಳ ಇಷ್ಟೊಂದಾ..!

ಸ್ಟಾರ್ ನಟರ ಬಗ್ಗೆ ಸಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತೆ. ಅವರ ಜೀವನ ಶೈಲಿ, ಸಿನಿಮಾಗಳು, ಆಹಾರ ಪದ್ದತಿ ಹೀಗೆ ನಾನಾವಿಚಾರಳನ್ನು ತಿಳಿದುಕೊಳ್ಳುತ್ತಿರುತ್ತಾರೆ. ಆದ್ರೆ ಅವರನ್ನು ಸದಾ ರಕ್ಷಣೆ ಮಾಡುತ್ತ ಅವರ ಜೊತೆಯೆ ಇರುವ ಬಾಡಿಗಾರ್ಡ್ಸ್ ಬಗ್ಗೆ ಹೆಚ್ಚು ಗೊತ್ತಿರಲು ಸಾಧ್ಯವಿಲ್ಲ. ಅದರಲ್ಲು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಬಾಡಿಗಾರ್ಡ್ ಬಗ್ಗೆ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ.

ತನ್ನ ಜೀವವನ್ನು ಲೆಕ್ಕಿಸದೆ ಮತ್ತೊಂದು ಜೀವ ಕಾಪಾಡುವ ಬಾಡಿಗಾರ್ಡ್ ತನ್ನ ಮೇಲೆ ಸಲ್ಲುಗೆ ತುಂಬಾ ಪ್ರೀತಿ. ಇತ್ತೀಚಿಗೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಮೇಲೆ ಕೈ ಮಾಡಿದ್ರು ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದ್ರೂ ಸದಾ ರಕ್ಷ ಕವಚವಾಗಿರುವ ಬಾಡಿಗಾರ್ಡ್ ಜೊತೆ ಸಲ್ಮಾನ್ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಖಾನ್ ಖಾಂದಾನ್ ನಲ್ಲಿ ಒಬ್ಬರಾಗಿರುವ ಸಲ್ಲು ಬಾಡಿಗಾರ್ಡ್ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ.

ಸಲ್ಮಾನ್ ಬಾಡಿಗಾರ್ಡ್ ಶೇರಾ

ಸಲ್ಮಾನ್ ಬಾಡಿಗಾರ್ಡ್ ಶೇರಾ

ಸಲ್ಮಾನ್ ಖಾನ್ ಗೆ ಬಾಡಿಗಾರ್ಡ್ ಆಗಿ ಶೇರಾ ಎನ್ನುವವರು ಕೆಲಸ ಮಾಡುತ್ತಿದ್ದಾರೆ. ಶೇರಾ ಸದಾ ಸಲ್ಮಾನ್ ಖಾನ್ ಜೊತೆಯಲ್ಲಿಯೆ ಇರುತ್ತಾರೆ. ಸಲ್ಮಾನ್ ಗೆ ಏನೆ ಸಮಸ್ಯೆಯಾದರು ಶೇರಾ ನೋಡಿಕೊಳ್ಳುತ್ತಾರೆ. ಶೇರಾ, ಸಲ್ಮಾನ್ ಖಾನ್ ಬಾಡಿಗಾರ್ಡ್ ಎನ್ನುವುದಕ್ಕಿಂತ ಸಲ್ಮಾನ್ ಸ್ನೇಹಿತ ಅಂತಾನೆ ಹೇಳಲಾಗುತ್ತೆ .ಇಬ್ಬರ ನಡುವೆ ಉತ್ತಮವಾದ ಬಾಂಧವ್ಯವಿದೆ.

25 ವರ್ಷಗಳಿಂದ ಸಲ್ಮಾನ್ ಗೆ ಬಾಡಿಗಾರ್ಡ್

25 ವರ್ಷಗಳಿಂದ ಸಲ್ಮಾನ್ ಗೆ ಬಾಡಿಗಾರ್ಡ್

ಶೇರಾ ಸಲ್ಮಾನ್ ಖಾನ್ ಗೆ ಬಾಡಿಗಾರ್ಡ್ ಆಗಿ ಬರೋಬ್ಬರಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 1995ರಲ್ಲಿ ಶೇರಾ ಸಲ್ಮಾನ್ ಗೆ ಬಾಡಿಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಶೇರಾರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದು ಸಹೋದರ ಸೋಹೈಲ್ ಖಾನ್. ಸಲ್ಮಾನ್ ಖಾನ್ ಗೆ ಒಳ್ಳೆಯ ಬಾಡಿಗಾರ್ಡ್ ಬೇಕು ಎಂದು ಹುಡುಕುತ್ತಿದ್ದಾಗ ಶೇರಾ ಪರಿಚಯವಾಗಿದ್ದಾರಂತೆ. ಶೇರಾ ನೋಡಿದ ಸೋಹೈಲ್, ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತೀರಾ ಎಂದು ಕೇಳಿದ್ದರಂತೆ. ಶೇರಾ ಒಂದು ಕ್ಷಣವು ಯೋಚಿಸದೆ 'ಎಸ್' ಎಂದು ಹೇಳಿದ್ದಾರೆ. ಅಲ್ಲಿಂದ ಸಲ್ಮಾನ್ ಗೆ ಬಾಡಿಗಾರ್ಡ್ ಆಗಿ ಸೇರಿಕೊಂಡ ಶೇರಾ ಇಂದಿಗೂ ಸಲ್ಮಾನ್ ಜೊತೆಯೆ ಇದ್ದಾರೆ.

ನಿಮ್ಮ ಊಹೆಗೂ ಮೀರಿದ ಸಂಬಳ

ನಿಮ್ಮ ಊಹೆಗೂ ಮೀರಿದ ಸಂಬಳ

ಶೇರಾ ತಿಂಗಳ ಸಂಬಳ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಹೌದು, ಶೇರಾ ತಿಂಗಳ ಸಂಬಳ ಬರೋಬ್ಬರಿ 15 ಲಕ್ಷ ರೂಪಾಯಿ. ಶೇರಾ ಸಂಬಳ ತುಂಬಾ ಜಾಸ್ತಿ ಇದೆ ಎನ್ನುವುದು ಅನೇಕರಿಗೆ ಗೊತ್ತಿತ್ತು. ಆದ್ರೆ ಎಷ್ಟು ಎನ್ನುವುದರ ಬಗ್ಗೆ ಮಾಹಿತಿ ಇರಲಿಲ್ಲ. ಆದ್ರೀಗ 15 ಲಕ್ಷ ಪಡೆಯುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ. ಶೇರಾ ವಾರ್ಷಿಕ ಆದಾಯ 2 ಕೋಟಿಗೂ ಅಧಿಕವಿದೆ.

ಶೇರಾ ನಿಜವಾದ ಹೆಸರು ಗುರುಮೀತ್ ಸಿಂಗ್

ಶೇರಾ ನಿಜವಾದ ಹೆಸರು ಗುರುಮೀತ್ ಸಿಂಗ್

ಸಲ್ಮಾನ್ ಗೆ ಬಾಡಿಗಾರ್ಡ್ ಆಗಿ ಸೇರಿಕೊಳ್ಳುವ ಮೊದಲು ಗುರುಮೀತ್ ಸಿಂಗ್ ಆಗಿದ್ದರು. ಸಿಖ್ ಸಮುದಾಯದ ಶೇರಾಗೆ ಚಿಕ್ಕವಯಸ್ಸಿನಲ್ಲಿ ಓದುವುದೆಂದರೆ ತುಂಬಾ ಇಷ್ಟವಂತೆ. ಸಲ್ಮಾನ್ ಖಾನ್ ಗೆ ಬಾಡಿಗಾರ್ಡ್ ಆಗಿ ಸೇರಿಕೊಂಡ ನಂತರ ಸಾಕಷ್ಟು ಬಾರಿ ಜೈಲಿಗೂ ಹೋಗಿದ್ದಾರಂತೆ. ಸಲ್ಮಾನ್ ಖಾನ್ ರನ್ನು ಜನರಿಂದ ರಕ್ಷಣೆ ಮಾಡುವ ಸಮಯದಲ್ಲಿ ಗಲಾಟೆಗಳಾಗಿ ಸೆರೆಮನೆವಾಸ ಅನುಭವಿಸಿದ್ದಾರೆ. ಬಾಡಿಗಾರ್ಡ್ ಎನ್ನುವುದಕ್ಕಿಂತ ಸಲ್ಮಾನ್ ಕುಟುಂಬದವರಲ್ಲಿ ಒಬ್ಬರಾಗಿದ್ದಾರೆ ಶೇರಾ.

More from Filmibeat

English summary
Bollywood actor Salman Khan bodyguard Shera get Rs 15 lakh per month. Shera has been working with Salman Khan for almost 25 years
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X