"ನಾನು ಗೋಮಾಂಸ ಯಾವತ್ತೂ ತಿಂದಿಲ್ಲ.. ರೇಟ್ ಕಮ್ಮಿ ಅಂತ ಬಹಳ ಮುಸ್ಲಿಮರು ತಿನ್ನುತ್ತಾರೆ"

ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯಲ್ಲಿ ಕೆಲ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ. ಗಣೇಶ ಹಬ್ಬದ ಸಡಗರ ಕೊಂಚ ಜೋರಾಗಿಯೇ ಇರುತ್ತದೆ. ಬಿಟೌನ್ ತಾರೆಯರು ಸಲ್ಲು ಮನೆ ಗಣೇಶೋತ್ಸವದಲ್ಲಿ ಭಾವಗವಹಿಸುತ್ತಾರೆ. ಈ ವರ್ಷವೂ ಅವರ ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಜೋರಾಗಿತ್ತು. ಈ ಬಗ್ಗೆ The Free Press Journal ಸಂದರ್ಶನದಲ್ಲಿ ಸಲ್ಲು ತಂದೆ ಸಲೀಂ ಮಾತನಾಡಿದ್ದಾರೆ.

ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಸಿನಿಮಾ ಬರಹಗಾರರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡವರು. ಜಾವೇದ್ ಅಖ್ತರ್ ಜೊತೆ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಅವರು ಕಥೆಗಳನ್ನು ಬರೆದಿದ್ದಾರೆ. 'ಶೋಲೆ', 'ತ್ರಿಶೂಲ್', 'ಡಾನ್', 'ಮಿ. ಇಂಡಿಯಾನ್', 'ಬಾಗ್ಬಾನ್' ರೀತಿಯ ಸೆನ್ಸೇಷನಲ್ ಸಿನಿಮಾಗಳಿಗೆ ಕಥೆಗಳನ್ನು ಒದಗಿಸಿದ್ದರು. ಕನ್ನಡದ 'ಪ್ರೇಮದ ಕಾಣಿಕೆ' ಹಾಗೂ 'ರಾಜ ನನ್ನ ರಾಜ' ಚಿತ್ರಗಳಿಗೂ ಈ ಜೋಡಿ ಕಥೆ ಬರೆದಿದ್ದರು.

Bollywood actor Salman khan Father Salim Khan Says Family Never Ate Beef

1964ರಲ್ಲಿ ಸುಶೀಲಾ ಚರಕ್ ಎಂಬುವವರನ್ನು ಸಲೀಂ ಖಾನ್ ಮದುವೆ ಆಗಿದ್ದರು. ಬಳಿಕ ಆಕೆ ಸಲ್ಮಾ ಖಾನ್ ಎಂದು ಹೆಸರು ಬದಲಿಸಿಕೊಂಡಿದ್ದರು. ಸುಶೀಲಾ ಚರಕ್ ಅವರನ್ನು ಮದುವೆಯಾದ ಬಳಿಕ ಸಲೀಂ ಖಾನ್ ಮನೆಯಲ್ಲಿ ಹಿಂದೂ ಹಬ್ಬಗಳನ್ನು ಆಚರಿಸುತ್ತಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಅದಕ್ಕೂ ಮೊದಲು ನಮ್ಮ ಮನೆಯಲ್ಲಿ ಗಣೇಶ ಹಬ್ಬ ಆಚರಿಸುತ್ತಿದ್ದೆವು ಎಂದು ಸಲೀಂ ಖಾನ್ ಹೇಳಿದ್ದಾರೆ. "ನನ್ನ ಧರ್ಮದ ವಿಚಾರಕ್ಕೆ ಮಗಳನ್ನು ಕೊಡಲು ನಮ್ಮ ಮಾವ ಹಿಂದು ಮುಂದು ನೋಡಿದ್ದರು" ಎಂದು ಸಲೀಂ ಹೇಳಿದ್ದಾರೆ.

"ಡೆಂಟಿಸ್ಟ್ ಆಗಿದ್ದ ನನ್ನ ಮಾವ ಡೋಗ್ರಾ ಸಮುದಾಯದವರು. ನನ್ನ ಮದುವೆ ವಿಷಯ ಬಂದಾಗ ನನ್ನ ಹಿನ್ನೆಲೆ ಪರಿಶೀಲಿಸಿದ್ದರು. ನಾನು ಚೆನ್ನಾಗಿ ಓದಿಕೊಂಡಿದ್ದೀನಿ, ಒಳ್ಳೆ ಕುಟುಂಬದ ಹುಡುಗ ಎನ್ನುವುದನ್ನು ಗೌರವಿಸಿದ್ದರು. ನನ್ನ ಧರ್ಮ ಮಾತ್ರ ಅವರ ಆಕ್ಷೇಪಣೆ ಎನ್ನುವುದನ್ನು ಹೇಳಿದ್ದರು. ನನ್ನ ಹಾಗೂ ಪತ್ನಿ ನಡುವೆ ಏನೇ ಭಿನ್ನಾಭಿಪ್ರಾಯ, ಜಗಳ ಇದ್ದದರೂ ಅದಕ್ಕೆ ಧರ್ಮಗಳು ಕಾರಣವಾಗಿರಲ್ಲ. ನಾವಿಬ್ಬರು ಮದುವೆಯಾಗಿ ಈಗ 60 ವರ್ಷ ಕಳೆದಿದೆ" ಎಂದು ಸಲೀಂ ಖಾನ್ ಮೆಲುಕು ಹಾಕಿದ್ದಾರೆ.

ಮಾತು ಮುಂದುವರೆಸಿರುವ ಸಲೀಂ ಖಾನ್ "ನಾವು ಇಂದೋರ್‌ನಲ್ಲಿ ಇದ್ದ ದಿನಗಳಿಂದ ಇಂದಿನವರೆಗೆ, ಎಂದಿಗೂ ಗೋಮಾಂಸ ಸೇವಿಸಿಲ್ಲ. ಗೋಮಾಂಸವು ಬಹಳ ಅಗ್ಗದ ಮಾಂಸ ಎನ್ನುವ ಕಾರಣಕ್ಕೆ ಹೆಚ್ಚಿನ ಮುಸ್ಲಿಮರು ತಿನ್ನುತ್ತಾರೆ. ಕೆಲವರು ಸಾಕು ನಾಯಿಗಳಿಗೆ ಆಹಾರವಾಗಿ ನೀಡಲು ಅದನ್ನು ಖರೀದಿಸುತ್ತಾರೆ. ಹಸುಗಳನ್ನು ಕೊಲ್ಲಬಾರದು ಮತ್ತು ಗೋಮಾಂಸವನ್ನು ನಿಷೇಧಿಸಲಾಗಿದೆ. ಹಸುವಿನ ಹಾಲು ತಾಯಿಯ ಹಾಲಿಗೆ ಸಮಾನ, ಅದು ಮುಫಿದ್ (ಒಳ್ಳೆಯದು) ಚೀಸ್ ಎಂದು ಪ್ರವಾದಿ ಮೊಹಮ್ಮದ್ ಸ್ಪಷ್ಟವಾಗಿ ಹೇಳಿದ್ದಾರೆ" ಎಂದು ತಿಳಿಸಿದ್ದಾರೆ.

"ನಾನು ನನ್ನ ಜೀವನದುದ್ದಕ್ಕೂ ಹಿಂದೂಗಳ ನಡುವೆಯೇ ಬದುಕಿದ್ದೇನೆ. ನಮ್ಮ ತಂದೆ ಪೊಲೀಸ್ ಇಲಾಖೆಯಲ್ಲಿದ್ದರು. ಪೊಲೀಸ್ ಠಾಣೆ, ಕ್ವಾಟ್ರಸ್ ಎಲ್ಲಾ ಕಡೆ ಹಿಂದೂ ಹಬ್ಬಗಳನ್ನು ಆಚರಿಸುತ್ತಿದ್ದೆವು. ನಮ್ಮ ಸುತ್ತ ಬಹುತೇಕರು ಹಿಂದೂಗಳೇ ಇರುತ್ತಿದ್ದರು. ಮದುವೆಯ ನಂತರವೇ ನಾವು ಮನೆಯಲ್ಲಿ ಗಣಪತಿಯನ್ನು ಇಡಲು ಪ್ರಾರಂಭಿಸಿದ್ದು ಎಂದ ಹೇಳಲು ಸಾಧ್ಯವಿಲ್ಲ. ಅಂದಹಾಗೆ ನನ್ನ ಕುಟುಂಬವೂ ಆಗ ನನ್ನ ಮದುವೆಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ" ಎಂದು ಸಲೀಂ ಖಾನ್ ವಿವರಿಸಿದ್ದಾರೆ.

ಸಲೀಂ ಖಾನ್ ಹಾಗೂ ಜಾವೆದ್ ಅಖ್ತರ್ ಜೀವನಾಧರಿತ ವೆಬ್ ಸೀರಿಸ್ ಕೂಡ ಬಂದಿತ್ತು. 'ಆಂಗ್ರಿ ಯಂಗ್‌ಮ್ಯಾನ್- ದಿ ಸಲೀಂ-ಜಾವೆದ್ ಸ್ಟೋರಿ' ಹೆಸರಿನಲ್ಲಿ ಅವರಿಬ್ಬರ ಕಥೆ ದೃಶ್ಯ ರೂಪ ಪಡೆದಿತ್ತು. ನಟ ಯಶ್ ಕೂಡ ಇದರಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

More from Filmibeat

English summary
Veteran writer Salim Khan reveals that his family has never eaten beef despite being Muslim, calling cow sacred as per Prophet Muhammad’s teachings, while recalling Ganesh festival celebrations and his interfaith marriage.
Read more about: salman khan salim khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X