For Quick Alerts
  ALLOW NOTIFICATIONS  
  For Daily Alerts

  ಬಡ ಗಾಯಕಿ ರಾನು ಮೊಂಡಲ್ ಗೆ ದುಬಾರಿ ಗಿಫ್ಟ್ ಕೊಟ್ಟ ಸಲ್ಮಾನ್ ಖಾನ್

  |
  ಸಲ್ಮಾನ್ ಖಾನ್ ನೀಡಿದ ಗಿಫ್ಟ್ ನ ಬೆಲೆ ಎಷ್ಟು ಗೊತ್ತಾ..? | Ranu Mandal | FILMIBEAT KANNADA

  ಬಾಲಿವುಡ್ ನಲ್ಲೀಗ ರಾನು ಮೊಂಡಲ್ ಅವರದ್ದೆ ಸುದ್ದಿ. ರಾತ್ರೋ ರಾತ್ರಿ ಸ್ಟಾರ್ ಆದ ಈ ಗಾಯಕಿ ಈಗ ಕೂತರು ಸುದ್ದಿ, ನಿಂತರು ಸುದ್ದಿ. ಕೆಲವೇ ಕೆಲವು ದಿನಗಳ ಹಿಂದೆ ರೈಲ್ವೆ ಸ್ಟೇಷನ್ ನಲ್ಲಿ ಹಾಡುತ್ತ ಭಿಕ್ಷೆ ಬೇಡುತ್ತಿದ್ದರು ರಾನು. ಆದ್ರೀಗ ರಾನು ಮೊಂಡಲ್ ಜೀವನದ ದಿಕ್ಕೆ ಬದಲಾಗಿದೆ. ಒಂದೇ ಒಂದು ಹಾಡು ರಾನು ಜೀವನವನ್ನೆ ಬದಲಾಯಿಸಿದೆ.

  ರಾನು ಬಗ್ಗೆ ಈಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್, ರಾನುಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ಬರೋಬ್ಬರಿ 55 ಲಕ್ಷದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರಂತೆ.

  ನಿರಾಸೆ ಮೂಡಿಸಿದ ಸಲ್ಮಾನ್ ಖಾನ್-ಸಂಜಯ್ ಲೀಲಾ ಬನ್ಸಾಲಿನಿರಾಸೆ ಮೂಡಿಸಿದ ಸಲ್ಮಾನ್ ಖಾನ್-ಸಂಜಯ್ ಲೀಲಾ ಬನ್ಸಾಲಿ

  ಈ ಸುದ್ದಿ ಈಗ ಸಖತ್ ವೈರಲ್ ಆಗಿದೆ. ಆದ್ರೆ ಈ ಬಗ್ಗೆ ಸಲ್ಮಾನ್ ಖಾನ್ ಆಗಲಿ ಅಥವ ರಾನು ಮೊಂಡಲ್ ಆಗಲಿ ಎಲ್ಲಿಯು ಸ್ಪಷ್ಟಪಡಿಸಿಲ್ಲ. ಆದ್ರೆ ಸಲ್ಮಾನ್ ಖಾನ್ 55 ಲಕ್ಷದ ಮನೆ ನೀಡಿರುವ ವಿಚಾರ ಮಾತ್ರ ಸದ್ದು ಸುದ್ದಿ ಮಾಡುತ್ತಿದೆ.

  ರಾನು ಹಾಡಿಗೆ ಮನಸೋತು ಹಿಮೇಶ್ ರೇಶಮಿಯಾ ದೊಡ್ಡ ಅವಕಾಶ ನೀಡಿದ್ದರು. ಈ ಒಂದು ಅವಕಾಶ ರಾನು ಅವರನ್ನು ಸ್ಟಾರ್ ಪಟ್ಟಕ್ಕೆ ಏರಿಸಿದೆ. ಅಂದ್ಹಾಗೆ ರಾನು ಮೊದಲ ಹಾಡಿಗೆ ಹಿಮೇಶ್ ರೇಶಮಿಯಾ 6 ರಿಂದ 7 ಲಕ್ಷ ಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ತೇರಿ ಮೇರಿ ಹಾಡಿನ ಮೂಲಕ ರಾನು ಮೊಂಡಲ್ ದೇಶವ್ಯಾಪಿ ಪ್ರಖ್ಯಾತಿಗಳಿಸಿದ್ದಾರೆ.

  English summary
  Bollywood actor Salman Khan gifts costliest house to Singer Ranu Mondal. Salman Khan gifted house worth Rs 55 lakh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X