ಸ್ಪೆಷಲ್ ಗಿಫ್ಟ್ ಕೊಟ್ಟ ಸಲ್ಮಾನ್ ಪ್ರೀತಿಗೆ ಮನಸಾರೆ ಧನ್ಯವಾದ ತಿಳಿಸಿದ ಸುದೀಪ್
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ದಬಾಂಗ್-3' ಸಿನಿಮಾ ಎಲ್ಲೆಡೆ ಕಮಾಲ್ ಮಾಡುತ್ತಿದೆ. ತೆರೆಮೇಲೆ ಶತ್ರುಗಳಂತೆ ಹೊಡೆದಾಡುವ ಸಲ್ಮಾನ್ ಖಾನ್ ಮತ್ತು ಸುದೀಪ್ ನಿಜ ಜೀವನದಲ್ಲಿ ಅತ್ಯಾಪ್ತ ಸ್ನೇಹಿತರು.
ಹೌದು. 'ದಬಾಂಗ್-3' ಚಿತ್ರದಿಂದಾಗಿ ಸುದೀಪ್ ಮತ್ತು ಸಲ್ಮಾನ್ ಖಾನ್ ನಡುವೆ ಗಾಢ ಸ್ನೇಹ ಬೆಳೆದಿದೆ. ''ಸುದೀಪ್ ನನ್ನ ಸಹೋದರ ಇದ್ದಂತೆ'' ಅಂತ ಎಲ್ಲಾ ಸಂದರ್ಶನಗಳಲ್ಲೂ ಹೇಳಿರುವ ಸಲ್ಮಾನ್ ಖಾನ್, ಬೆಂಗಳೂರಿಗೆ ಬಂದಿದ್ದಾಗ ಸುದೀಪ್ ಮನೆಗೆ ಭೇಟಿ ಕೊಟ್ಟು ಅವರ ಫ್ಯಾಮಿಲಿ ಜೊತೆಗೆ ಕೆಲ ಕಾಲ ಹರಟಿದ್ದರು.
ಇದೀಗ ಕಿಚ್ಚ ಸುದೀಪ್ ಗೆ ಸಲ್ಮಾನ್ ಖಾನ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ತಮ್ಮ ಅಚ್ಚುಮಚ್ಚಿನ ಜಾಕೆಟ್ ನ ಉಡುಗೊರೆಯಾಗಿ ಸುದೀಪ್ ಗೆ ಸಲ್ಮಾನ್ ಖಾನ್ ನೀಡಿದ್ದಾರೆ.

ಆದು ಅಂತಿಂಥ ಜಾಕೆಟ್ ಅಲ್ಲ. ಆ ಜಾಕೆಟ್ ಮೇಲಿರೋದು ಸಲ್ಮಾನ್ ಇಷ್ಟದ ಶ್ವಾನದ ಅಚ್ಚು. ಆ ಶ್ವಾನದ ಮೇಲೆ ಸಲ್ಮಾನ್ ಗೆ ಬೆಟ್ಟದಷ್ಟು ಪ್ರೀತಿ ಇತ್ತು. ತಮ್ಮ ನೆಚ್ಚಿನ ಶ್ವಾನ ತೀರಿಕೊಂಡ ಬಳಿಕ, ಸವಿನೆನಪಿಗಾಗಿ ಜಾಕೆಟ್ ಮೇಲೆ ಅದರ ಚಿತ್ರವನ್ನ ಸಲ್ಮಾನ್ ಖಾನ್ ಅಚ್ಚಾಗಿಸಿದ್ದರು. ಹೀಗಾಗಿ, ಆ ಜಾಕೆಟ್ ಮೇಲೆ ಸಲ್ಮಾನ್ ಗೆ ಭಾವನಾತ್ಮಕ ನಂಟಿದೆ.
ಆ ಜಾಕೆಟ್ ನಿಂದ ಎಂದೂ ದೂರವಾಗಲು ಬಯಸದ ಸಲ್ಮಾನ್, ಇದೀಗ ಅದೇ ಜಾಕೆಟ್ ನ ತಮ್ಮ ಸ್ನೇಹದ ಕಾಣಿಕೆಯಾಗಿ ಸುದೀಪ್ ಗೆ ಕೊಟ್ಟಿದ್ದಾರೆ. ಸುದೀಪ್ ಮೇಲಿನ ಪ್ರೀತಿಗಾಗಿ, ಆ ಜಾಕೆಟ್ ನ ಕೊಟ್ಟು ಸಲ್ಮಾನ್ ಬಿಗಿದಪ್ಪಿದ್ದಾರೆ.
ಸುದೀಪ್ ಗೆ ಜಾಕೆಟ್ ಹಾಕಿ, ಸಲ್ಮಾನ್ ಬಿಗಿದಪ್ಪಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ, ''ಈ ಜಾಕೆಟ್ ನಿಂದ ದೂರವಾಗುವ ಬಗ್ಗೆ ನಾನೆಂದೂ ಯೋಚಿಸಿರಲಿಲ್ಲ'' ಎಂದು ಈ ಜಾಕೆಟ್ ನ ನನ್ನ ಮೇಲೆ ಹಾಕುವಾಗ ಸಲ್ಮಾನ್ ಖಾನ್ ಸರ್ ಹೇಳಿದ್ದರು. ಈ ನಿಮ್ಮ ಪ್ರೀತಿಗೆ ನನ್ನ ಮನಃಪೂರ್ವಕ ಧನ್ಯವಾದ'' ಎಂದು ಸುದೀಪ್ ಬರೆದುಕೊಂಡಿದ್ದಾರೆ.


Click it and Unblock the Notifications











