ಸ್ಟಂಟ್ ಕಲಾವಿದರ ಸಹಾಯಕ್ಕೆ ಧಾವಿಸಿದ ನಟ ಸಲ್ಮಾನ್ ಖಾನ್
ಕೊರೊನಾ ಲಾಕ್ ಡೌನ್‌ನಿಂದ ಸಾವಿರಾರು ಮಂದಿಯ ಬದುಕು ಬೀದಿಗೆ ಬಂದಿದೆ. ಕೆಲಸವಿಲ್ಲದೆ ಅನೇಕರು ಬದುಕು ಸಾಗಿಸಲು ಪರದಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಒಂದಿಷ್ಟು ಮಂದಿಗೆ ಅನೇಕರು ಸಹಾಯ ಮಾಡುತ್ತಿದ್ದಾರೆ. ಕಷ್ಟದಲ್ಲಿರುವ ಜನರ ಪೈಕಿ ಸಿನಿ ಕಾರ್ಮಿಕರು ಕೂಡ ಇದ್ದಾರೆ.
ಸದ್ಯ ಸಿನಿಮಾ ಕೆಲಗಳು ಸ್ಥಗಿತಗೊಂಡಿವೆ. ಕೊರೊನಾ ಕಡಿಮೆಯಾಗಿ ಮತ್ತೆ ಯಾವಾಗ ಚಿತ್ರೀಕರಣ ಪ್ರಾರಂಭವಾಗುತ್ತೋ ಗೊತ್ತಿಲ್ಲ. ಆದರೆ ಅಲ್ಲಿವರೆಗೂ ಜೀವನ ಸಾಗಿಸುವುದು ಕಷ್ಟಸಾಧ್ಯವಾಗಿದೆ. ಸ್ಯಾಂಡಲ್ ವುಡ್‌ನಲ್ಲಿ ಈಗಾಗಲೇ ಅನೇಕ ಸ್ಟಾರ್ ಕಲಾವಿದರು ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಯಶ್ ಸೇರಿದಂತೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ.
ಯಶ್ ಚಿತ್ರರಂಗದ 3 ಸಾವಿರ ಕಲಾವಿದರಿಗೆ 5 ಸಾವಿರ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಾಲಿವುಡ್ ನಲ್ಲೂ ಸಾಕಷ್ಟು ಮಂದಿ ನೆರವು ನೀಡುತ್ತಿದ್ದಾರೆ. ಫ್ರಂಟ್ ಲೈನ್ ಕೆಲಸಗಾರರಿಗೆ ಆಹಾರ ವಿತರಿಸುತ್ತಿದ್ದ ನಟ ಸಲ್ಮಾನ್ ಖಾನ್ ಈಗ ಸ್ಟಂಟ್ ಕಲಾವಿದರಿಗೆ ನೆರವು ನೀಡುತ್ತಿದ್ದಾರೆ.

ಸ್ಟಂಟ್ ಅಸೋಸಿಯೇಷನ್ ನಡಿಯಲ್ಲಿ ನೋಂದಾಯಿಸಲ್ಪಟ್ಟ ಸ್ಟಂಟ್ ಕಲಾವಿದರಿಗೆ ಸಲ್ಮಾನ್ ಸಹಾಯ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್‌ಗೆ ಒಟಿಟಿ ಪ್ಲಾಟ್ ಫಾರ್ಮ್ ನೆಟ್ ಫ್ಲಿಕ್ಸ್ ಸಹಾಯ ಮಾಡುತ್ತಿದೆ. ಈ ಬಗ್ಗೆ ಮಾತನಾಡಿರುವ ಸಂಘದ ಪ್ರಧಾನ ಕಾರ್ಯದರ್ಶಿ ಅಜಾಜ್, ಇದುವರೆಗೂ ಯಾವುದೇ ಸಹಾಯ ಪಡೆದಿಲ್ಲ. ಇದೀಗ ಮೊದಲ ಬಾರಿಗೆ ಸಲ್ಮಾನ್ ಖಾನ್ ಸಹಾಯ ಮಾಡುತ್ತಿದ್ದಾರೆ. ಹಣವನ್ನು ಸದಸ್ಯರ ಖಾತೆಗೆ ವರ್ಗಾಯಿಸುವುದಾಗಿ ಹೇಳಿದ್ದಾರೆ.
ಸಲ್ಮಾನ್ ಖಾನ್ ಅವರ ಈ ಮಹತ್ತರ ಕಾರ್ಯ, ಕೆಲಸವಿಲ್ಲದೆ ಮನೆಯಲ್ಲೇ ಕುಳಿತ್ತಿದ್ದ ಸದಸ್ಯರಿಗೆ ಸ್ವಲ್ಪ ಸಮಾಧಾನ ತಂದಿದೆ. ಕಳೆದ ವರ್ಷ ಸ್ಟಂಟ್ ಕಲಾವಿದರಿಗೆ ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಸಹಾಯ ಮಾಡಿದ್ದರು.


Click it and Unblock the Notifications











