»   » ಮಾಜಿ ಲವರ್ ಕತ್ರಿನಾ ಕೈಫ್ ಮೇಲೆ ಸಲ್ಮಾನ್ ಖಾನ್ ಕಾಳಜಿ!

ಮಾಜಿ ಲವರ್ ಕತ್ರಿನಾ ಕೈಫ್ ಮೇಲೆ ಸಲ್ಮಾನ್ ಖಾನ್ ಕಾಳಜಿ!

Posted By:
Subscribe to Filmibeat Kannada

ಮಾಜಿ ಪ್ರೇಮಿಗಳಾದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೆ ಒಂದಾಗಿದ್ದಾರೆ ಎಂದು ನಾವೇ ಮೊನ್ನೆಯಷ್ಟೇ ಹೇಳಿದ್ವಿ. ಅದೂ 'ಟೈಗರ್ ಜಿಂದಾ ಹೈ' ಚಿತ್ರಕ್ಕಾಗಿ ಅಂತಲೂ ಹೇಳಿದ್ವಿ.

ಸಲ್ಮಾನ್ ಖಾನ್ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಕತ್ರಿನಾ ಕೈಫ್ ಬಗ್ಗೆ ಸ್ಪೆಷಲ್ ಟೇಕ್ ಕೇರ್ ತೆಗೆದುಕೊಂಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಬಿ ಟೌನ್ ನಲ್ಲಿ ಸಲ್ಲು ಮತ್ತು ಕತ್ರಿನಾ ನಿಜವಾಗಿ ಮತ್ತೆ ಪ್ರೇಮಿಗಳಾಗುವ ಸಾಧ್ಯತೆ ಇದೆ ಎಂದು ಪಿಸಿ ಪಿಸಿ ಮಾತು ಕೇಳಿ ಬರುತ್ತಿದೆಯಂತೆ. ಅಂದಹಾಗೆ ಈ ಸ್ಪೆಷಲ್ ರಿಪೋರ್ಟ್ ಓದಿದ್ರೆ ನೀವು ಸಹ ಹಾಗೆ ಥಿಂಕ್ ಮಾಡ್ಬೋದು ಅನಿಸುತ್ತೇ...

ಮತ್ತೆ ಕಂಫರ್ಟ್ ಲೆವೆಲ್ ನಲ್ಲಿ ಮಾಜಿ ಪ್ರೇಮಿಗಳು

ಡೆಕ್ಕನ್ ಕ್ರಾನಿಕಲ್ ಪ್ರಕಾರ, ' ಸಲ್ಮಾನ್ ಮತ್ತು ಕತ್ರಿನಾ, ಈ ಹಿಂದೆ ಮಾಜಿ ಪ್ರೇಮಿಗಳು. ಈ ಜೋಡಿಹಕ್ಕಿಗಳು ತಾವು ಹಿಂದೆ ಕಾಣಿಸಿಕೊಂಡ ರೀತಿಯಲ್ಲೇ ಮತ್ತೆ ಕಂಫರ್ಟ್ ಲೆವೆಲ್ ನಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರಂತೆ.

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಕೆಮಿಸ್ಟ್ರಿ

"ಅವರ ರಿಲೇಶನ್ ಶಿಪ್ ಬಗ್ಗೆ ನಾವು ಮಾತನಾಡುತ್ತಿಲ್ಲ. ಅವರ ಕೆಮಿಸ್ಟ್ರಿ ಈ ಹಿಂದಿನಂತೆಯೇ ಇದೆ. ಆದ್ದರಿಂದ ರೂಮರ್ಸ್ ಮಾಜಿ ಪ್ರೇಮಿಗಳ ಬಗ್ಗೆ ಮತ್ತೆ ಶುರುವಾಗೋದು ಖಂಡಿತ" ಎಂದು ಚಿತ್ರೀಕರಣ ಸ್ಥಳದ ಮೂಲಗಳು ತಿಳಿಸಿವೆ.

ಸಲ್ಮಾನ್ ವಿಶೇಷವಾಗಿ ಗಮನ ಹರಿಸುತ್ತಿದ್ದಾರೆ..

"ಸಲ್ಮಾನ್ ಖಾನ್ ನಿರಂತರವಾಗಿ ಕತ್ರಿನಾ ಬಗ್ಗೆ ಗಮನ ಹರಿಸುತ್ತಿದ್ದಾರಂತೆ. ಅಲ್ಲದೇ ಚಿತ್ರೀಕರಣ ಇಲ್ಲದಿದ್ದಾಗಲು ಪರಸ್ಪರ ಚಾಟಿಂಗ್ ನಲ್ಲಿ ತೊಡಗಿಕೊಂಡಿದ್ದಾರಂತೆ'.

ಖಂಡಿತ ಮತ್ತೆ ತುಂಬಾ ಹತ್ತಿರವಾಗುವ ಸಾಧ್ಯತೆಗಳಿವೆ..

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಇಬ್ಬರು ಆತ್ಮೀಯತೆಯಿಂದ ಪರಸ್ಪರ ಯಾವುದೇ ವಿಷಯಗಳನ್ನು ಶೇರ್ ಮಾಡಿಕೊಳ್ಳಲು ಆರಂಭಿಸಿದ್ದಾರೆ ಎಂದು ಇತರೆ ಮೂಲಗಳು ತಿಳಿಸಿವೆ.

ಕತ್ರಿನಾ ಬಗ್ಗೆ ಸಲ್ಮಾನ್ ಚಿಂತೆ

ಕೆಲದಿನಗಳ ಹಿಂದೆ 'ಜಗ್ಗ ಜಾಸೂಸ್' ಚಿತ್ರೀಕರಣ ವೇಳೆ ಕತ್ರಿನಾ ಕೈಫ್ ಗಾಯಗೊಂಡಿದ್ದರಂತೆ. ಈ ವಿಷಯ ತಿಳಿದ ಸಲ್ಮಾನ್ ಬೇಸರ ವ್ಯಕ್ತಪಡಿಸಿದ್ದರು ಎಂದು ಮೂಲಗಳು ವೆಬ್ ಪೋರ್ಟಲ್ ಗೆ ತಿಳಿಸಿದ್ದವು.

ಸಲ್ಮಾನ್ ಖಾನ್ ಉಪದೇಶ

"ಕತ್ರಿನಾ ಕೈಫ್ 'ಜಗ್ಗ ಜಾಸೂಸ್' ಚಿತ್ರಕರಣದ ವೇಳೆ ಆದ ಹಲವು ಗಾಯಗಳ ನೋವಿನಿಂದ ಇನ್ನೂ ಬಳಲುತ್ತಿದ್ದು, ಅವರಿಗೆ ಕಂಫರ್ಟ್ ಆಗುವಂತೆ ನೋಡಿಕೊಳ್ಳಿ. ಸುಲಭವಾಗಿರುವ ಸನ್ನಿವೇಶಗಳನ್ನು ಮಾತ್ರ ಶೂಟ್ ಮಾಡಿ" ಎಂದು ಸಲ್ಮಾನ್ 'ಟೈಂಗರ್ ಜಿಂದಾ ಹೈ' ಚಿತ್ರತಂಡಕ್ಕೆ ಅಡ್ವೈಸ್ ಮಾಡಿದ್ದಾರಂತೆ.

English summary
Salman Khan is taking extra care of his ex-girlfriend Katrina Kaif on the sets of Tiger Zinda Hai. More details below.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada