34 ವರ್ಷಗಳ ಹಿಂದೆ ನಟ ಸಲ್ಮಾನ್ ಖಾನ್ ಬರೆದಿದ್ದ ಲವ್ ಲೆಟರ್ ಈಗ ವೈರಲ್

ವಯಸ್ಸು 50 ದಾಟಿದ್ರು ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣುತ್ತಿದೆ. ಪ್ರಭಾಸ್ ಕೂಡ ಸಲ್ಲು ಮದುವೆ ಆದಮೇಲೆ ನನ್ನ ಮದುವೆ ಎಂದು ತಮಾಷೆ ಮಾಡಿಕೊಳ್ಳುವಂತಾಗಿದೆ. ಪ್ರಭಾಸ್ ಮದುವೆ ಬಳಿಕ ನನ್ನ ಮದುವೆ ಎಂದು ತಮಿಳು ನಟ ವಿಶಾಲ್ ಹೇಳಿದ್ದು ವೈರಲ್ ಆಗಿತ್ತು. ಅದನ್ನ ಪಕ್ಕಕ್ಕಿಟ್ಟರೆ ಸಲ್ಲು ಲವ್ ಸ್ಟೋರಿಗಳಿಗೆ ಬರವಿಲ್ಲ.

ಒಂದ್ಕಾಲದಲ್ಲಿ ಬರೀ ಹುಡುಗರು ಮಾತ್ರವಲ್ಲ ಹೆಂಗಳೆಯರ ಫೇವರಿಟ್ ನಟ ಆಗಿದ್ದರು ಸಲ್ಮಾನ್ ಖಾನ್. ಇನ್ನು ಬಾಲಿವುಡ್ ಟಾಪ್ ನಟಿಯರು ಕೂಡ ಬಾಕ್ಸಾಫೀಸ್ ಸುಲ್ತಾನ್ ಮೋಹ ಪಾಶಕ್ಕೆ ಸಿಲುಕಿದ್ದರು. ಸಂಗೀತಾ ಬಿಜಲಾನಿಯಿಂದ ಹಿಡಿದು ಐಶ್ವರ್ಯ ರೈವರೆಗೆ ಸಾಕಷ್ಟು ನಟಿಯರ ಜೊತೆ ಸಲ್ಲು ಡೇಟಿಂಗ್ ಮಾಡಿದ್ದರು. ಆದರೆ ಯಾವುದು ಕೂಡ ಬಹಳ ದಿನ ಉಳಿಯಲಿಲ್ಲ. ಸಲ್ಲು ಮಾತ್ರ ಯಾರೊಟ್ಟಿಗೂ ಮದುವೆ ಆಗಲಿಲ್ಲ.

Bollywood Actor Salman Khan love letter Goes viral now

ಸಲ್ಮಾನ್ ಖಾನ್ ಲವ್‌ಸ್ಟೋರಿಗಳ ಕಥೆ ಇದು. ಆದರೆ ಸಲ್ಲು ಲವ್ ಲೆಟರ್ ಬಗ್ಗೆ ನಿಮಗೆ ಗೊತ್ತಾ. ಬಾಲಿವುಡ್ ಮಸಲ್‌ಮನ್ ಒಮ್ಮೆ ಲವ್ ಲೆಟರ್ ಬರೆದಿದ್ದರು. ಬಹಳ ಪ್ರೀತಿಯಿಂದ ಸಲ್ಲು ಬರೆದಿದ್ದ ಲೆಟರ್ ಅದು. ಅಷ್ಟಕ್ಕೂ ಸಲ್ಮಾನ್ ಖಾನ್ ಯಾರಿಗೆ ಲವ್ ಲೆಟರ್ ಬರೆದಿದ್ದರು ಎನ್ನುವುದೇ ಇಂಟ್ರೆಸ್ಟಿಂಗ್ ಸಂಗತಿ.

ಸದ್ಯ ಸಲ್ಲು ಬರೆದ ಆ ಲವ್‌ ಲೆಟರ್ ಈಗ ವೈರಲ್ ಆಗುತ್ತಿದೆ. ಖುದ್ದು ಆತನೇ ಬರೆದ ಲೆಟರ್ ಇದು ಎನ್ನಲಾಗ್ತಿದೆ. 34 ವರ್ಷಗಳ ಹಿಂದೆ ಅಂದ್ರೆ 1989ರಲ್ಲಿ ಇದನ್ನು ಬರೆದಿದ್ದು. ಇದರಲ್ಲಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀವೂ ನನ್ನನ್ನು ಪ್ರೀತಿಸುತ್ತೀರಿ ಎಂದು ಭಾವಿಸುತ್ತೇವೆ ಎಂದು ಬರೆದಿದ್ದರು. ಈ ಪ್ರೇಮ್ ಕಹಾನಿಯಲ್ಲಿ ಟ್ವಿಸ್ಟ್ ಏನು ಅಂದ್ರೆ, ಇದು ಸಲ್ಲು ಪ್ರೇಯಸಿಗಾಗಿ ಬರೆದ ಲೆಟರ್ ಅಲ್ಲ. ಬದಲಿಗೆ ತಮ್ಮ ಅಭಿಮಾನಿಗಳಿಗೆ ಬರೆದಿದ್ದರು. ಯಾವಾಗ ಅಂದ್ರೆ, 'ಮೈನೇ ಪ್ಯಾರ್ ಕಿಯಾ' ಸಿನಿಮಾ ಹಿಟ್ ಆಗಿದ್ದ ಸಂದರ್ಭದಲ್ಲಿ.

'ಮೈನೇ ಪ್ಯಾರ್ ಕಿಯಾ' ಸಕ್ಸಸ್ ಬಳಿಕ ಸಲ್ಲು ಕ್ರೇಜ್ ಹೆಚ್ಚಾಗಿತ್ತು. ಅದೇ ಸಮಯದಲ್ಲಿ ತಮ್ಮ ರೊಮ್ಯಾಂಟಿಕ್ ಆಗಿ ಯೋಚಿಸಿ ಈ ರೀತಿ ಲೆಟರ್ ಬರೆದು ಅಭಿಮಾನಿಗಳ ಗಮನ ಸೆಳೆದಿದ್ದರು. 29 ಡಿಸೆಂಬರ್ 1989 ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. 4 ತಿಂಗಳ ನಂತರ ಅಂದರೆ 1990, ಏಪ್ರಿಲ್‌ನಲ್ಲಿ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಮತ್ತು ನನ್ನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದ ಎಂದು ಈ ರೀತಿ ಲೆಟರ್ ಬರೆದಿದ್ದರು.

Bollywood Actor Salman Khan love letter Goes viral now

ಸಲ್ಲು ಬರೆದ ಲೆಟರ್‌ನಲ್ಲಿ ಏನಿದೆ ಎನ್ನುವುದನ್ನು ನೋಡುವುದಾರೆ "ಮೊದಲನೆಯದಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಮರೆಯಲಾಗದ ಯಶಸ್ಸನ್ನು ಕೊಟ್ಟಿದ್ದೀರಾ. ಇನ್ನು ಮುಂದೆ ನಾನು ಮಾಡುವ ಯಾವುದೇ ಚಿತ್ರವನ್ನು 'ಮೈನೆ ಪ್ಯಾರ್ ಕಿಯಾ'ಗೆ ಹೋಲಿಸಲಾಗುತ್ತದೆ ಎಂದು ನನಗೆ ಗೊತ್ತು. ಹಾಗಾಗಿ ಮುಂದೆ ಒಳ್ಳೆ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಉತ್ತಮ ಸಿನಿಮಾ ಮಾಡಲು ಶೇ 100ರಷ್ಟು ನಾನು ಪ್ರಯತ್ನಿಸುತ್ತೇನೆ ಎಂದು ಸಲ್ಮಾನ್ ಖಾನ್ ಬರೆದಿದ್ದರು.

ಸೋಶಿಯಲ್ ಮೀಡಿಯಾ ಇಲ್ಲದ ಕಾಲದಲ್ಲೇ ಈ ಲೆಟರ್ ಸಖತ್ ವೈರಲ್ ಆಗಿತ್ತು. ಅಲ್ಲಿಂದ ಮುಂದೆ ಸಲ್ಲು ಅಭಿಮಾನಿ ಬಳಗ ಬೆಳೆಯುತ್ತಾ ಹೋಯಿತು. ಮುಖ್ಯವಾಗಿ ಮಹಿಳಾ ಅಭಿಮಾನಿಗಳು ಹೆಚ್ಚಾದರು. ಬಾಲಿವುಡ್‌ನಲ್ಲಿ ನಂಬರ್ ವನ್ ಹೀರೊ ಆಗಿ ಬೆಳೆದರು. ಸದ್ಯ ಬಾಕ್ಸಾಫೀಸ್ ಸುಲ್ತಾನ್ ಆಗಿ ಸಲ್ಲು ಅಬ್ಬರಿಸುತ್ತಿದ್ದಾರೆ.

More from Filmibeat

English summary
When Salman Khan wrote Letter to his fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X