ಪ್ರಿಯಾಂಕಾ ಹತ್ಯೆ: ಮಾನವ ವೇಷ ಧರಿಸಿದ ಕೆಟ್ಟ ಶೈತಾನರನ್ನು ಸುಮ್ಮನೆ ಬಿಡಬಾರದು ಎಂದ ಸಲ್ಮಾನ್ ಖಾನ್

ತೆಲಂಗಾಣ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿಬೀಳಿಸಿದೆ. ಪ್ರಿಯಾಂಕಾ ಹತ್ಯ ಖಂಡಿಸಿ ಇಡೀ ದೇಶದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 26 ವರ್ಷದ ಪ್ರಿಯಾಂಕಾ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸಮಯದಲ್ಲಿ ಕಾಮುಕರು ಆಕೆಯ ಮೇಲೆ ಅತ್ಯಾಚಾರ ವೆಸಗಿ, ಜೀವಂತವಾಗಿ ಸುಟ್ಟುಹಾಕಿದ್ದಾರೆ.

ಈ ರೀತಿಯ ಪ್ರಕರಣಗಳು ಪದೇ ಪದೇ ನಡೆಯುತ್ತಲೆ ಇದೆ. ಹಾಗಾಗಿ ನಟಿಮಣಿಯರು ಸುರಕ್ಷತೆ ಎಲ್ಲಿದೆ, ಸಮಾಜದಲ್ಲಿ ಮಹಿಳೆಯರು ಇರುವುದೇ ಅಪರಾಧನಾ? ಎಂದು ಪ್ರಶ್ನಿಸುತ್ತಿದ್ದಾರೆ. ಮುಗ್ಧ ಪ್ರಿಯಾಂಕಾ ಹತ್ಯೆಗೆ ನ್ಯಾಯ ಕೇಳುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಇಂತಹ ಶೈತಾನರನ್ನು ನಾಶಮಾಡುವವರೆಗೂ ಬಿಡಬಾರದು. ಎಲ್ಲರೂ ಒಟ್ಟಾಗಿ ಹೋರಾಡುವ ಸಮಯ ಬಂದಿದೆ. ಇದು ಕೇವಲ ಅಭಿಯಾನವಾಗಬಾರದು ಎಂದು ಹೇಳಿದ್ದಾರೆ.

"ಮಾನವ ರೂಪದಲ್ಲಿ ವೇಷ ಧರಿಸಿದ ಕೆಟ್ಟ ಶೈತಾನರು. ಪ್ರಿಯಾಂಕಾ ರೆಡ್ಡಿ, ನಿರ್ಭಯಾ ಅವರಂತಹ ಮುಗ್ಧ ಮಹಿಳೆಯರ ನೋವು, ಚಿತ್ರಹಿಂಸೆ, ಮತ್ತು ಸಾವು ಈಗ ನಮ್ಮನ್ನು ಒಟ್ಟುಗೂಡಿಸಬೇಕು. ನಾವು ಒಟ್ಟಾಗಿ ನಮ್ಮ ನಡುವೆ ವಾಸಿಸುವ ಇಂತಹ ಶೈತಾನರನ್ನು ನಾಶ ಮಾಡಬೇಕು. ಬೇಟಿ ಬಚಾವೋ ಕೇವಲ ಅಭಿಯಾನ ವಾಗಬಾರದು. ನಾವೆಲ್ಲರೂ ಒಟ್ಟಾಗಿ ನಿಲ್ಲುತ್ತೇವೆ ಎನ್ನುವುದು ಈ ರಾಕ್ಷಸರಿಗೆ ತಿಳಿಸುವ ಸಮಯವಿದು. ಪ್ರಿಯಾಂಕಾ ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.

Bollywood Actor Salman Khan React To Priyanka Reddy Rap And Murder

ಈಗಾಗಲೆ ದಕ್ಷಿಣ ಭಾರತೀಯ ಚಿತ್ರರಂಗದ ಕಲಾವಿದರಾದ ಅನುಷ್ಕಾ ಶೆಟ್ಟಿ, ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ, ಡೈಸಿ ಶಾ, ಹನ್ಸಿಕಾ, ನಟರಾದ ಜಗ್ಗೇಶ್, ಅನಿರುದ್ಧ, ಸೋನು ಸೂದ್ ಸೇರಿದಂತೆ ಅನೇಕರು ಕಲಾವಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಿಯಾಂಕಾ ಹತ್ಯೆಗೆ ಕಾರಣರಾದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

More from Filmibeat

English summary
Bollywood actor Salman Khan react to Priyanka Reddy rap and murder. These are the worst kind of shaitans disguised in the human form Salman Khan said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X