»   » ವಾವ್.! ಸಲ್ಮಾನ್ ಖಾನ್-ಲುಲಿಯಾ ಮದುವೆ ದಿನಾಂಕ ಫಿಕ್ಸ್ ಆಯ್ತು

ವಾವ್.! ಸಲ್ಮಾನ್ ಖಾನ್-ಲುಲಿಯಾ ಮದುವೆ ದಿನಾಂಕ ಫಿಕ್ಸ್ ಆಯ್ತು

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಚಿತ್ರರಂಗದ ಮೋಸ್ಟ್ ಎಲಿಜಬೆಲ್ ಬ್ಯಾಚುರಲ್ ಅಂತಾನೇ ಖ್ಯಾತಿ ಪಡೆದಿರುವ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಈ ವರ್ಷದ ಅಂತ್ಯದಲ್ಲಿ ಮದುವೆ ಆಗುತ್ತಿದ್ದಾರೆ ಅನ್ನೋದು ಈಗಾಗಲೇ ಪಕ್ಕಾ ಆಗಿದೆ.

ಇದೀಗ ಭಾಯ್ ಜಾನ್ ಸಲ್ಲು ಕುಟುಂಬದಿಂದ ಹೊರಬಿದ್ದಿರುವ ವಿಶೇಷ ಸುದ್ದಿ ಏನಪ್ಪಾ ಅಂದ್ರೆ ಸಲ್ಮಾನ್ ಖಾನ್ ಮತ್ತು ಲುಲಿಯಾ ವಂಟೂರ್ ಅವರ ಮದುವೆ ದಿನಾಂಕವನ್ನು ಕುಟುಂಬದವರು ಸೇರಿ ಗೊತ್ತು ಮಾಡಿದ್ದಾರೆ.[ಮದುವೆ ಕನಸು ಕಾಣುತ್ತಾ ಕೈ ಹಿಡಿದು ಓಡಾಡುತ್ತಿದ್ದಾರೆ ಪ್ರಣಯ ಹಕ್ಕಿಗಳು]

Bollywood Actor Salman Khan's Marriage date revealed

ಹೌದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ದೀರ್ಘ ಕಾಲದ ಗೆಳತಿ ಲುಲಿಯಾ ವಂಟೂರ್ ಅವರನ್ನು ತಮ್ಮ 51ನೇ ಹುಟ್ಟುಹಬ್ಬದ ದಿನವಾದ ಡಿಸೆಂಬರ್ 27, 2016ರಂದು ಅದ್ದೂರಿಯಾಗಿ ವಿವಾಹ ಆಗಲಿದ್ದಾರೆ.[ಅಬ್ಬಾ.! ಕೊನೆಗೂ ಸಲ್ಮಾನ್ ಖಾನ್ ವಿವಾಹ ಆಗ್ತಾರಂತೆ]

Bollywood Actor Salman Khan's Marriage date revealed

ಅಂತೂ ಸಲ್ಲುಮೀಯಾ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಕುಟುಂಬದವರಿಗೆ ಎರಡೆರಡು ಸಿಹಿ ಸುದ್ದಿ ನೀಡಲಿದ್ದಾರೆ ಎಂದಾಯ್ತು. ಒಂದೆಡೆ ಮದುವೆ ಆದರೆ ಇನ್ನೊಂದು ಸಲ್ಲು ಅವರ 51ನೇ ಹುಟ್ಟುಹಬ್ಬದ ಸಂಭ್ರಮ. ಒಟ್ನಲ್ಲಿ ಇಡೀ ಬಿಟೌನ್ ನಲ್ಲಿ ಡಿಸೆಂಬರ್ 27ರಂದು ಹಬ್ಬದ ವಾತಾವರಣ ಉಂಟಾಗೋದು ಗ್ಯಾರೆಂಟಿ.[ಸಲ್ಮಾನ್ ರೀಮೇಕ್ ಮಾಡುತ್ತಿರುವ ಕನ್ನಡದ ಚಿತ್ರ ಯಾವುದು?]

Bollywood Actor Salman Khan's Marriage date revealed

ರೋಮೇನಿಯಾದ ಬೆಡಗಿ ಲುಲಿಯಾ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿದ್ದ ಸಂಗೀತಗಾರ ಮಾರೀಸ್ ಮೋಗಾ ಅವರ ಜೊತೆ ತಮ್ಮ ಸಂಬಂಧವನ್ನು ಕಡಿದುಕೊಂಡ ಮೇಲೆ ಸಲ್ಮಾನ್ ಖಾನ್ ಅವರ ಜೊತೆ ಕಾಣಿಸಿಕೊಳ್ಳಲಾರಂಭಿಸಿದರು.

Bollywood Actor Salman Khan's Marriage date revealed

ಬರ-ಬರುತ್ತಾ ಸಲ್ಲು ಅವರ ತಾಯಿಗೆ ಲುಲಿಯಾ ಅವರು ಇಷ್ಟವಾದ ಕಾರಣ ಇದೀಗ ಸಲ್ಮಾನ್ ಖಾನ್ ಮನದನ್ನೆಯಾಗಿ ಸಲ್ಲು ತಾಯಿ ಸಲ್ಮಾ ಅವರ ಸೊಸೆಯಾಗಿ ಭಾಯ್ ಜಾನ್ ಮನೆಗೆ ಕಾಲಿಡುತ್ತಿದ್ದಾರೆ.

English summary
Bollywood Actor Salman Khan's Wedding date revealed. Bajrangi Bhaijaan actor Salman Khan will be tying the knot with Iulia on his 51st birthday, December 27, 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada