For Quick Alerts
  ALLOW NOTIFICATIONS  
  For Daily Alerts

  ಪತ್ನಿ ಬಗ್ಗೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ

  |

  ಬಾಲಿವುಡ್‌ನ ಮತ್ತೊಬ್ಬ ಪ್ರತಿಭಾವಂತ ನಟ ಮೃತರಾಗಿದ್ದಾನೆ. ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಸಂದೀಪ್ ನಹರ್ ರ ಮೃತದೇಹ ಮುಂಬೈ ನ ತಮ್ಮ ಮನೆಯಲ್ಲಿ ಪತ್ತೆಯಾಗಿದ್ದು. ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

  ಸುಶಾಂತ್ ಸಿಂಗ್ ಜೊತೆಗೆ ಎಂಎಸ್ ಧೋನಿ, ಅಕ್ಷಯ್ ಕುಮಾರ್ ಜೊತೆಗೆ ಕೇಸರಿ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಸಂದೀಪ್ ನಹರ್ ಸಾಯುವ ಮುನ್ನ ಫೇಸ್‌ಬುಕ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದರು.

  ವಿಡಿಯೋನಲ್ಲಿ, 'ನಾನು ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇನೆ. ನಾನು ಸಾಕಷ್ಟು ಸುಖ-ದುಃಖಗಳನ್ನು ನೋಡಿದ್ದೇನೆ. ಆದರೆ ಈಗ ನಾನು ಎದುರಿಸುತ್ತಿರುವ ಸಮಸ್ಯೆಯಿಂದ ಹೊರಬರುವುದು ಕಷ್ಟ, ಹಾಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ' ಎಂದು ಹೇಳಿದ್ದಾರೆ.

  'ನನ್ನ ಪತ್ನಿ ಕಾಂಚನ್ ಶರ್ಮಾ ಹಾಗೂ ಅವರ ತಾಯಿ ವಿನು ಶರ್ಮಾ ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ, ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ನನ್ನ ಪತ್ನಿ ಅಸಾಧಾರಣ ವ್ಯಕ್ತಿತ್ವದವಳು. ನನ್ನ ಹಾಗೂ ಆಕೆಯ ವ್ಯಕ್ತಿತ್ವ ಏಕರೀತಿಯದ್ದಲ್ಲ. ನಮ್ಮಿಬ್ಬರಿಗೂ ಹೊಂದಾಣಿಕೆ ಆಗುತ್ತಿಲ್ಲ, ಪ್ರತಿದಿನ ಜಗಳ, ಇದು ನನಗೆ ಸಹಿಸಲು ಆಗುತ್ತಿಲ್ಲ. ಇದು ಆಕೆಗೆ ಸಾಮಾನ್ಯ, ಆದರೆ ನನಗೆ ಸಾಮಾನ್ಯವಲ್ಲ. ಇದರಲ್ಲಿ ಆಕೆಯದೇನೂ ತಪ್ಪಿಲ್ಲ, ಏಕೆಂದರೆ ಆಕೆಯ ವರ್ತನೆಯೇ ಅಂಥಹದ್ದು' ಎಂದು ಸಾಯುವ ಮುನ್ನ ವಿಡಿಯೋದಲ್ಲಿ ಹೇಳಿದ್ದಾರೆ ಸಂದೀಪ್

  ತಮ್ಮ ಕೋಣೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಸಂದೀಪ್ ಅನ್ನು ಅವರ ಪತ್ನಿ ಹಾಗೂ ಗೆಳೆಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ವೈದ್ಯರು, ಸಂದೀಪ್ ಅನ್ನು ಮೃತ ಎಂದು ಘೋಷಿಸಿದ್ದಾರೆ. ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದು, ಸಾವಿಗೆ ಕಾರಣ ಹುಡುಕುತ್ತಿದ್ದಾರೆ.

  ದಾಸನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ ಸ್ಟಾರ್ ಗಳು | Filmibeat Kannada

  ಕಳೆದ ವರ್ಷ ನಟ ಸುಶಾಂತ್ ಸಿಂಗ್ ಸಹ ಆತ್ಮಹತ್ಯೆಗೆ ಶರಣಾಗಿದ್ದರು. ಮುಂಬೈನ ಅವರ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು ಸುಶಾಂತ್ ಸಿಂಗ್. ಪ್ರಕರಣದ ಬಗ್ಗೆ ಸಿಬಿಐ ತನಿಖೆ ಇನ್ನೂ ಜಾರಿಯಲ್ಲಿದೆ.

  English summary
  Bollywood actor Sandeep Nahar commit suicide in his Mumbai home. Before suicide he made a video and posted on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X