ಅನಾರೋಗ್ಯ ಹಿನ್ನಲೆ ನಟನೆಗೆ ಸಂಜಯ್ ದತ್ ಬ್ರೇಕ್: ಹಾಗಾದರೆ 'KGF-2' ಕಥೆ ಏನು?
ಉಸಿರಾಟ ಸಮಸ್ಯೆಯಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಸಂಜಯ್ ದತ್ ಮನೆಗೆ ಮರಳಿದ ಬಳಿಕ ಕೆಲಸಕ್ಕೆ ವಿರಾಮ ಹೇಳುವುದಾಗಿ ಅನೌನ್ಸ್ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಂಜಯ್ ದತ್ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯವಾಗಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದ ದತ್, ಇದೀಗ ಇಂದು ದಿಢೀರನೆ ವೈದ್ಯಕೀಯ ಚಿಕಿತ್ಸೆ ಹಿನ್ನಲೆ ನಟನೆಗೆ ಶಾರ್ಟ್ ಬ್ರೇಕ್ ಘೋಷಿಸಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
Recommended Video
ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ಕೊಂಚ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಸಂಜಯ್ ದತ್ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಬಿಟ್ಟು ಕೊಡದ ಸಂಜಯ್ ದತ್ ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ನಿಂದ ಬ್ರೇಕ್ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಮುಂದೆ ಓದಿ..

ಸಂಜಯ್ ದತ್ ಟ್ವೀಟ್
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಂಜಯ್ ದತ್ "ಹಾಯ್ ಫ್ರೆಂಡ್ಸ್, ನಾನು ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ಕೊಂಚ ವಿರಾಮ ತೆಗೆದುಕುಳ್ಳುತ್ತಿದ್ದೀನಿ. ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನೊಂದಿಗೆ ಇದ್ದಾರೆ. ಮತ್ತು ನನ್ನ ಹಿತೈಶಿಗಳು ಚಿಂತಿಸಬೇಡಿ. ಅನಗತ್ಯವಾಗಿ ಊಹಾಪೂಹಗಳನ್ನು ಹಬ್ಬಿಸಬೇಡಿ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳೊಂದಿಗೆ, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಬೇಗ ಗುಣಮುಖರಾಗುವಂತೆ ಅಭಿಮಾನಿಗಳ ಪ್ರಾರ್ಥನೆ
ಸಂಜಯ್ ದತ್ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಅಲ್ಲದೆ ಆದಷ್ಟು ಬೇಗ ಸಂಜಯ್ ಬಾಬು ಅವರನ್ನು ತೆರೆಮೇಲೆ ನೋಡಲು ಆಶಿಸುತ್ತಿದ್ದಾರೆ. ಸಂಜಯ್ ದತ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದಲ್ಲಿ ಸಂಜಯ್ ದತ್ ಅಧೀರನಾಗಿ ಅಬ್ಬರಿಸಿದ್ದಾರೆ.

ಕೆಜಿಎಫ್-2 ಚಿತ್ರೀಕರಣ ಮುಗಿಸಿರುವ ದತ್?
ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಇದೆ ತಿಂಗಳು 16ರಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ಬಳಿಕ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಹೊರಡುತ್ತಿದೆ ಕೆಜಿಎಫ್ ತಂಡ. ಸಂಜಯ್ ದತ್ ಕೆಲಸಕ್ಕೆ ಬ್ರೇಕ್ ಹೇಳಿರುವುದರಿಂದ ಕೆಜಿಎಫ್ ಚಿತ್ರೀಕರಣ ಮತ್ತೆ ಮುಂದಕ್ಕೆ ಹೋಗುತ್ತಾ ಎನ್ನುವ ಅನುಮಾನ ಕಾಡುತ್ತಿದೆ. ಆದರೆ ಸಂಜಯ್ ದತ್ ಪಾತ್ರದ ಚಿತ್ರೀಕರಣ ಈಗಾಗಲೆ ಮುಕ್ತಾಯವಾಗಿದೆಯಂತೆ. ತನ್ನ ಭಾಗದ ಚಿತ್ರೀಕರಣ ಸಂಜಯ್ ದತ್ ಈಗಾಗಲೆ ಮುಗಿಸಿದ್ದಾರೆ. ಹಾಗಾಗಿ ಕೆಜಿಎಫ್ ಚಿತ್ರೀಕರಣ ಆಗಸ್ಟ್ 16ರಿಂದ ಪ್ರಾರಂಭವಾಗಲಿದೆ.

ಆಸ್ಪತ್ರೆಯಿಂದ ಟ್ವೀಟ್ ಮಾಡಿದ್ದ ಸಂಜಯ್ ದತ್
ಮೊನ್ನೆಯಷ್ಟೆ ಆಸ್ಪತ್ರೆಗೆ ದಾಖಲಾಗಿದ್ದ ಸಂಜಯ್ ದತ್ ಅನಾರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದರು. 'ನಾನು ಸುಧಾರಿಸಿಕೊಳ್ಳುತ್ತಿದ್ದೇನೆ. ನನ್ನನ್ನು ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ. ನನ್ನ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಲೀಲಾವತಿ ಆಸ್ಪತ್ರೆಯ ವೈದ್ಯರು, ದಾದಿಯರು ಇನ್ನಿತರೆ ಸಿಬ್ಬಂದಿ ನೆರವಿನಿಂದ ಇನ್ನೆರಡು-ಮೂರು ದಿನಗಳಲ್ಲಿ ಗುಣಮುಖವಾಗಿ ಮನೆಗೆ ಮರಳುತ್ತೇನೆ' ಎಂದಿದ್ದರು. ಆದರೀಗ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಬಳಿಕ ಚಿಕಿತ್ಸೆಯ ಹಿನ್ನಲೆ ಕೆಲಸಕ್ಕೆ ಕೊಂಚ ವಿರಾಮ ಹೇಳಿ ಟ್ವೀಟ್ ಮಾಡಿರುವುದು ಅಭಿಮಾನಿಗಳಿಗೆ ಆತಂಕ ಮೂಡಿಸಿದೆ.


Click it and Unblock the Notifications











