ನಟ ಸಂಜಯ್ ದತ್ ಗೆ ಕ್ಯಾನ್ಸರ್: ಹೆಚ್ಚಿನ ಚಿಕಿತ್ಸೆಗೆ USಗೆ ತೆರಳುತ್ತಿರುವ ದತ್
ಬಾಲಿವುಡ್ ನ ಖ್ಯಾತ ನಟ ಸಂಜಯ್ ಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕ್ಯಾನ್ಸರ್ 3ನೇ ಹಂತದಲ್ಲಿದ್ದು ಹೆಚ್ಚಿನ ಚಿಕಿತ್ಸೆಗೆ ಸಂಜಯ್ ದತ್ ಯುಎಸ್ ಗೆ ತೆರಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಂಜಯ್ ದತ್ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟ ಸಮಸ್ಯೆಯಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಬಳಿಕ ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ಬ್ರೇಕ್ ಪಡೆಯುತ್ತಿರುವುದಾಗಿ ಅನೌನ್ಸ್ ಮಾಡಿದ್ದರು.
"ಹಾಯ್ ಫ್ರೆಂಡ್ಸ್, ನಾನು ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ಕೊಂಚ ವಿರಾಮ ತೆಗೆದುಕುಳ್ಳುತ್ತಿದ್ದೀನಿ. ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನೊಂದಿಗೆ ಇದ್ದಾರೆ. ಮತ್ತು ನನ್ನ ಹಿತೈಶಿಗಳು ಚಿಂತಿಸಬೇಡಿ. ಅನಗತ್ಯವಾಗಿ ಊಹಾಪೂಹಗಳನ್ನು ಹಬ್ಬಿಸಬೇಡಿ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳೊಂದಿಗೆ, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ" ಎಂದಿದ್ದರು.

ಸಂಜಯ್ ದತ್ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಆತಂಕಗೊಂಡಿದ್ದರು. ಬೇಗ ಗುಣಮುಖರಾಗುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ನಿನ್ನೆ ಸಂಜೆ (ಆಗಸ್ಟ್ 11) ವೇಳೆಗೆ ಸಂಜಯ್ ದತ್ ಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ.
ಸಂಜಯ್ ದತ್ ಆಪ್ತ ಸ್ನೇಹಿತ ಇಂಗ್ಲೀಷ್ ವೆಬ್ ಪೋರ್ಟಲ್ ಜೊತೆ ಮಾತನಾಡಿ "ಸಂಜಯ್ ದತ್ ಸದ್ಯ ದುಬೈನಲ್ಲಿರುವ ತನ್ನ ಪುಟ್ಟ ಮಕ್ಕಳು ಮತ್ತು ಪತ್ನಿಯ ಬಗಗ್ಗೆ ಆತಂಕಗೊಂಡಿದ್ದಾರೆ. ಸದ್ಯ ಪತ್ನಿ ಮತ್ತು ಮಕ್ಕಳು ದುಬೈನಲ್ಲಿದ್ದಾರೆ. ಕ್ಯಾನ್ಸರ್ ಗುಣಪಡಿಸಬಹುದು, ಆದರೆ ಕಠಿಣ ಚಿಕಿತ್ಸೆಯ ಅಗತ್ಯವಿದೆ" ಎಂದು ಹೇಳಿದ್ದಾರೆ.


Click it and Unblock the Notifications











