For Quick Alerts
  ALLOW NOTIFICATIONS  
  For Daily Alerts

  ಬಟಾ ಬಯಲಾಗಲಿದೆ ಸಂಜಯ್ ದತ್ ಬದುಕಿನ ರೋಚಕ ಸತ್ಯಗಳು.!

  By Harshitha
  |

  ಬಾಲಿವುಡ್ ಎಂಬ ರಂಗು ರಂಗಿನ ಲೋಕಕ್ಕೆ ಅಧಿಪತಿಯಾಗಿ ಮೆರೆಯುವ ಹೊತ್ತಲ್ಲಿ ನಟ ಸಂಜಯ್ ದತ್ ಮೇಲೆ ದೊಡ್ಡ ಕಳಂಕ ಅಂಟಿಕೊಂಡಿತು. 1993 ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಹೆಸರು ತಳುಕು ಹಾಕಿಕೊಂಡಿತು.

  ಅಂದು ಮಾರಿಷಸ್ ನಿಂದ ಭಾರತಕ್ಕೆ ವಾಪಸ್ ಆಗುತ್ತಿದ್ದ ಸಂಜಯ್ ದತ್ ಬಗ್ಗೆ ಪೊಲೀಸ್ ಕಮಿಷನರ್ ಗೆ ಸುಳಿವು ಕೊಟ್ಟಿದ್ದೇ ತಂದೆ ಸುನೀಲ್ ದತ್ ಎಂದಾಗ ಇಡೀ ಭಾರತ ಸಂಜಯ್ ದತ್ ರನ್ನ 'ಭಯೋತ್ಪಾದಕ'ನಂತೆ ನೋಡಲು ಆರಂಭಿಸಿತು. ಬಾಲಿವುಡ್ ನ ಹೀರೋ ಅಕ್ಷರಶಃ 'ಖಳನಾಯಕ್' ಆದರು.

  ಹಾಗಾದ್ರೆ, ಸಂಜಯ್ ದತ್ 'ಭಯೋತ್ಪಾದನೆ' ಚಟುವಟಿಕೆಯಲ್ಲಿ ತೊಡಗಿದ್ರಾ.? ಈ ಪ್ರಶ್ನೆಗೆ ಖುದ್ದು ಸಂಜಯ್ ದತ್ ಕೊಡುವ ಉತ್ತರ 'ಇಲ್ಲ'.! ಅಷ್ಟಕ್ಕೂ, ಸಂಜಯ್ ದತ್ ಜೈಲು ಪಾಲಾಗಿದ್ದು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ.

  ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಅಕ್ರಮವಾಗಿ ಮೂರು AK-56 ರೈಫಲ್, 9mm ಪಿಸ್ತೂಲ್, ಇಪ್ಪತ್ತು ಗ್ರೆನೇಡ್ ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟುಕೊಂಡಿದ್ದ ಕಾರಣಕ್ಕೆ ನ್ಯಾಯಾಲಯ ಸಂಜಯ್ ದತ್ ರನ್ನ 'ದೋಷಿ' ಎಂದು ಪರಿಗಣಿಸಿ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

  ಜೈಲಿನಲ್ಲಿ ನರಕ ಯಾತನೆ ಅನುಭವಿಸಿ ಬಂದ್ಮೇಲೆ, ''ನಾನು ಭಯೋತ್ಪಾದಕ ಅಲ್ಲ. ಆತ್ಮರಕ್ಷಣೆ ಹಾಗೂ ಕುಟುಂಬದ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದೆ'' ಎಂದು ಸಂಜಯ್ ದತ್ ಸಾರಿ ಸಾರಿ ಹೇಳಿದರು.

  ಹಾಗಾದ್ರೆ, ಯಾವುದು ನಿಜ.? 1993 ರಲ್ಲಿ ಸಂಜಯ್ ದತ್ ಮನೆಯಲ್ಲಿ ನಡೆದಿದ್ದಾದರೂ ಏನು.? ದಾವೂದ್ ಇಬ್ರಾಹಿಂ ಹಾಗೂ ಸಂಜಯ್ ದತ್ ನಡುವೆ ಲಿಂಕ್ ಇತ್ತಾ.? ಅಂಡರ್ ವರ್ಲ್ಡ್ ಜಗತ್ತಿಗೂ ಸಂಜಯ್ ದತ್ ಗೂ ಇರುವ ಸಂಬಂಧ ಏನು.? ಮಗನನ್ನು ತಂದೆಯೇ ಹಿಡಿದುಕೊಟ್ಟಿದ್ದು ಯಾಕೆ.? ಸಂಜಯ್ ದತ್ ಅನುಭವಿಸಿರುವ ನೋವು ಎಂಥದ್ದು.? ಈ ಎಲ್ಲ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ.

  ಸಂಜಯ್ ದತ್ ಬದುಕಿನ ಈ ರೋಚಕ ಸತ್ಯಗಳು ಬೆಳ್ಳಿತೆರೆ ಮೇಲೆ ಅನಾವರಣ ಆಗಲಿದೆ. ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ 'ಸಂಜು' ಸಿನಿಮಾ ಜೂನ್ 29 ರಂದು ತೆರೆಗೆ ಬರಲಿದೆ. ಅದಕ್ಕೂ ಮುನ್ನ ಸದ್ಯ ರಿಲೀಸ್ ಆಗಿರುವ 'ಸಂಜು' ಚಿತ್ರದ ಟ್ರೈಲರ್ ನ ನೀವು ನೋಡಲೇಬೇಕು. 'ಖಳನಾಯಕ'ನ ಬದುಕಿನ ಹಲವು ಘಟ್ಟಗಳ ಸಣ್ಣ ಝಲಕ್ ನ ಟ್ರೈಲರ್ ನಲ್ಲಿ ಜಗಜ್ಜಾಹೀರು ಮಾಡಲಾಗಿದೆ. ಮುಂದೆ ಓದಿರಿ....

  ವ್ಯಕ್ತಿಯೊಬ್ಬ, ಜೀವನ ಹಲವು.!

  ವ್ಯಕ್ತಿಯೊಬ್ಬ, ಜೀವನ ಹಲವು.!

  ಸುನೀಲ್ ದತ್ ಹಾಗೂ ನರ್ಗಿಸ್ ದತ್ ಎಂಬ ಪ್ರಖ್ಯಾತ ತಾರೆಯರ ಪುತ್ರನಾಗಿ ಹುಟ್ಟಿ, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದು, ನಟನಾಗಿ ವೃತ್ತಿ ಜೀವನ ಆರಂಭಿಸಿದವರು ಸಂಜಯ್ ದತ್. ಇಂತಿಪ್ಪ ಸಂಜಯ್ ದತ್ ಗೆ ಅಷ್ಟೈಶ್ವರ್ಯಗಳಿದ್ದರೂ, ಡ್ರಗ್ ಅಡಿಕ್ಟ್ ಆದರು. ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಿಲುಕಿ ಜೈಲು ಪಾಲಾದ ಸಂಜಯ್ ದತ್ ರವರ ಆತ್ಮಕಥೆಯೇ 'ಸಂಜು' ಸಿನಿಮಾ. 'ಒನ್ ಮ್ಯಾನ್ ಮೆನಿ ಲೈವ್ಸ್' (ವ್ಯಕ್ತಿಯೊಬ್ಬ, ಜೀವನ ಹಲವು) ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರ ಅದಕ್ಕೆ ತಕ್ಕ ಹಾಗೆಯೇ ಸಂಜಯ್ ದತ್ ಬದುಕಿನ ಕಷ್ಟ-ಸುಖಗಳ ಸಮಗ್ರ ಚರಿತೆ ಹೊಂದಿದೆ.

  ಸಂಜಯ್ ದತ್ ಕೈಗೆ ಬಾಂಬ್ ನೀಡಿರಲಿಲ್ಲ: ಅಬು ಸಲೇಂ

  ವೆರೈಟಿ ಆಗಿದೆ 'ಸಂಜು' ಟ್ರೈಲರ್

  ವೆರೈಟಿ ಆಗಿದೆ 'ಸಂಜು' ಟ್ರೈಲರ್

  ಸಂಜಯ್ ದತ್ ಬದುಕಿನ ಹಾಗೆ 'ಸಂಜು' ಸಿನಿಮಾದ ಟ್ರೈಲರ್ ಕೂಡ ವೆರೈಟಿ ಆಗಿದೆ. 80-90 ರ ದಶಕದಲ್ಲಿದ್ದ ಕಾಸ್ಟ್ಯೂಮ್ಸ್, ಅಂದಿನ ಸಂಜು ಬಾಬಾ ಜೀವನಶೈಲಿ, ಅವರು ಯೋಚನೆ ಮಾಡುತ್ತಿದ್ದ ರೀತಿ... ಎಲ್ಲವನ್ನೂ 'ಸಂಜು' ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಅದಕ್ಕೆ ಸಾಕ್ಷಿ ಟ್ರೈಲರ್ ನಲ್ಲಿರುವ ತುಣುಕುಗಳು.

  1993 ಮುಂಬೈ ಸ್ಫೋಟದಿಂದ ಶಿಕ್ಷೆಯವರೆಗೆ : ಟೈಮ್ ಲೈನ್

  ಡ್ರಗ್ ಅಡಿಕ್ಟ್ ಆಗಿದ್ದ ಸಂಜು ಬಾಬಾ

  ಡ್ರಗ್ ಅಡಿಕ್ಟ್ ಆಗಿದ್ದ ಸಂಜು ಬಾಬಾ

  ನಟ ಸಂಜಯ್ ದತ್ ಮಾದಕ ದ್ರವ್ಯ ವ್ಯಸನಿ ಕೂಡ ಹೌದು. ಅಷ್ಟಕ್ಕೂ, ಸಂಜಯ್ ದತ್ ಡ್ರಗ್ ಅಡಿಕ್ಟ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೂ ಟ್ರೈಲರ್ ನಲ್ಲಿ ಉತ್ತರ ನೀಡಲಾಗಿದೆ. ಒಮ್ಮೆ ತಂದೆ ಮೇಲೆ ಬೇಸರಗೊಂಡಿದ್ದಾಗ, ಮತ್ತೊಮ್ಮೆ ತಾಯಿ ಅನಾರೋಗ್ಯಕ್ಕೀಡಾದಾಗ ಡ್ರಗ್ಸ್ ಸೇವನೆ ಮಾಡಿದ್ದ ಸಂಜಯ್ ದತ್ ಕೊನೆಗೆ ಆ ನಶೆಯಲ್ಲೇ ಸಿಲುಕಿಕೊಂಡರು.

  ಟಾಡಾ ಕೋರ್ಟಿಗೆ ಶರಣಾದ ಸಂಜಯ್ ದತ್

  ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣ

  ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣ

  ಹೇಳಿ ಕೇಳಿ 'ಸಂಜು' ಸಿನಿಮಾ ಸಂಜಯ್ ದತ್ ರವರ ಜೀವನಚರಿತ್ರೆ. ಅಂದ್ಮೇಲೆ, ಸಿನಿಮಾದಲ್ಲಿ ಮುಂಬೈ ಸೀರಿಯಲ್ ಬ್ಲಾಸ್ಟ್ ಕೇಸ್ ಹಾಗೂ ಜೈಲಿನ ಎಪಿಸೋಡ್ ಕೂಡ ಇರಲೇಬೇಕು. ಆ ತುಣುಕುಗಳು ಕೂಡ ಈಗ ಬಿಡುಗಡೆ ಆಗಿರುವ 'ಸಂಜು' ಚಿತ್ರದ ಟ್ರೈಲರ್ ನಲ್ಲಿದೆ.

  ಹೆಂಡ್ತೀನ್ನ ನೋಡ್ಕೋಬೇಕು; ಪೆರೋಲ್ ಕೊಡಿ

  'ಸಂಜು'ಗೆ ನರಕ ದರ್ಶನ

  'ಸಂಜು'ಗೆ ನರಕ ದರ್ಶನ

  ಹೇಳಿಕೊಳ್ಳೋಕೆ ಸೆಲೆಬ್ರಿಟಿ ಆದರೂ, ಜೈಲಿನಲ್ಲಿ ಅಪರಾಧಿ ಆಗಿ ಸಂಜಯ್ ದತ್ ಅನುಭವಿಸಿರುವ ಯಾತನೆ ಅಷ್ಟಿಷ್ಟಲ್ಲ. ಪೊಲೀಸರಿಂದ ಕೆನ್ನೆಗೆ ಹೊಡಿಸಿಕೊಳ್ಳುವುದಲ್ಲದೇ, ನಗ್ನವಾಗಿ ನಿಲ್ಲುವ ಸಂಜಯ್ ದತ್ ರವರ ಕಂಬಿ ಎಣಿಸುವ ಕಷ್ಟದ ದಿನಗಳ ಝುಲಕ್ ಕೂಡ ಚಿತ್ರದಲ್ಲಿದೆ.

  'ಭಯೋತ್ಪಾದಕ ಅಲ್ಲ'

  'ಭಯೋತ್ಪಾದಕ ಅಲ್ಲ'

  ''ನಾನು ಭಯೋತ್ಪಾದಕ ಅಲ್ಲ'' ಅಂತ ಸಂಜಯ್ ದತ್ ನಿಜ ಜೀವನದಲ್ಲಿ ಹೇಗೆ ಸಾರಿ ಸಾರಿ ಹೇಳಿದ್ರೋ, ಅದೇ ರೀತಿ 'ಸಂಜು' ಸಿನಿಮಾದಲ್ಲೂ ತೋರಿಸಲಾಗಿದೆ.

  ಹೆಣ್ಮಕ್ಕಳ ಸಂಗ

  ಹೆಣ್ಮಕ್ಕಳ ಸಂಗ

  ಸಂಜಯ್ ದತ್ ಜೀವನದ ಇಂಚಿಂಚೂ ಸಂಗತಿಗಳನ್ನೂ 'ಸಂಜು' ಚಿತ್ರದಲ್ಲಿ ಬಿಚ್ಚಿಡಲಾಗಿದೆ. ಹೆಣ್ಮಕ್ಕಳ ಸಂಗ, ನಟಿಯರ ಜೊತೆಗಿನ ಸಂಬಂಧ, ಮೂರ್ಮೂರು ಮದುವೆಗಳ ಹಿಂದಿನ ರಹಸ್ಯಗಳೂ ಕೂಡ ಚಿತ್ರದಲ್ಲಿವೆ.!

  ಅಂಡರ್ ವರ್ಲ್ಡ್ ನಂಟು

  ಅಂಡರ್ ವರ್ಲ್ಡ್ ನಂಟು

  ಸಂಜಯ್ ದತ್ ಗೆ ಅಂಡರ್ಲ್ ವರ್ಲ್ಡ್ ನಂಟು ಬೆಳೆದಿದ್ದು ಹೇಗೆ ಎಂಬುದರ ಬಗ್ಗೆಯೂ 'ಸಂಜು' ಚಿತ್ರದಲ್ಲಿ ವಿವರಣೆ ಇದೆ. ಇಲ್ಲಿಯವರೆಗೂ ಯಾರಿಗೂ ಗೊತ್ತಿಲ್ಲದ ಸಂಜಯ್ ದತ್ ಬದುಕಿನ ರೋಚಕ ಸತ್ಯಗಳು 'ಸಂಜು' ಚಿತ್ರದಲ್ಲಿ ಬಟಾ ಬಯಲಾಗಿದೆ.

  ಥೇಟ್ ಸಂಜು ಅಂತೆ ಕಾಣುವ ರಣ್ಬೀರ್

  ಥೇಟ್ ಸಂಜು ಅಂತೆ ಕಾಣುವ ರಣ್ಬೀರ್

  'ಸಂಜು' ಚಿತ್ರದ ಟ್ರೈಲರ್ ನೋಡಿದ್ಮೇಲೆ, ಕೆಲವು ದೃಶ್ಯಗಳಲ್ಲಂತೂ ರಣ್ಬೀರ್ ಕಪೂರ್ ಥೇಟ್ ಸಂಜಯ್ ದತ್ ರಂತೆಯೇ ಕಾಣುತ್ತಾರೆ. ಸುನೀಲ್ ದತ್ ಆಗಿ ಪರೇಶ್ ರಾವಲ್ ಅಭಿನಯಿಸಿದ್ದಾರೆ. ನರ್ಗಿಸ್ ದತ್ ಆಗಿ ಮನೀಶಾ ಕೊಯಿರಾಲಾ, ಸಂಜು ಬಾಬಾ ಪತ್ನಿ ಮಾನ್ಯತಾ ಆಗಿ ದಿಯಾ ಮಿರ್ಜಾ ನಟಿಸಿದ್ದಾರೆ. ಇವರುಗಳ ಜೊತೆಗೆ ಅನುಷ್ಕಾ ಶರ್ಮಾ, ಸೋನಂ ಕಪೂರ್, ಕರೀಶ್ಮಾ ತನ್ನಾ, ಬೋಮನ್ ಇರಾನಿ ಕೂಡ ಇದ್ದಾರೆ.

  ನಿರೀಕ್ಷೆ ಡಬಲ್ ಮಾಡಿರುವ 'ಸಂಜು' ಟ್ರೈಲರ್

  ನಿರೀಕ್ಷೆ ಡಬಲ್ ಮಾಡಿರುವ 'ಸಂಜು' ಟ್ರೈಲರ್

  ಸಂಜಯ್ ಜೀವನದ ಸಂಗತಿಗಳನ್ನು ಹೊಂದಿರುವ 'ಸಂಜು' ಟ್ರೈಲರ್ ಸದ್ಯ ಆನ್ ಲೈನ್ ಲೋಕದಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಗಟ್ಟಲೆ ವ್ಯೂಸ್ ಗಿಟ್ಟಿಸಿದೆ 'ಸಂಜು' ಚಿತ್ರದ ಟ್ರೈಲರ್. 'ಸಂಜು' ಟ್ರೈಲರ್ ನೋಡಿದ್ಮೇಲೆ, ಚಿತ್ರದ ಮೇಲಿನ ನಿರೀಕ್ಷೆ ಸಹಜವಾಗಿ ಡಬಲ್ ಆಗಿದೆ. ಜೂನ್ 29 ರಂದು 'ಸಂಜು' ಸಿನಿಮಾ ಬಿಡುಗಡೆ ಆಗಲಿದೆ.

  English summary
  Bollywood Actor Sanjay Dutt's big secrets to be revealed in 'Sanju' film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X