Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿನಿರಂಗದಲ್ಲಿ 27 ವರ್ಷ ಪೂರೈಸಿದ ಶಾರುಖ್ : ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕಿಂಗ್ ಖಾನ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಾಯಕನಾಗಿ ಮಿಂಚುತ್ತ ಬರೋಬ್ಬರಿ 27 ವರ್ಷಗಳು ಕಳೆದಿವೆ. ದಿವಾನ ಚಿತ್ರದ ಮೂಲಕ ನಾಯಕನಾಗಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಶಾರುಖ್ 27 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಮೊದಲ ಚಿತ್ರದ ಅಭಿನಯದಲ್ಲೆ ಉತ್ತಮ ಉದಯೋನ್ಮುಕ ನಟ ಎಂದು ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ಶಾರುಖ್, ದೇಶ-ವಿದೇಶದಾದ್ಯಂತ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಂದು ಭಾರತೀಯ ಚಿತ್ರರಂಗದ ಖ್ಯಾತ ನಟನಾಗಿ ಬೆಳೆದು ನಿಂತಿರುವ ಶಾರುಖ್ ಅಭಿಮಾನಿಗಳಿಗೆ ವಿಶೇಷವಾಗಿ ಧನ್ಯವಾದಗಳನ್ನು ಹೇಳಿದ್ದಾರೆ.
27 ವರ್ಷದ ಹಳೆಯ ನೆನಪನ್ನು ಮೆಲಕು ಹಾಕುತ್ತ ಒಂದು ವೀಡಿಯೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಶಾರುಖ್ ಮೊದಲ ಬಾರಿಗೆ ಬಣ್ಣ ಹಚ್ಚಿದ 'ದಿವಾನ' ಚಿತ್ರದ ಬೈಕ್ ಅನ್ನು ಮತ್ತೆ ರೈಡ್ ಮಾಡಿ ಇಷ್ಟು ವರ್ಷಗಳ ಕಾಲ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ದಿವಾನ ಚಿತ್ರದ ಬೈಕ್ ಮೇಲೆ ಶಾರುಖ್ ಎಂಟ್ರಿ
"ಈ 27 ವರ್ಷದಲ್ಲಿ ನಿಮ್ಮನ್ನು ಸಾಕಷ್ಟು ರಂಜಿಸಿದ್ದೀನಿ. ಆದ್ರೆ ಕೆಲವು ಸಲ ಸೋತಿದ್ದೀನಿ. ಈ ಮೋಟರ್ ಸೈಕಲ್ ದಿವಾನ ಚಿತ್ರದಲ್ಲಿ ಬಳಸಿದ್ದೇನೆ. ದಿವಾನ ಚಿತ್ರಕ್ಕಾಗಿ ನನ್ನ ಸ್ನೇಹಿತರು ಎರಡು ಮೋಟರ್ ಸೈಕಲ್ ಕಳುಹಿಸಿದ್ದರು. ಈ ಎರಡು ಮೋಟರ್ ಸೈಕಲ್ ಅನ್ನು ದಿವಾನ ಸಿನಿಮಾದಲ್ಲಿ ಬಳಸಿದ್ದೀನಿ" ಎಂದು ಹೇಳುತ್ತ ಮತ್ತದೆ ಮೋಟರ್ ಸೈಕಲ್ ಸವಾರಿ ಮಾಡಿದ್ದಾರೆ ಶಾರುಖ್.

ಶಾರುಖ್ ಕೊನೆಯ ಸಿನಿಮಾ ಝೀರೋ
ಶಾರುಖ್ ಖಾನ್ 'ಝೀರೋ' ಚಿತ್ರದ ನಂತರ ಮತ್ತೆ ತೆರೆ ಬಂದಿಲ್ಲ. ಅಷ್ಟೆಯಲ್ಲ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿರುವ ಶಾರುಖ್ ಸದ್ಯ ಸಿನಿಮಾದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಇನ್ನು ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಪ್ಲಾನ್ ಕೂಡ ಮಾಡಿದ್ದಾರೆ ಶಾರುಖ್.

53ನೇ ವರ್ಷದಲ್ಲು ಶಾರುಖ್ ಚಿರಯುವಕ
53ನೇ ವಯಸ್ಸಿನಲ್ಲೂ ಚಿರ ಯುವಕನಂತೆ ಕಂಗೊಳಿಸುತ್ತ ಫಿಟ್ ಅಂಡ್ ಫೈನ್ ಆಗಿದ್ದಾರೆ. ಇಂದಿಗೂ ಯೂತ್ ಐಕಾನ್ ಆಗಿದ್ದಾರೆ. 53 ವರ್ಷಗಳಾದ್ರು ಅದೇ ಚಾರ್ಮ್ ಇದೆ. ಸದ್ಯ ಶಾರುಖ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಾಳನ್ನು ರಂಜಿಸುತ್ತ ಬಂದಿರುವ ಶಾರುಖ್ ಮುಂದಿನ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಿದ್ದಾರೆ ಎನ್ನುವುದು ಸಧ್ಯದಲ್ಲೇ ಗೊತ್ತಾಗಲಿದೆ.

'ನನ್ನ ಬಳಿ ಯಾವುದೆ ಸಿನಿಮಾವಿಲ್ಲ'
"ನನ್ನ ಬಳಿ ಸದ್ಯ ಯಾವುದೆ ಸಿನಿಮಾವಿಲ್ಲ. ಯಾವುದೆ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಸಾಮಾನ್ಯವಾಗಿ ಒಂದು ಸಿನಿಮಾ ಮುಗಿಯುತ್ತಿದ್ದಂತೆ ಮತ್ತೊಂದು ಸಿನಿಮಾ ಕೆಲಸಗಳ ತಯಾರಿಗಳು ಶುರುವಾಗಿರುತ್ತೆ. ಆದ್ರೆ ಈ ಬಾರಿ ನನ್ನ ಹೃದಯ ಒಪ್ಪಿಕೊಳ್ಳುತ್ತಿಲ್ಲ. ಮುಂದಿನ ಸಿನಿಮಾಗೆ ಸಮಯ ತೆಗೆದುಕೊಳ್ಳಬೇಕು. ಸಿನಿಮಾಗಳನ್ನು ನೋಡಬೇಕು, ಕಥೆಗಳನ್ನು ಕೇಳಬೇಕು, ಪುಸ್ತಕಗಳನ್ನು ಓದಬೇಕು, ಅಷ್ಟೆಯಲ್ಲದೆ ಕುಟುಂಬದ ಜೊತೆ ಕಾಲಕಳೆಯಲು ಹೆಚ್ಚು ಬಯಸುತ್ತೇನೆ" ಎಂದು ಶಾರುಖ್ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.