For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನದಲ್ಲಿ ನೆಲೆಸಿದ್ದ ಶಾರುಖ್ ಖಾನ್ ಸಹೋದರಿ ನಿಧನ

  |

  ಬಾಲಿವುಡ್ ಕಿಂಗ್ ಕಾನ್ ಶಾರುಖ್ ಖಾನ್ ಮನೆಯಲ್ಲಿ ದುಃಖ ಆವರಿಸಿದೆ. ಶಾರುಖ್ ಸೋದರ ಸಂಬಂಧಿ ನೂರ್ ಜಹಾನ್ ನಿನ್ನೆ ಮಂಗಳವಾರ ಮೃತಪಟ್ಟಿದ್ದಾರೆ. ದೀರ್ಘಕಾಲದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನೂರ್ ನಿನ್ನೆ ಪಾಕಿಸ್ತಾನದ ಪೇಶಾವರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

  ನೂರ್ ಶಾರುಖ್ ಅವರ ಸೋದರ ಸಂಬಂಧಿ. ಶಾರುಖ್ ತನ್ನ ಸೋದರಸಂಬಂಧಿ ನೂರ್ ಮನೆಗೆ ಅಂದರೆ ಪಾಕಿಸ್ತಾನದ ಪೇಶಾವರಕ್ಕೆ ಎರಡು ಬಾರಿ ಮಾತ್ರ ಭೇಟಿ ನೀಡಿದ್ದರಂತೆ. ಅನೇಕ ವರ್ಷಗಳ ಹಿಂದೆ ಶಾರುಖ್ ಪೋಷಕರ ಜೊತೆ ಹೋಗಿದ್ದರಂತೆ. ನೂರ್ ಜೊತೆ ಇರುವ ಶಾರುಖ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  'ನಾನು ಮುಸ್ಲಿಂ..ನನ್ನ ಪತ್ನಿ ಹಿಂದೂ..ನನ್ನ ಮಕ್ಕಳು ಹಿಂದೂಸ್ತಾನ್': ಶಾರುಖ್ ಖಾನ್'ನಾನು ಮುಸ್ಲಿಂ..ನನ್ನ ಪತ್ನಿ ಹಿಂದೂ..ನನ್ನ ಮಕ್ಕಳು ಹಿಂದೂಸ್ತಾನ್': ಶಾರುಖ್ ಖಾನ್

  ಅಂದ್ಹಾಗೆ ನೂರು ಪಾಕಿಸ್ತಾನದಲ್ಲಿ ರಾಜಕೀಯದಲ್ಲಿ ಸಕ್ರೀಯರಾಗಿದ್ದರು. 2018ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಾಂತೀಯ ವಿಧಾನಸಭೆಗೆ ನಾಮಪತ್ರ ಸಲ್ಲಿಸಿದ್ದರು. ಈ ಸಮಯದಲ್ಲಿ ಸುದ್ದಿಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಾಮಪತ್ರ ಹಿಂತೆಗೆದುಕೊಂಡಿದ್ದರು.

  ಶಾರುಖ್ ಕುಟುಂಬ ಈಗ ಪೇಶಾವರಕ್ಕೆ ಭೇಟಿ ನೀಡುತ್ತಾ ಎನ್ನುವ ಬಗ್ಗೆ ಯಾವುದೆ ಮಾಹಿತಿ ಬಹಿರಂಗವಾಗಿಲ್ಲ. ನೂರ್ ಇತ್ತೀಚಿಗೆ ಶಾರುಖ್ ಕುಟುಂಬದವರನ್ನು ಭೇಟಿ ಮಾಡಿರುವ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಆದರೆ ನೂರ್ ಕುಟುಂಬ ಶಾರುಖ್ ಕುಟುಂಬದವರ ಜೊತೆ ಸದಾ ಸಂಪರ್ಕದಲ್ಲಿ ಇದ್ದರು ಎಂದು ಹೇಳಲಾಗುತ್ತಿದೆ.

  English summary
  Bollywood Actor Shah Rukh Khan cousin Noor Jehan died in Pakistan. She has been battling cancer for some time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X