Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಾರೂಖ್ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಸಮಾಗಮ
ಕಿಂಗ್ ಖಾನ್ ಶಾರೂಖ್ ಇಂದು ತಮ್ಮ 52ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶಾರೂಖ್ ಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಮಧ್ಯರಾತ್ರಿಯಿಂದಲ್ಲೇ ಶಾರೂಖ್ ಹುಟ್ಟುಹಬ್ಬದ ಸಂಭ್ರಮ ಶುರುವಾಗಿದೆ. ರಾತ್ರಿ 12ಗೆ ಸರಿಯಾಗಿ ಕೇಕ್ ಕಟ್ ಮಾಡಿ ಶಾರೂಖ್ ತಮ್ಮ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ. ಅಲಿಭಾಗ್ ನಲ್ಲಿರುವ ಶಾರೂಖ್ ಫಾರ್ಮ್ ಹೌಸ್ ನಲ್ಲಿ ಹುಟ್ಟುಹಬ್ಬದ ಆಚರಣೆ ನಡೆದಿದೆ.
ಈ ವೇಳೆ ಶಾರೂಖ್ ಕುಟುಂಬ ಮತ್ತು ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ಅಲಿಯಾ ಭಟ್, ಮಲೈಕಾ ಅರೋರಾ, ನಿರ್ದೇಶಕಿ ಫರಾ ಖಾನ್ ಮತ್ತು ಕರಣ್ ಜೋಹರ್ ಭಾಗಿಯಾಗಿದ್ದರು.
ನಿರ್ದೇಶಕ ಕರಣ್ ಜೋಹರ್ ತಮ್ಮ ಇನ್ಸ್ ಟಾಗ್ರಾಮ್ ಖಾತೆಯಲ್ಲಿ ಶಾರೂಖ್ ಹುಟ್ಟುಹಬ್ಬದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ, ಟ್ವಿಟ್ಟರ್ ನಲ್ಲಿ ಸಚಿನ್ ತೆಂಡುಲ್ಕರ್ ಸೇರಿದಂತೆ ದೇಶದ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ. ಉಳಿದಂತೆ ಸಾವಿರಾರು ಅಭಿಮಾನಿಗಳು ಸಹ ಟ್ವಿಟ್ಟರ್ ನಲ್ಲಿ HBDayWorldsBiggestStar ಮತ್ತು HappyBirthdaySRK ಎಂಬ ಹ್ಯಾಷ್ ಟ್ಯಾಗ್ ಬಳಿಸಿ ಬಿ ಟೌನ್ ಬಾದ್ ಶಾ ಗೆ ವಿಶ್ ಮಾಡಿದ್ದಾರೆ.