For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ವೇಳೆ ತೀವ್ರವಾಗಿ ಗಾಯಗೊಂಡ ನಟ ಶಾಹಿದ್ ತುಟಿಗೆ 13 ಹೊಲಿಗೆ

  |

  ಬಾಲಿವುಡ್ ಹ್ಯಾಂಡ್ ಸಮ್ ನಟ ಶಾಹಿದ್ ಕಪೂರ್ ಚಿತ್ರೀಕರಣ ವೇಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಚಂಡೀಗಡದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಶಾಹಿದ್ ಮುಖಕ್ಕೆ ಟ್ಟಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಟಿಯ ಕೆಳಭಾಗಕ್ಕೆ ತಾವ್ರವಾಗಿ ಪೆಟ್ಟಾಗಿದ್ದು 13 ಹೊಲಿಗೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

  ಸದ್ಯ ಶಾಹಿದ್ ಚೇತರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮುಂಬೈನಲ್ಲಿದ್ದ ಪತ್ನಿ ಮೀರಾ ರಜಪೂತ್ ಪತಿಯನ್ನು ನೋಡಲು ಚಂಡೀಗಡಗೆ ಧಾವಿಸಿದ್ದು, ಪತಿಯ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾರೆ.

  ಹಿಂದಿ ಜೆರ್ಸಿ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ? ಕಾರಣ ಬಹಿರಂಗ ಪಡಿಸಿದ ರಶ್ಮಿಕಾಹಿಂದಿ ಜೆರ್ಸಿ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ? ಕಾರಣ ಬಹಿರಂಗ ಪಡಿಸಿದ ರಶ್ಮಿಕಾ

  ಅಂದ್ಹಾಗೆ ಶಾಹಿದ್ ಸದ್ಯ ತೆಲುಗಿನ ಸೂಪರ್ ಹಿಟ್ ಜರ್ಸಿ ಸಿನಿಮಾದ ರಿಮೇಕ್ ನಲ್ಲಿ ಅಭಿನಯಿಸುತ್ತಿದ್ದಾರೆ. ಇಂದು ಮಧ್ಯಾಹ್ನದವರೆಗೂ ಯಶಸ್ವಿಯಾಗಿ ಚಿತ್ರೀಕರಣ ಮಾಡಿದ್ದ ಶಾಹಿದ್, ಸಂಜೆ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದೆ. ಕ್ರಿಕೆಟ್ ಭಾಗದ ಚಿತ್ರೀಕರಣ ಮಾಡಲಾಗುತ್ತಿತ್ತು. ಕೆಲವು ದೃಶ್ಯಗಳನ್ನು ಇಂದು ಸೆರೆಹಿಡಿಯಲಾಗಿತ್ತು. ಪಿಚ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ಶಾಹಿದ್ ಗೆ ಎದುರಿನಿಂದ ವೇಗವಾಗಿ ಬಂದ ಚೆಂಡು ಮುಖಕ್ಕೆ ಬಡಿದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಶಾಹಿದ್ ಸ್ಥಳದಲ್ಲಿಯೆ ಕುಸಿದು ಬಿದ್ದಿದ್ದಾರೆ.

  ನಂತರ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಟಿಗೆ 13 ಹೊಲಿಗೆಗಳನ್ನು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಶಾಹಿದ್ ಸದ್ಯ ಚೇತರಿಕೊಳ್ಳುತ್ತಿದ್ದು ಇನ್ನಷ್ಟು ದಿನಗಳ ಕಾಲ ವಿಶ್ರಾಂತಿಯಲ್ಲಿ ಇರಬೇಕೆಂದು ವೈದ್ಯರು ತಿಳಿಸಿದ್ದಾರೆ.

  ಜರ್ಸಿ ಹಿಂದಿ ರಿಮೇಕ್ ಚಿತ್ರವನ್ನು ಮುಂದಿನ 50 ದಿನಗಳ ಕಾಲ ನಿರಂತರ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿತ್ತು ಚಿತ್ರತಂಡ. ಆದರೀಗ ಶಾಹಿದ್ ಗಾಯಗೊಂಡ ಪರಿಣಾಮ ಚಿತ್ರೀಕರಣ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.

  English summary
  Bollywood Actor Shahid Kapoor injured in jersey shooting set in Chandigarh he gets 13 stitches.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X