ಶಾಹಿದ್ ಕಪೂರ್ ತುಟಿಗೆ 13 ಹೊಲಿಗೆ: ಮುಖ ಮುಚ್ಚಿಕೊಂಡು ಬಂದ ನಟ
ಚಿತ್ರೀಕರಣ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬಾಲಿವುಡ್ ನಟ ಶಾಹಿದ್ ಕಪೂರ್ ತುಟಿಗೆ 13 ಹೊಲಿಗೆ ಹಾಕಲಾಗಿದೆ. ಚಂಡೀಗಡದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಶಾಹಿದ್ ಮುಖಕ್ಕೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಶಾಹಿದ್ ಚಂಡೀಗಡದಿಂದ ಮುಂಬೈಗೆ ವಾಪಸ್ ಆಗಿದ್ದಾರೆ. ತಲೆಗೆ ಪೆಟ್ಟಾಗಿದೆ ಎಂದು ಹೇಳಲಾಗಿತ್ತು. ಆದರೆ ಶಾಹಿದ್ ತುಟಿಗೆ ಪೆಟ್ಟಾಗಿದ್ದು ಕೆಳತುಟಿಗೆ ಹೊಲಿಗೆ 13 ಹೊಲಿಗೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಇಂದು ಚಂಡೀಗಡದಿಂದ ಮುಂಬೈಗೆ ವಾಪಸ್ ಆದ ಶಾಹಿದ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದಾರೆ. ಏರ್ ಪೊರ್ಟ್ ನಿಂದ ಹೊರಬರುವ ವೇಳೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು ಶಾಹಿದ್ ಮುಖ ಮುಚ್ಚಿಕೊಂಡ ಕಾರಣ ಪೆಟ್ಟಾದ ಭಾಗ ಕಾಣಿಸುತ್ತಿಲ್ಲ. ಶಾಹಿದ್ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂದು ಏರ್ ಪೋರ್ಟ್ ನಿಂದ ಹೊರಬರುವ ವೇಳೆ ಶಾಹಿದ್ ನೋಡಿ ಅಭಿಮಾನಿಗಳು ಸಮಾಧಾನ ಪಟ್ಟಿದ್ದಾರೆ.
ಶಾಹಿದ್ ಜೊತೆ ಪತ್ನಿ ಮೀರಾ ರಾಜಪೂತ್ ಕೂಡ ಜೊತೆಯಲ್ಲಿದ್ದಾರೆ. ಅಲ್ಲದೆ ಶಾಹಿದ್ ಶಾಹಿದ್ ಕಪೂರ್ ತೆಲುಗಿನ ಸೂಪರ್ ಹಿಟ್ ಜರ್ಸಿ ಸಿನಿಮಾದ ರಿಮೇಕ್ ನಲ್ಲಿ ಅಭಿನಯಿಸುತ್ತಿದ್ದಾರೆ. ಇಂದು ಮಧ್ಯಾಹ್ನದವರೆಗೂ ಯಶಸ್ವಿಯಾಗಿ ಚಿತ್ರೀಕರಣ ಮಾಡಿದ್ದ ಶಾಹಿದ್, ಜನವರಿ 10ರಂದು ಚಿತ್ರೀಕರಣದ ವೇಳೆ ಗಾಯಗೊಂಡಿದ್ದರು. ಚಿತ್ರದ ಕ್ರಿಕೆಟ್ ಭಾಗ ಚಿತ್ರೀಕರಣ ಮಾಡಲಾಗುತ್ತಿತ್ತು, ಪಿಚ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ಶಾಹಿದ್ ಗೆ ಎದುರಿನಿಂದ ವೇಗವಾಗಿ ಬಂದ ಚೆಂಡು ಮುಖಕ್ಕೆ ಬಡಿದ ಪರಿಣಾಮ ಶಾಹಿದ್ ತುಟಿ ಸೀಳಿ ಹೋಗಿದೆ.

ಜರ್ಸಿ ಹಿಂದಿ ರಿಮೇಕ್ ಚಿತ್ರವನ್ನು ಮುಂದಿನ 50 ದಿನಗಳ ಕಾಲ ನಿರಂತರ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿತ್ತು ಚಿತ್ರತಂಡ. ಆದರೀಗ ಶಾಹಿದ್ ಗಾಯಗೊಂಡ ಪರಿಣಾಮ ಚಿತ್ರೀಕರಣ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ. ಗೌತಮ್ ತಿನ್ನುರಿ ನಿರ್ದೇಶದಲ್ಲಿ ಮೂಡಿ ಬರುತ್ತಿರುವ ಸಿನಿಮಾ.


Click it and Unblock the Notifications











