»   » 'ಕಿಂಗ್ ಖಾನ್' ಶಾರುಖ್ ಫೋನ್ ನಂಬರ್ ನಿಮ್ಗೊತ್ತಾ.? ಗೊತ್ತಿಲ್ಲ ಅಂದ್ರೆ ಇಲ್ಲಿ ನೋಡಿ...

'ಕಿಂಗ್ ಖಾನ್' ಶಾರುಖ್ ಫೋನ್ ನಂಬರ್ ನಿಮ್ಗೊತ್ತಾ.? ಗೊತ್ತಿಲ್ಲ ಅಂದ್ರೆ ಇಲ್ಲಿ ನೋಡಿ...

Posted By:
Subscribe to Filmibeat Kannada

ತಮ್ಮ ಅಚ್ಚುಮೆಚ್ಚಿನ ನಟ-ನಟಿಯರ ಜೊತೆ ಮಾತನಾಡುವ ಕನಸು ಯಾರಿಗ್ತಾನೆ ಇರಲ್ಲ ಹೇಳಿ... ತಮ್ಮ ಫೇವರಿಟ್ ನಟ-ನಟಿಯರನ್ನ ಒಮ್ಮೆಯಾದರೂ ಮೀಟ್ ಮಾಡಬೇಕು, ಅವರೊಂದಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂಬ ಆಸೆ ಅನೇಕರಿಗೆ ಇದ್ದೇ ಇರುತ್ತೆ. ಆದರೆ ಅದೆಷ್ಟು ಮಂದಿಗೆ ಅಂತಹ ಅವಕಾಶ ಸಿಗುತ್ತೆ.?

ಅದ್ರಲ್ಲೂ ಬಾಲಿವುಡ್ ನಟರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಕಿಂಗ್ ಖಾನ್ ಶಾರುಖ್, ಸಲ್ಮಾನ್ ಖಾನ್, ಆಮೀರ್ ಖಾನ್, ಹೃತಿಕ್ ರೋಷನ್ ರವರನ್ನ ಜೀವನದಲ್ಲಿ ಒಂದು ಬಾರಿಯಾದರೂ ನೋಡಬೇಕು ಎಂಬ ಬಯಕೆ ಹಲವರಿಗೆ ಇರುವುದು ಸಹಜ. ಆದರೆ ಅವರೆಲ್ಲ ಕೈಗೆ ಸಿಗಬೇಕಲ್ವಾ.?

ಕೈಗೆ ಸಿಗುವುದು ಬೇಡ... ಒಮ್ಮೆ ಅವರ ಜೊತೆ ಮಾತನಾಡಬೇಕು ಎಂದುಕೊಂಡಿದ್ದವರಿಗೆ ನಟ ಶಾರುಖ್ ಖಾನ್ 'ಅಸ್ತು' ಎಂದಿದ್ದಾರೆ. ಮುಂದೆ ಓದಿರಿ...

ಫೋನ್ ನಂಬರ್ ಬಹಿರಂಗ ಪಡಿಸಿದ ಶಾರುಖ್

ತಿಂಗಳಿಗೆ ಒಮ್ಮೆ ಫೋನ್ ನಂಬರ್ ಬದಲಿಸುವ ನಟ-ನಟಿಯರು, ತಮ್ಮ ಪರ್ಸನಲ್ ಫೋನ್ ನಂಬರ್ ನ ಇತರರ ಜೊತೆಗೆ ಹಂಚಿಕೊಳ್ಳುವುದಂತೂ ಕನಸಿನ ಮಾತು.! ಹೀಗಿರುವಾಗ, ನಟ ಶಾರುಖ್ ಖಾನ್ ತಮ್ಮ ಫೋನ್ ನಂಬರ್ ನ ಬಹಿರಂಗ ಪಡಿಸಿದ್ದಾರೆ.

ಶಾರುಖ್ ಖಾನ್ ಫೋನ್ ನಂಬರ್ ಇದು...

ಶಾರುಖ್ ಖಾನ್ ರವರ ಫೋನ್ ನಂಬರ್ - 5559960321.

ಬಾಯ್ಬಿಟ್ಟಿದ್ದು ಸ್ವತಃ ಶಾರುಖ್ ಖಾನ್.!

''5559960321... ಇದೇ ನನ್ನ ಫೋನ್ ನಂಬರ್. ಮಧ್ಯ ರಾತ್ರಿ ಬಳಿಕ ಯಾವಾಗ ಬೇಕಾದರೂ ಫೋನ್ ಮಾಡಬಹುದು. ನಾನು ತಪ್ಪದೆ ಫೋನ್ ರಿಸೀವ್ ಮಾಡುತ್ತೇನೆ. ಒಂದು ವೇಳೆ ರಿಸೀವ್ ಮಾಡಲಿಲ್ಲ ಅಂದರೆ ಮೆಸೇಜ್ ಮಾಡಿ, ಇಮೋಜಿ ಮೂಲಕ ಪ್ರತಿಕ್ರಿಯೆ ನೀಡುತ್ತೇನೆ'' ಎಂದು ಹೇಳಿದ್ದಾರೆ ನಟ ಶಾರುಖ್ ಖಾನ್

ಗೂಗಲ್ ಸರ್ಚ್ ಆಧಾರದ ಮೇಲೆ ಉತ್ತರ.!

ಅಷ್ಟಕ್ಕೂ, ನಟ ಶಾರುಖ್ ಖಾನ್ ತಮ್ಮ ಫೋನ್ ನಂಬರ್ ನ ಬಹಿರಂಗ ಪಡಿಸಿದ್ದು ಸಂದರ್ಶನ ಒಂದರಲ್ಲಿ. ಶಾರುಖ್ ಖಾನ್ ವೈಯುಕ್ತಿಕ ವಿವರಗಳ ಬಗ್ಗೆ ತಿಳಿದುಕೊಳ್ಳಲು ಅನೇಕರು ಗೂಗಲ್ ನಲ್ಲಿ ತರಹೇವಾರಿ ರೀತಿಯಲ್ಲಿ ಸರ್ಚ್ ಮಾಡಿರುತ್ತಾರೆ. ಆದರೆ ಉತ್ತರ ಸಿಕ್ಕಿರುವುದಿಲ್ಲ. ಅಂತಹ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು, ಶಾರುಖ್ ಉತ್ತರ ನೀಡಿದ್ದಾರೆ.

ಶಾರುಖ್ ಫೋನ್ ನಂಬರ್ ತಿಳಿಯಲು ಕೋಟ್ಯಾಂತರ ಜನರು ಸರ್ಚ್ ಮಾಡಿದ್ದಾರೆ.!

ಶಾರುಖ್ ಖಾನ್ ರವರ ಫೋನ್ ನಂಬರ್ ತಿಳಿಯಲು ಕೋಟ್ಯಾಂತರ ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಆದರೆ ಯಾರಿಗೂ ಉತ್ತರ ಸಿಕ್ಕಿರಲಿಲ್ಲ. ಅಂಥವರಿಗೆಲ್ಲರಿಗೂ ಸಂದರ್ಶನದ ಮೂಲಕ ಶಾರುಖ್ ಖಾನ್ ಉತ್ತರ ನೀಡಿದ್ದಾರೆ.

ಶಾರುಖ್ ಖಾನ್ ಗೆ ಫೋನ್ ಮಾಡ್ತೀರಾ.?

ಸಂದರ್ಶನದಲ್ಲಿ ಶಾರುಖ್ ಹೇಳಿರುವ ಪ್ರಕಾರ, ನಾವು ನಿಮ್ಮ ಮುಂದೆ ಅವರ ಫೋನ್ ನಂಬರ್ ಇಟ್ಟಿದ್ದೇವೆ. ಅವರಿಗೆ ಫೋನ್ ಮಾಡಿ ಮಾತನಾಡುವುದು ಬಿಡುವುದು ನಿಮಗೆ ಬಿಟ್ಟಿದ್ದು.!

ವಿಡಿಯೋ ನೋಡಿ...

ತಮ್ಮ ಫೋನ್ ನಂಬರ್ ನ ಶಾರುಖ್ ಖಾನ್ ಬಾಯ್ಬಿಟ್ಟಿರುವ ವಿಡಿಯೋ ಇಲ್ಲಿದೆ. ಈ ಲಿಂಕ್ ಕ್ಲಿಕ್ ಮಾಡಿ ನೋಡಿ...

English summary
5559960321 - This is Shahrukh Khan's phone number. You can call him anytime post midnight.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada