»   » ಫೋಟೋಗ್ರಾಫರ್ ಕಾಲಿನ ಮೇಲೆ ಶಾರುಖ್ ಖಾನ್ ಕಾರು ಹರಿದು ಗಾಯ

ಫೋಟೋಗ್ರಾಫರ್ ಕಾಲಿನ ಮೇಲೆ ಶಾರುಖ್ ಖಾನ್ ಕಾರು ಹರಿದು ಗಾಯ

Posted By:
Subscribe to Filmibeat Kannada

ನಿನ್ನೆ (ಮಾರ್ಚ್ 15) ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, 'ಡಿಯರ್ ಜಿಂದಗಿ' ನಟಿ ಆಲಿಯಾ ಭಟ್ ಜನ್ಮದಿನ ಸಂಭ್ರಮಾಚರಣೆಗೆ ಭೇಟಿ ನೀಡಿದ್ದ ವೇಳೆ, ಆಕಸ್ಮಿಕವಾಗಿ ಶಾರುಖ್ ಖಾನ್ ಕಾರು ಫೋಟೋಗ್ರಾಫರ್ ಕಾಲಿನ ಮೇಲೆ ಹರಿದಿದೆ.

ಆಲಿಯಾ ಭಟ್ ಹುಟ್ಟುಹಬ್ಬದ ಆಚರಣೆಯನ್ನು ತಮ್ಮ ಮನೆಯಲ್ಲಿ ಆಯೋಜಿಸಿದ್ದರು. ಈ ವೇಳೆ, ಅವರ ಮನೆಗೆ ಶಾರುಖ್ ಖಾನ್ ಆಗಮಿಸಿದ್ದ ವೇಳೆ ಹಲವು ಛಾಯಾಗ್ರಾಹಕರು ಅವರ ಕಾರು ಚಲಿಸುವ ವೇಳೆ ಫೋಟೋ ಕ್ಲಿಕ್ಕಿಸಲು ಪ್ರಯತ್ನಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಹೊಸ ಹುಡುಗನೊಬ್ಬ(ಫೋಟೋಗ್ರಾಫರ್) ಶಾರುಖ್ ಅವರನ್ನು ನೋಡುವ ಕುತೂಹಲದಲ್ಲಿ ಕಾರು ವೇಗವಾಗಿ ಚಲಿಸುತ್ತಿದ್ದರು ಹತ್ತಿರಕ್ಕೆ ಹೋದಾಗ ಅವನ ಕಾಲಿನ ಮೇಲೆ ಕಾರು ಹರಿದಿರುವ ಘಟನೆ ನಡೆದಿದೆ.

Bollywood Actor Shahrukh Khan’s Car Ran Over A Photographer’s Leg

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಶಾಕ್ ಆದ ಶಾರುಖ್ ಖಾನ್, ಕಾರಿನಿಂದ ಇಳಿದು ಬಂದು ಗಾಯಗೊಂಡ ಫೋಟೋಗ್ರಾಫರ್ ಅನ್ನು ಸಂತೈಸಿದ್ದಾರೆ. ಅಲ್ಲದೇ ಅಪಘಾತದ ಬಗ್ಗೆ ಹೆದರಬೇಡಿ, ಸಂಪೂರ್ಣ ಆರೈಕೆ ಹೊಣೆ ನನ್ನದು ಎಂದು ಶಾರುಖ್ ಖಾನ್ ಹೇಳಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಇಂಡಿಯಾ.ಕಾಂ ಗೆ ತಿಳಿಸಿದ್ದಾರೆ. ಶಾರುಖ್ ಖಾನ್ ಕಾರು ಅತೀ ವೇಗದಲ್ಲಿ ಚಲಿಸುತ್ತಿದ್ದರು, ಇದೊಂದು ಸಣ್ಣ ಘಟನೆ
ಬಿಟ್ಟರೆ ಯಾವುದೇ ದೊಡ್ಡ ಮಟ್ಟದ ಅಪಘಾತ ಮತ್ತು ಯಾರಿಗೂ ಘಾಯಗಳು ಸಂಭವಿಸಿಲ್ಲ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ತಿಳಿದುಬಂದಿದೆ.

English summary
Bollywood Actor Shahrukh Khan’s Car Ran Over A Photographer’s Leg. Here’s How He Handled The Situation!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada