ಕೊವಿಡ್​ ಲಸಿಕೆಯಿಂದನೇ ನನಗೆ ಹೃದಯಾಘಾತ ; ಅನುಮಾನ ವ್ಯಕ್ತಪಡಿಸಿದ ಶ್ರೇಯಸ್ ತಲ್ಪಡೆ..!

ಕೊವಿಡ್ ಲಸಿಕೆ ಸುತ್ತ ಮುತ್ತ ಚರ್ಚೆ ನಡೆಯುತ್ತಿದೆ. ಯಾಕೆಂದರೆ ಕೋವಿಶೀಲ್ಡ್ ಲಸಿಕೆ ಪಡೆದವರ ಮೇಲ ಅಡ್ಡಪರಿಣಾಮ ಉಂಟಾಗಲಿದೆ ಎಂದು ಕೊರೊನಾ ಔಷಧಗಳ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ ಇತ್ತೀಚೆಗೆ ಒಪ್ಪಿಕೊಂಡಿದೆ.ಈ ಲಸಿಕೆಯಿಂದ ರಕ್ತನಾಳಗಳಲ್ಲಿ ಬ್ಲಡ್​ಕ್ಲಾಟ್ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ಹೃದಯಾಘಾತ ಹೆಚ್ಚುವ ಸಾಧ್ಯತೆಗಳು ಇವೆ ಎನ್ನುವ ಎಚ್ಚರಿಕೆ ನೀಡಲಾಗಿದೆ.

ಆಸ್ಟ್ರಾಜೆನೆಕಾ ತನ್ನ ತಪ್ಪನ್ನು ಒಪ್ಪಿಕೊಂಡ ಬೆನ್ನಲ್ಲೇ ಕೊವಿಡ್ ಲಸಿಕೆ ಹಾಗೂ ಹೃದಯಘಾತಕ್ಕೆ ಸಂಬಂಧವಿದೆ ಎಂದು ಕೆಲವರು ಹೋಲಿಕೆ ಮಾಡುತ್ತಿದ್ದಾರೆ. ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ಆಕ್ಟರ್ ಶ್ರೇಯಸ್ ತಲ್ಪಡೆಗೂ ಇದೇ ಅನುಮಾನ ಈಗ ಕಾಡ್ತಿದೆ.

bollywood-actor-shreyas-talpade-says-his-heart-attack-could-be-a-side-effect-of-covid-19-vaccine

ಹೌದು, ಕಳೆದ ವರ್ಷ ಡಿಸೆಂಬರ್ 14ರಂದು ಹೃದಯಾಘಾತಕ್ಕೊಳಗಾಗಿ, ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಶ್ರೇಯಸ್ ತಲ್ಪಡೆ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ನಾನು ಧೂಮಪಾನ ಮಾಡುವುದಿಲ್ಲ. ರೆಗ್ಯುಲರ್​ ಆಗಿ ಮದ್ಯಪಾನ ಕೂಡ ಮಾಡಲ್ಲ. ತಿಂಗಳಿಗೆ ಒಮ್ಮೆ ಕುಡಿಯುತ್ತೇನೆ ಅಷ್ಟೇ. ತಂಬಾಕು ಸೇವಿಸಲ್ಲ. ನನ್ನ ಕೊಲೆಸ್ಟ್ರಾಲ್ ಪ್ರಮಾಣ ಸ್ವಲ್ಪ ಜಾಸ್ತಿ ಇತ್ತು ಎಂಬುದು ನಿಜ. ಆದರೆ ಈ ದಿನಗಳಲ್ಲಿ ಅದನ್ನು ನಾರ್ಮಲ್​ ಅಂತಾರೆ. ಅದಕ್ಕೆ ನಾನು ಔಷದಿ ಪಡೆಯುತ್ತಿದ್ದೆ. ಅದು ಗಣನೀಯವಾಗಿ ಕಡಿಮೆ ಆಗಿದೆ. ಮಧುಮೇಹ ಇಲ್ಲ, ಅಧಿಕ ರಕ್ತದೊತ್ತಡ ಇಲ್ಲ. ಎಲ್ಲವೂ ಸರಿಯಾಗಿದೆ ಎಂದರೆ ಹೃದಯಾಘಾತಕ್ಕೆ ಕಾರಣ ಏನಿರಬಹುದು' ಎಂದು ಶ್ರೇಯಸ್​ ತಲ್ಪಡೆ ಪ್ರಶ್ನೆಯನ್ನು ಮಾಡಿದ್ದಾರೆ.

ಇನ್ನೂ ಕೊವಿಡ್​-19 ಲಸಿಕೆ ಪಡೆದ ನಂತರವೇ ನನಗೆ ಸುಸ್ತು ಶುರುವಾಯಿತು. ಅದರಲ್ಲಿ ಸ್ವಲ್ಪ ಪ್ರಮಾಣದ ಸತ್ಯ ಇರಬಹುದು. ಕೊವಿಡ್​ ಇರಬಹುದು ಅಥವಾ ಅದರ ಲಸಿಕೆ ಇರಬಹುದು. ಆ ಬಳಿಕವೇ ಇದೆಲ್ಲ ಶುರುವಾಗಿದ್ದು. ದುರದೃಷ್ಟಕರ ಸಂಗತಿ ಏನೆಂದರೆ, ನಾವು ದೇಹದ ಒಳಗೆ ಏನನ್ನು ತೆಗೆದುಕೊಂಡಿದ್ದೇವೆ ಎಂಬುದು ನಮಗೆ ತಿಳಿದಿಲ್ಲ.ನಾನು ಕಂಪನಿಗಳನ್ನು ನಂಬಿ ಎಲ್ಲರೂ ವಾಕ್ಸಿನ್‌ ತೆಗೆದುಕೊಂಡಂತೆ ತೆಗೆದುಕೊಂಡಿದ್ದೇ ಎಂದಿರುವ ಶ್ರೇಯಸ್ ಕೊವಿಡ್​-19 ಬರುವುದಕ್ಕೂ ಮುನ್ನ ನಾನು ಈ ರೀತಿಯ ಘಟನೆಗಳ ಬಗ್ಗೆ ಕೇಳಿರಲಿಲ್ಲ' ಎಂದಿದ್ದಾರೆ. ನಾನು ಸಿದ್ಧಾಂತವನ್ನು ನಿರಾಕರಿಸುವುದಿಲ್ಲ ಎಂದಿದ್ದಾರೆ ಶ್ರೇಯಸ್ ತಲ್ಪಡೆ.

bollywood-actor-shreyas-talpade-says-his-heart-attack-could-be-a-side-effect-of-covid-19-vaccine

ಕೊವಿಡ್ 19 ಲಸಿಕೆಯ ಸುತ್ತ ಮುತ್ತ ಇರುವ ಸತ್ಯ-ಮಿಥ್ಯವನ್ನ ತಿಳಿದುಕೊಳ್ಳುವ ಬಯಕೆಯನ್ನ ವ್ಯಕ್ತಪಡಿಸಿರುವ ಶ್ರೇಯಸ್ ತಲ್ಪಡೆ, ಲಸಿಕೆಯ ಕುರಿತು ಸೂಕ್ತವಾದ ಸಂಶೋಧನೆ ಆಗಬೇಕು ಎಂದು ಹೇಳಿದ್ದಾರೆ.ಕೋವಿಡ್‌ ಲಸಿಕೆಯಿಂದನೇ ನನಗೆ ಹೃದಯಾಘಾತವಾಯಿತು ಎಂದು ಹೇಳಲು, ಸಾಕಷ್ಟು ಪುರಾವೆ ನನ್ನ ಬಳಿ ಇರದ ಕಾರಣ ಯಾವುದೇ ಹೇಳಿಕೆಗಳನ್ನ ನೀಡುವುದರಲ್ಲಿ ಅರ್ಥ ಇಲ್ಲ ಎಂದು ಕೂಡ ಶ್ರೇಯಸ್ ತಲ್ಪಡೆ ಹೇಳಿದ್ದಾರೆ

ಶ್ರೇಯಸ್ ಅವರ ಈ ಹೇಳಿಕೆಯಿಂದ ಮತ್ತು ಅಭಿಪ್ರಾಯದಿಂದ ಕೋವಿಶೀಲ್ಡ್ ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕಾವೇರಿದೆ. ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಕೋವಿಶೀಲ್ಡ್ ಲಸಿಕೆಯೇ ಕಾರಣ ಅನ್ನುವ ಮಾತು ಕೂಡ ವ್ಯಾಪಕವಾಗಿ ಕೇಳಿ ಬರುತ್ತಿದೆ.

More from Filmibeat

English summary
Shreyas Talpade, known for his role in Golmaal Again, discussed the potential connection between his cardiac arrest last year and the COVID-19 vaccine in a recent interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X