61 ಗಂಟೆಗಳ ಕಾಲ ಸೋನುಸೂದ್ ವಾಟ್ಸಪ್ ಬ್ಲಾಕ್; ಎಷ್ಟು ಸಾವಿರ ಮೆಸೇಜ್ ಬಂದಿತ್ತು?

ಬಾಲಿವುಡ್ ನಟ ಸೋನು ಸೂದ್ ತಮ್ಮ ಸಾಮಾಜಿಕ ಸೇವೆಯಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಗುರ್ತಿಸಿಕೊಂಡಿದ್ದಾರೆ. ಕೋವಿಡ್ ಹಾವಳಿ ಸಮಯದಲ್ಲಿ ಸೋನು ಸಹಾಯವನ್ನು ಮರೆಯೋಕೆ ಸಾಧ್ಯವಿಲ್ಲ. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದರು.

ಪ್ಯಾಂಡಮಿಕ್ ಸಮಯದಲ್ಲಿ ಮಾತ್ರವಲ್ಲ. ಇವತ್ತಿಗೂ ಸೋನು ಸೂದ್ ಬಳಿ ಸಹಾಯ ಕೇಳಿ ಹೋಗುವವರ ಸಂಖ್ಯೆ ಕಮ್ಮಿ ಆಗಿಲ್ಲ. ಕಷ್ಟದಲ್ಲಿರುವವರಿಗೆ ಬೆಂಬಲ ನೀಡುವ ಖ್ಯಾತ ನಟ ಸೋನು ಸೂದ್, ತಮ್ಮ ಪರೋಪಕಾರಿ ಗುಣದಿಂದ ಅಪಾರ ಮನ್ನಣೆ ಗಳಿಸಿದ್ದಾರೆ. ಜನರಿಗೆ ಸಹಾಯ ಮಾಡುವ ಬಗ್ಗೆ ಫೋಟೋಗಳು, ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಅಲ್ಲದೇ ಜನರು ಸಹಾಯಕ್ಕಾಗಿ ಜನ ಮೆಸೇಜ್ ಮಾಡುತ್ತಿರುತ್ತಾರೆ. ಇಂತಿಪ್ಪ ಸೋನು ಸೂದ್ ವಾಟ್ಸಾಪ್ 61 ಗಂಟೆಗಳ ಕಾಲ ಬ್ಲಾಕ್ ಆಗಿತ್ತು.

Bollywood Actor Sonu Sood s WhatsApp account was blocked for 61 hours

ಸೋನು ಸೂದ್ ವಾಟ್ಸಾಪ್ ಹಲವು ಗಂಟೆಗಳ ಬಳಿಕ ಮತ್ತೆ ಆಕ್ಸೆಸ್ ಸಿಕ್ಕಿದೆ. ತಮ್ಮ ವಾಟ್ಸಾಪ್ ಬ್ಲಾಕ್ ಆಗಿರುವ ಬಗ್ಗೆ ಸೋನು ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಪೋಸ್ಟ್ ಮಾಡಿ ತಿಳಿಸಿದ್ದರು. ವಾಟ್ಸಾಪ್ ಸ್ಥಗಿತಗೊಂಡಿದೆ ಎಂದು ಹೇಳಿದ್ದರು. 36 ಗಂಟೆಗಳ ವಾಟ್ಸಾಪ್ ಕೆಲಸ ಮಾಡುತ್ತಿಲ್ಲ, ತೊಂದರೆ ಇರುವವರೆಲ್ಲ ವಾಟ್ಸಾಪ್‌ ಮೂಲಕ ಸಹಾಯ ಕೇಳುತ್ತಿದ್ದರು. ಆದರೆ ಈಗ ವಾಟ್ಸಾಪ್ ವರ್ಕ್ ಮಾಡ್ತಿಲ್ಲ ಎಂದು ಬರೆದುಕೊಂಡಿದ್ದರು.

ದಿಢೀರ್ ಅಕೌಂಟ್ ಬ್ಲಾಕ್ ಆಗಿದೆ. ಕೂಡಲೇ ಸಮಸ್ಯೆ ಬಗೆ ಹರಿಸಿ ಎಂದು ಕೇಳಿಕೊಂಡಿದ್ದರು. ವಾಟ್ಸಾಪ್‌ಗೆ ಸಂಬಂಧಿಸಿದರವು ಪ್ರತಿಕ್ರಿಯಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಬರೀ 6 ಗಂಟೆಗಳಲ್ಲಿ 1000 ಮೆಸೇಜ್ ಬಂದಿದೆ ಎಂದು ಸೋನು ಸೂದ್ ತಿಳಿಸಿದ್ದಾರೆ. ಒಟ್ಟಾರೆ 60 ಗಂಟೆಗಳ ಬಳಿಕ 9 ಸಾವಿರಕ್ಕೂ ಅಧಿಕ ಓದದೇ ಉಳಿದ ಮೆಸೇಜ್‌ಗಳಿವೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಕೊರೋನಾ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರು ಅವರ ಊರುಗಳಿಗೆ ಕಳುಹಿಸಲು ಸೋನು ಸೂದ್ ಸ್ವಂತ ಹಣದಿಂದ ಬಸ್ ವ್ಯವಸ್ಥೆ ಮಾಡಿದ್ದರು. ಹೆಣ್ಣು ಮಕ್ಕಳನ್ನು ಹೊಲ ಉಳುಮೆ ಮಾಡಲು ಎತ್ತುಗಳಂತೆ ಬಳಸಿಕೊಳ್ಳುತ್ತಿದ್ದ ರೈತನಿಗೆ ಟ್ರ್ಯಾಕ್ಟರ್ ನೀಡಿ ಮಾದರಿ ಆಗಿದ್ದರು. ಸಿನಿಮಾಗಳಲ್ಲಿ ಖಳ ನಟನಾಗಿ ನಟಿಸುವ ಸೋನು ಸೂದ್ ನಿಜ ಜೀವನದಲ್ಲಿ ಹೀರೊ ಎನಿಸಿಕೊಂಡಿದ್ದಾರೆ.

ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸೋನು ಸೂದ್ ಈಗ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಬಹಳ ಜನಪ್ರಿಯತೆ ಪಡೆದಿದ್ದಾರೆ. ಕರೋನಾ ಮೊದಲ ಅಲೆಯಲ್ಲಿ ಮಾತ್ರವಲ್ಲದೇ ಎರಡನೇ ಅಲೆಯಲ್ಲೂ ಸಾಕಷ್ಟು ಜನರಿಗೆ ಸಹಾಯ ಮಾಡಿ ಸೋನು ಸೈ ಎನಿಸಿಕೊಂಡಿದ್ದರು. ಕಲಿಯುಗ ಕರ್ಣ ಎನ್ನುವ ಹೆಸರು ಪಡೆದಿದ್ದಾರೆ.

ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇದ್ದ ಸಂದರ್ಭದಲ್ಲಿ ಸ್ವಂತ ಹಣದಿಂದ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲು ಮುಂದೆ ಬಂದರು. ರಾಜಕೀಯ ನಾಯಕರು ಮತ್ತು ಕ್ರಿಕೆಟಿಗರೂ ಕೂಡ ಸೋನು ಸೂದ್ ಬಳಿ ಸಹಾಯಕ್ಕಾಗಿ ಕೈ ಚಾಚಿದ್ದರು. ಕೊರೋನದ ಎರಡನೇ ಅಲೆ ಸಮಯದಲ್ಲಿ ಸಾಕಷ್ಟು ಜನ ಆಕ್ಸಿಜನ್‌ಗಾಗಿ ಸೋನು ಸೂದ್ ಬಳಿ ಕೈ ಚಾಚುವಂತಾಯಿತು.

ಸಿನಿಮಾಗಳಲ್ಲಿ ನಟಿಸಿ ಕೋಟಿಗಟ್ಟಲೇ ಸಂಪಾದನೆ ಮಾಡುವುದರಿಂದ ಸಿಗದ ಸಂತೋಷ ಬಡವರ ಸೇವೆ ಮಾಡುವುದರಿಂದ ಮಾತ್ರ ಸಿಗುತ್ತದೆ ಎಂದು ಸೋನುಸೂದ್ ಹೇಳಿಕೊಂಡಿದ್ದರು. ಜನರಿಗೆ ಏನಾದರೂ ತೊಂದರೆ ಆದರೆ ತನಗೆ ಕರೆ ಮಾಡಿ ಸಹಾಯ ಪಡೆಯಲಿ ಎಂದಿದ್ದರು.

Bollywood Actor Sonu Sood s WhatsApp account was blocked for 61 hours

ಸಮಾಜ ಸೇವೆ ತಮ್ಮ ರಕ್ತದಲ್ಲಿದೆ ಎಂದು ಸೋನುಸೂದ್ ಹೇಳಿದ್ದರು. ತಮ್ಮ ತಾಯಿ ಪ್ರಾಧ್ಯಾಪಕಿಯಾಗಿದ್ದು, ಜೀವನದ ಎಲ್ಲಾ ಪಾಠಗಳನ್ನು ಆಕೆ ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ ಎಂದಿದ್ದರು. ಅದೇ ರೀತಿ ತಮ್ಮ ತಂದೆ ಸಮಾಜ ಸೇವಕರಾಗಿದ್ದು, ತಮ್ಮದೇ ಜಾಗದಲ್ಲಿ ಅನೇಕ ಶಾಲಾ-ಕಾಲೇಜು, ನಿರ್ಮಿಸಲಾಗಿದೆ. ಆದ್ದರಿಂದಲೇ ಸಮಾಜ ಸೇವೆ ನನ್ನ ರಕ್ತದಲ್ಲಿ ಇದೆ ಎಂದು ಸೋನು ವಿವರಿಸಿದ್ದರು.

More from Filmibeat

English summary
Actor Sonu Sood's WhatsApp unblocked after 61 hours, with 9483 unread messages
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X