ಬಲೂನ್ ಮಾರುವ ಬಡವರನ್ನು ಕರೆದು ಫೋಟೋ ಕೊಟ್ಟ ನಟ ಸುಶಾಂತ್
ಒಂದು ಕಾರ್ಯಕ್ರಮ.. ಅಲ್ಲಿ ಬಾಲಿವುಡ್ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರು ಭಾಗಿಯಾಗಿರುತ್ತಾರೆ. ಕೆಲವರು ಕಾರ್ಯಕ್ರಮ ಮುಗಿಸಿಕೊಂಡು ಹೊರ ಬರುತ್ತಿದ್ದರೆ, ಇನ್ನು ಕೆಲವರು ಕಾರ್ಯಕ್ರಮಕ್ಕೆ ಹೋಗುತ್ತಿರುತ್ತಾರೆ.
ಕಾರ್ಯಕ್ರಮಕ್ಕೆ ಹೋಗುವ ದಾರಿಯಲ್ಲಿ ಕೆಲವರು ಬಲೂನ್ ಮಾರುತ್ತಿರುತ್ತಾರೆ. ಒಬ್ಬ ಹೆಂಗಸು ಹಾಗೂ ಒಬ್ಬ ಪುರುಷ ಬಲೂನ್ ಮಾರುವುದನ್ನು ಮರೆತು ಸಿನಿಮಾ ನಟ ನಟಿಯರನ್ನು ನೋಡುತ್ತಿರುತ್ತಾರೆ. ಅವರಿಗೂ ನಟ ನಟಿಯರ ಜೊತೆಗೆ ಫೋಟೋ ತಗೆಸಿಕೊಳ್ಳುವ ಆಸೆ ಆಗುತ್ತದೆ.
ಯಾರೇ ಬಂದರೂ ಅವರ ಬಳಿ ಬಲೂನ್ ಹಿಡಿದು ಈ ಮುಗ್ದ ಜೀವಗಳು ಹೊಗುತ್ತಿರುತ್ತಾರೆ. ಆದರೆ, ಕೆಲವು ನಟಿಯರು ಅವರನ್ನು ನೋಡಿದರು ನೋಡದೆ ಇರುವ ಹಾಗೆ ಕಾರ್ ಹತ್ತಿ ಹೊರಟು ಹೋಗುತ್ತಾರೆ. ಪಕ್ಕದಲ್ಲಿ ಇದ್ದರೆ ಕ್ಯಾರೆ ಎನ್ನದೆ ಮುಖ ತಿರುಗಿಸುತ್ತಾರೆ.

ಆದರೆ, ಅದೇ ರೀತಿ ಕಾರ್ಯಕ್ರಮಕ್ಕೆ ಬಂದ ನಟ ಸುಶಾಂತ್ ಸಿಂಗ್ ರಜಪೂತ್ ಕಾರ್ ಇಳಿದ ಬಳಿಕವೇ ಬಲೂನ್ ಮಾಡುವವರನ್ನು ನೋಡಿ ಕೈ ಕುಲುಕಿದರು. ಅವರಿಗೆ ನಗುತ್ತ ಫೋಟೋ ನೀಡಿದರು. ಸುಶಾಂತ್ ಫೋಟೋಗೆ ಪ್ರೀತಿಯಿಂದ ಆ ಕಡೆಯಿಂದ ಬಲೂನ್ ಸಹ ಉಡುಗೊರೆಯಾಗಿ ಸಿಕ್ಕಿತು.
ಈ ದೃಶ್ಯ ನಿಜಕ್ಕೂ ನೋಡುಗರಿಗೆ ಖುಷಿ ನೀಡುತ್ತದೆ. ಸುಶಾಂತ್ ಅವರ ಸಿಹಿ ಮನಸ್ಸು ಇಷ್ಟ ಆಗುತ್ತದೆ. ಅಂದಹಾಗೆ, ಸುಶಾಂತ್ 'ಎಮ್ ಎಸ್ ಧೋನಿ' ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ವರ್ಷ ಮೂರು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.


Click it and Unblock the Notifications











