For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಬೆಕ್ಕನ್ನು ಕಳೆದುಕೊಂಡ ನಟ ಟೈಗರ್ ಶ್ರಾಫ್: ಭಾವುಕ ನುಡಿ

  |

  ಬಾಲಿವುಡ್ ನ ಖ್ಯಾತ ನಟ ಟೈಗರ್ ಶ್ರಾಫ್ ಪ್ರೀತಿಯ ಬೆಕ್ಕನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಸುಮಾರು 17 ವರ್ಷಗಳಿಂದ ಜೊತೆಯಲ್ಲಿದ್ದ ಪ್ರೀತಿಯ ಬೆಕ್ಕು 'ಜೆಡಿ' ಕಣ್ಮರೆಯಾದ ದುಃಖವನ್ನು ಟೈಗರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟೈಗರ್ ಜೆಡಿಯನ್ನು ಪ್ರೀತಿಯಿಂದ ಸಹೋದರ ಅಂತ ಕರೆಯುತ್ತಿದ್ದರು.

  ಸಹೋದರನ ಹಾಗೆ ಪ್ರೀತಿ ತೋರುತಿದ್ದ ಬೆಕ್ಕನ್ನು ಕಳೆದುಕೊಂಡ ನೋವನ್ನು ಇಡೀ ಕುಟುಂಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ದೇವರು ನಿನಗೆ ಒಳ್ಳೆಯದು ಮಾಡಲು ಸಹೋದರ. ಈ 17 ವರ್ಷದ ಪ್ರೀತಿ ಮತ್ತು ಸಂತೋಷಕ್ಕಾಗಿ ಧನ್ಯವಾದಗಳು. ನೀನು ಯಾವಾಗಲು ನಮ್ಮ ಜೊತೆ ಇರುತ್ತೀಯಾ. ಎಲ್ಲಿದ್ದರು ನೀನು ಸಂತೋಷವಾಗಿ, ಆರೋಗ್ಯವಾಗಿ ಇರು. ನಾನು ಬಂದು ನಿನ್ನ ಸೇರುವವರೆಗೂ ಆಟವಾಡುತ್ತಿರು. ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ" ಎಂದು ಬರೆದು ಕೊಂಡಿದ್ದಾರೆ.

  ಬಂಡೀಪುರದಲ್ಲಿ ಆನೆ ಮೇಲೆ ಗುಂಡು: ಕೆರಳಿದ ಪ್ರಾಣಿ ಪ್ರೇಮಿ ರಣದೀಪ್ ಹೂಡಾಬಂಡೀಪುರದಲ್ಲಿ ಆನೆ ಮೇಲೆ ಗುಂಡು: ಕೆರಳಿದ ಪ್ರಾಣಿ ಪ್ರೇಮಿ ರಣದೀಪ್ ಹೂಡಾ

  ಹೃದಯಸ್ಪರ್ಶಿ ಜೊತೆಗೆ ಪ್ರೀತಿಯ ಬಿಲ್ಲಿಯ ಫೋಟೋವನ್ನು ಶೇರ್ ಮಾಡಿದ್ದಾರೆ. ಟೈಗರ್ ಶ್ರಾಫ್ ಈ ಪೋಸ್ಟ್ ಮಾಡುತ್ತಿದ್ದಂತೆ ಬಾಲಿವುಡ್ ಸಾಕಷ್ಟು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ನಟಿ ದಿಶಾ ಪಟಾಣಿ, ಶಿಲ್ಪ ಶೆಟ್ಟಿ, ಜಾಕ್ವೆಲೀನ್ ಫರ್ನಾಂಡಿಸ್ ಸೇರಿದಂತೆ ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  ಟೈಗರ್ ಶ್ರಾಫ್ ಇತ್ತೀಚಿಗೆ ಬಾಗಿ-3 ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಪ್ರೇಕ್ಷಕರದಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವ ಬಾಗಿ-3 90 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರದಲ್ಲಿ ಟೈಗರ್ ಶ್ರಾಫ್ ಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ಕಾಣಿಸಿಕೊಂಡಿದ್ದಾರೆ.

  ಸಿನಿಮಾ ಪ್ರದರ್ಶನ ಕಾಣುತ್ತಿರುವಾಗಲೆ ಕೊರೊನಾ ವೈರಸ್ ಕಾರಣ ಸಿನಿಮಾಗೆ ದೊಡ್ಡ ಹೊಡೆದ ಬಿದ್ದಿದೆ. ಈಗಾಗಲೆ ಚಿತ್ರಮಂದಿಗಳು ಬಂದ್ ಆಗಿರುವ ಕಾರಣ ಸಿನಿಮಾ ಪ್ರದರ್ಶನ ಕೂಡ ರದ್ದಾಗಿದೆ. ಹಾಗಾಗಿ ಬಾಗಿ-3 ಕಲೆಕ್ಷನ್ ಮೇಲೆ ದೊಡ್ಡ ಹೊಡೆತ ಬಿದ್ದಿದೆ.

  English summary
  Bollywood Actor Tiger Shroff lost his pet cat JD. shroff heartfelt note after lost his cat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X