twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ ನಟ ವರುಣ್ ಧವನ್ ಚಿಕ್ಕಮ್ಮ ಕೊರೊನಾ ವೈರಸ್‌ಗೆ ಬಲಿ

    |

    ಅಮೆರಿಕದಲ್ಲಿ ನೆಲೆಸಿದ್ದ ಬಾಲಿವುಡ್ ನಟ ವರುಣ್ ಧವನ್ ಅವರ ಚಿಕ್ಕಮ್ಮ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಸುಮಾರು ಎಂಟು ವಾರಗಳಿಂದ ಅವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಎನ್ನಲಾಗಿದೆ.

    ನಟ ವರುಣ್ ಧವನ್ ಈ ದುಃಖಕರ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಚಿಕ್ಕಮ್ಮ ಜತೆಗಿನ ಫೋಟೊವನ್ನು ಹಂಚಿಕೊಂಡಿರುವ ಅವರು, 'ಲವ್ ಯೂ ಮಾಶಿ.. ರಿಪ್' ಎಂದು ಬರೆದಿದ್ದಾರೆ. ಅದರ ಜತೆಗೆ ಗಾಯತ್ರಿ ಮಂತ್ರವನ್ನೂ ಬರೆದುಕೊಂಡಿದ್ದಾರೆ.

    'ಮಹಾಭಾರತ'ದ 'ಇಂದ್ರ'ನಿಗೆ ಔಷಧ, ಅಗತ್ಯ ವಸ್ತುವಿಗೆ ಹಣವಿಲ್ಲದೆ ಪರದಾಟ'ಮಹಾಭಾರತ'ದ 'ಇಂದ್ರ'ನಿಗೆ ಔಷಧ, ಅಗತ್ಯ ವಸ್ತುವಿಗೆ ಹಣವಿಲ್ಲದೆ ಪರದಾಟ

    ಕೆಲವು ದಿನಗಳ ಹಿಂದೆ ವರುಣ್ ಧವನ್, ತಮ್ಮ ಸಂಬಂಧಿಯೊಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಬಂದಿದ್ದಾಗಿ ತಿಳಿಸಿದ್ದರು. 'ಅದೀಗ ನಮ್ಮ ಮನೆಗೆ ತೀರಾ ಹತ್ತಿರವಾಗಿಬಿಟ್ಟಿದೆ. ನಿಮಗೆ ಗೊತ್ತಿರುವವರೊಬ್ಬರಿಗೆ ಅದು ಆಗುವವರೆಗೂ ನೀವು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಅದರ ತೀಕ್ಷ್ಣತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ' ಎಂದು ತಿಳಿಸಿದ್ದಾರೆ.

    Bollywood Actor Varun Dhawans Aunt Passes Away

    ವರುಣ್ ಅವರ ಚಿಕ್ಕಮ್ಮನ ಸಾವಿಗೆ ಬಾಲಿವುಡ್‌ನ ತಾರೆಯರು ಸಂತಾಪ ವ್ಯಕ್ತಪಡಿಸಿದ್ದಾರೆ. ನಟಿಯರಾದ ದಿಯಾ ಮಿರ್ಜಾ, ಸೋಫಿ ಚೌಧರಿ, ಸೋನಲ್ ಚೌಹಾಣ್, ಸೋನಮ್ ಕಪೂರ್, ಮಲೈಕಾ ಕಪೂರ್, ನುಶ್ರತ್ ಬರೂಚಾ ಮುಂತಾದವರು ಆಘಾತ ವ್ಯಕ್ತಪಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

    ಮತ್ತಿಬ್ಬರು ಮನೆಗೆಲಸದವರಿಗೆ ಕೊರೊನಾ ಸೋಂಕು: ಜಾಹ್ನವಿ ಕಪೂರ್ ಮನೆಯಲ್ಲಿ ಆತಂಕಮತ್ತಿಬ್ಬರು ಮನೆಗೆಲಸದವರಿಗೆ ಕೊರೊನಾ ಸೋಂಕು: ಜಾಹ್ನವಿ ಕಪೂರ್ ಮನೆಯಲ್ಲಿ ಆತಂಕ

    'ಕೋವಿಡ್ ಎಷ್ಟು ಕ್ರೂರಿಯೆಂದರೆ, ಚಿಕ್ಕಮ್ಮನ ಮಗಳು ಪ್ರತಿದಿನ ಆಸ್ಪತ್ರೆಯ ಹೊರಗೆ ಕಾರ್‌ನಲ್ಲಿ ಕುಳಿತುಕೊಂಡು ಆಕೆಗಾಗಿ ಪ್ರಾರ್ಥಿಸುತ್ತಿದ್ದಳು. ಆದರೆ ಆಸ್ಪತ್ರೆಯ ಒಳಗೆ ಹೋಗಿ ಅಮ್ಮನನ್ನು ನೋಡಲು ಅವಕಾಶವಿರಲಿಲ್ಲ' ಎಂದು ವರುಣ್ ಸಂಬಂಧಿ, ನಿರ್ದೇಶಕ ಕುನಾಲ್ ಕೊಹ್ಲಿ ತಿಳಿಸಿದ್ದಾರೆ.

    English summary
    Bollywood actor Varun Dhawan has shared his aunt's death news.
    Sunday, May 24, 2020, 13:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X