ಇನ್ಸ್ಟಾಗ್ರಾಮ್ ನ ಒಂದು ಫೋಟೋಗೆ ಎಷ್ಟು ಕೋಟಿ ಪಡೆಯುತ್ತಾರೆ ಈ ಸ್ಟಾರ್ಸ್ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೇಗಿದೆ ಎನ್ನುವುದನ್ನು ಹೇಳಬೇಕಿಲ್ಲ ಬಿಡಿ. ಸಾಮಾಜಿಕ ಜಾಲತಾಣದಿಂದ ಉಪಯೋಗವೆಷ್ಟಿದೆಯೋ ದುರುಪಯೊಗವು ಅಷ್ಟೆ ಇದೆ. ಸಾಮಾಜಿಕ ಜಾಲತಾಣದಿಂದ ಲಾಭ ಪಡೆಯುವರು ಅನೇಕರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ ಬಳಕೆ ಈಗ ಹೆಚ್ಚಾಗುತ್ತಿದೆ.
ಸ್ಟಾರ್ ಕಲಾವಿದರು ಹೆಚ್ಚಾಗಿ ಇನ್ಸ್ಟಾಗ್ರಾಮ್ ಬಳಸುತ್ತಿದ್ದು, ಆಗಾಗ ಫೋಟೋಗಳನ್ನು ಹಾಕುತ್ತಿದ್ದಾರೆ. ಆದರೆ ಸ್ಟಾರ್ ಕಲಾವಿದರು ಸುಮ್ಮನೆ ಫೋಟೋಗಳನ್ನು ಅಪ್ ಲೋಡ್ ಮಾಡುವುದಿಲ್ಲ. ಒಂದೊಂದು ಫೋಟೋಗೂ ಕೋಟಿ ಕೊಟಿ ಪಡೆಯುತ್ತಾರೆ. ಸ್ಟಾರ್ ಗಳಿಗೆ ಇನ್ಸ್ಟಾಗ್ರಾಮ್ ಕೂಡ ಗಳಿಕೆಯ ಒಂದು ಮಾರ್ಗವಾಗಿದೆ.
ಈ ವರ್ಷ ಒಂದು ಇನ್ಸ್ಟಾಗ್ರಾಮ್ ಫೋಟೋಗೆ ಅತಿ ಹೆಚ್ಚು ಚಾರ್ಜ್ ಮಾಡಿದ ನಟಿಯ ಲಿಸ್ಟ್ ಇಲ್ಲಿದೆ. ಒಂದು ಇನ್ಸ್ಟಾಗ್ರಾಮ್ ಫೋಟೋಗೆ ಅತೀ ಹೆಚ್ಚು ಪಡೆದಿರುವ ನಟಿಯ ಲಿಸ್ಟ್ ನಲ್ಲಿ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನದಲ್ಲಿ ಇದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 40 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊೆಂದಿರುವ ಪ್ರಿಯಾಂಕಾ ಒಂದು ಫೋಟೋ ಗೆ 1.87 ಕೋಟಿ ರೂಪಾಯಿ ಪಡೆಯುತ್ತಾರಂತೆ.

ಇನ್ನು ಈ ವಿಚಾರದಲ್ಲಿ ಬಾಲಿವುಡ್ ಬಿಗ್ ಅಮಿತಾಬ್ ಬಚ್ಚನ್ ಏನು ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ನಟ ಅಮಿತಾಬ್. ಹೆಚ್ಚು ಚಾರ್ಜ್ ಮಾಡುವ ಲಿಸ್ಟ್ ನಲ್ಲಿ ಬಿಗ್ ಬಿ ಕೂಡ ಇದ್ದಾರೆ. ಬಿಗ್ ಬಿ ಒಂದು ಫೋಟೋಗೆ 50 ಲಕ್ಷ ಪಡೆಯುತ್ತಾರಂತೆ. ಇನ್ನು ನಟಿ ಅಲಿಯಾ ಭಟ್ ಕೂಡ ಕೋಟಿ ಪಡೆಯುವ ಸಾಲಿನಲ್ಲಿ ಇದ್ದಾರೆ.
ಅಲಿಯಾ ಭಟ್ ಒಂದು ಪೋಸ್ಟ್ ಗೆ ಒಂದು ಕೋಟಿ ಪಡೆಯುತ್ತಿದ್ದಾರಂತೆ. ಇನ್ನು ಕಿಂಗ್ ಖಾನ್ ಶಾರುಖ್ ಖಾನ್ ಕೂಡ ಒಂದು ಕೋಟಿ ಪಡೆಯುತ್ತಾರೆ. ಶಾಹಿದ್ ಕಪೂರ್ 30 ಲಕ್ಷ ಪಡೆಯುತ್ತಾರೆ. ಬಾಲಿವುಡ್ ನ ಸಾಕಷ್ಟು ಕಲಾವಿದರಿಗೆ ಇನ್ಸ್ಟಾಗ್ರಾಮ್ ಕೂಡ ಗಳಿಕೆಯ ಒಂದು ದೊಡ್ಡ ಮೂಲವಾಗಿದೆ.


Click it and Unblock the Notifications











