»   » ವಿನೋದ್ ಖನ್ನಾ ಅಗಲಿಕೆಗೆ ಕಂಬಿನಿ ಮಿಡಿದ ಬಾಲಿವುಡ್ ಮತ್ತು ಕ್ರಿಕೆಟಿಗರು

ವಿನೋದ್ ಖನ್ನಾ ಅಗಲಿಕೆಗೆ ಕಂಬಿನಿ ಮಿಡಿದ ಬಾಲಿವುಡ್ ಮತ್ತು ಕ್ರಿಕೆಟಿಗರು

Posted By:
Subscribe to Filmibeat Kannada

ಬಾಲಿವುಡ್ ನ ಹಿರಿಯ ನಟ ಮತ್ತು ನಿರ್ಮಾಪಕ ವಿನೋದ್ ಖನ್ನಾ (70) ಇಂದು(ಏಪ್ರಿಲ್ 27) ವಿಧಿವಶರಾಗಿದ್ದು, ಬಾಲಿವುಡ್ ಸಿನಿ ಅಂಗಳ ದುಃಖದ ಮಡುವಿನಲ್ಲಿ ತೇಲುವಂತೆ ಮಾಡಿದೆ. ಖಳನಟನಾಗಿ ಮತ್ತು ನಾಯಕ ನಟನಾಗಿ ಅಭಿನಯಿಸಿ ಸಿನಿ ಪ್ರಿಯರ ಮನದಲ್ಲಿ ಅಚ್ಚಳಿದಿದ್ದ ವಿನೋದ್ ಖನ್ನಾ ಅಗಲಿಕೆ ಇಂದು ಅಭಿಮಾನಿಗಳ ಮನಕಲಕಿದೆ.[ಬಾಲಿವುಡ್ ಮೇರು ನಟ ವಿನೋದ್ ಖನ್ನಾ ಹೆಜ್ಜೆ ಗುರುತು]

ಇಂದು ಅವರ ನಿಧನದಿಂದ ಬಾಲಿವುಡ್ ಚಿತ್ರರಂಗ ಮಾತ್ರವಲ್ಲದೇ ದೇಶದ ಗಣ್ಯರು ಸಹ ದುಃಖದ ಮಡುವಿನಲ್ಲಿದ್ದು ಅವರಿಗೆ ಸಂತಾಪ ಸೂಚಿಸಿದ್ದಾರೆ. ಹಲವರು ವಿನೋದ್ ಖನ್ನಾ ಅವರ ಸ್ಮರಣೆಯಲ್ಲಿ ಅವರ ನಿಧನಕ್ಕೆ ಕಂಬನಿ ಮಿಡಿದು ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿರಿ...

ವಿರೇಂದ್ರ ಸೆಹ್ವಾಗ್

ಕ್ರಿಕೆಟ್ ದಿಗ್ಗಜ ವಿರೇಂದ್ರ ಸೆಹ್ವಾಗ್ ರವರು ವಿನೋದ್ ಖನ್ನಾ ರವರು ವಿಧಿವಶರಾಗಿರುವುದಕ್ಕೆ ದುಃಖ ವ್ಯಕ್ತಪಡಿಸಿದ್ದು 'ಬಾಲಿವುಡ್ ಚಿತ್ರರಂಗದ ಅತ್ಯಾಕರ್ಷಕ ಮೇರು ನಟ ವಿನೋದ್ ಖನ್ನಾ ಜಿ ನಮ್ಮನ್ನು ಅಗಲಿದ್ದಾರೆ, ಹೃದಯಪೂರಕ ಸಂತಾಪಗಳು. ಓಂ ಶಾಂತಿ' ಎಂದು ಟ್ವೀಟ್ ಮಾಡಿದ್ದಾರೆ.

ಅನಿಲ್ ಕಂಬ್ಳೆ

ಕ್ರಿಕೆಟ್ ಲೋಕದ ಮತ್ತೊಬ್ಬ ತಾರೆ ಅನಿಲ್ ಕುಂಬ್ಳೆ ರವರು ವಿನೋದ್ ಖನ್ನಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರನ್ನು ಸ್ಮರಿಸಿ 'ಪ್ರಖ್ಯಾತ ಕಲಾವಿದರಾದ ವಿನೋದ್ ಖನ್ನಾ ಅವರು ನಮ್ಮನ್ನು ಅಗಲಿದ್ದಾರೆ. ಇವರು ಬಾಲಿವುಡ್ ನ ಅತ್ಯುತ್ತಮ ನಟರಲ್ಲಿ ಒಬ್ಬರು ಎಂದು ಸದಾ ಸಿನಿ ಪ್ರಿಯರಿಂದ ನೆನಪಿಸಿಕೊಳ್ಳುತ್ತಾರೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

ಶೋಭ ಕರಂದ್ಲಾಜೆ

ಬಿಜೆಪಿ ಸಂಸದೆ ಶೋಭ ಕರಂದ್ಲಾಜೆ ಅವರು ಲೆಜೆಂಡರಿ ಹಿರಿಯ ನಟ ಮತ್ತು ಲೋಕಸಭೆ ಎಂಪಿ ವಿನೋದ್ ಖನ್ನಾ ರವರು ಇಹಲೋಕ ತ್ಯಜಿಸಿರುವ ವಿಷಯ ಕೇಳಿ ದುಃಖವಾಗಿದೆ ಎಂದು ಹೇಳಿ ಮನಪೂರ್ವಕ ಸಂತಾಪಗಳನ್ನು ಸೂಚಿಸಿದ್ದಾರೆ.

ಅರ್ಜುನ್ ರಾಮ್ ಪಾಲ್

ಬಾಲಿವುಡ್ ನಟ ಹಾಗೂ ನಿರ್ಮಾಪಕ ಅರ್ಜುನ್ ರಾಮ್ ಪಾಲ್ ರವರು "ಬಾಲಿವುಡ್ ಚಿತ್ರರಂಗಕ್ಕೆ ಇದು ಹೃದಯವಿದ್ರಾವಕ ಸುದ್ದಿ. ಹಿಂದಿ ಚಿತ್ರರಂಗ ಇಂದು ಲೆಜೆಂಡ್ ಮತ್ತು ಅತಿ ಸುಂದರವಾದ, ಅತ್ಯಾಕರ್ಷಕ ಮತ್ತು ಅದ್ಭುತ ಸ್ಟೈಲಿಶ್ ಆಕ್ಟರ್ ವಿನೋದ್ ಖನ್ನಾ ರವರನ್ನು ಕಳೆದು ಕೊಂಡಿದೆ. ತುಂಬಾ ದುಃಖವಾಗುತ್ತಿದೆ' ಎಂದು ವಿನೋದ್ ಖನ್ನಾ ತಮ್ಮ ಜೊತೆಗಿರುವ ಫೋಟೋ ಸಹಿತ ಟ್ವೀಟಿಸಿದ್ದಾರೆ.

ನಾನಾ ಪಾಟೇಕರ್

ಹಿಂದಿ ಮತ್ತು ಮರಾಠಿ ಫಿಲ್ಮ್ ಮೇಕರ್ ನಾನಾ ಪಾಟೇಕರ್ ರವರು ವಿನೋದ್ ಖನ್ನಾ ನಿಧನಕ್ಕೆ ಸಂತಾಪ ಸೂಚಿಸಿದ್ದು 'ಸೂಪರ್ ಸ್ಟಾರ್, ವಿನಯ ಪೂರ್ವಕ ವ್ಯಕ್ತಿತ್ವದಿಂದ ಜೀವಿಸಿದ, ಪ್ರೀತಿಸಿದ ಮತ್ತು ಸ್ಫೂರ್ತಿಯಾದ ವಿನೋದ್ ಖನ್ನಾ ರವರ ಅಗಲಿಕೆ ಇಂದು ನಮ್ಮನ್ನು ದುಃಖದ ಮಡುವಿನಲ್ಲಿರುವಂತೆ ಮಾಡಿದೆ. ಫೈನಲಿ ಗುಡ್ ಬಾಯ್ ಜೆಂಟಲ್ ಮ್ಯಾನ್ ವಿನೋದ್ ಖನ್ನಾ' ಎಂದು ಟ್ವೀಟ್ ಮಾಡಿದ್ದಾರೆ.

English summary
Veteran bollywood actor Vinod Khanna passes away at 70, he was suffering from cancer. Bollywood Actors, filmakers and Indian Cricketers condolences to Vinod Khanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada