For Quick Alerts
  ALLOW NOTIFICATIONS  
  For Daily Alerts

  ಬೆತ್ತಲಾದರೆ ಕೋಟಿ ಕೋಟಿ ಸಿಗುವ ಆಫರ್ ತಿರಸ್ಕರಿಸಿದ ಈ ಸ್ಟಾರ್ ನಟಿ

  |

  ಬಾಲಿವುಡ್ ಸ್ಟಾರ್ ನಟಿ ನರ್ಗಿಸ್ ಫಕ್ರಿ ಹಳೆಯ ದಿನಗಳ ಬಗ್ಗೆ ಮಾತನಾಡುತ್ತ ಬೆತ್ತಲಾದರೆ ಕೋಟಿ ಕೋಟಿ ಸಿಗುತ್ತಿದ್ದ ಆಫರ್ ತಿರಸ್ಕರಿದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ನರ್ಗಿಸ್ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾಡಲಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

  ನರ್ಗಿಸ್ ಫಕ್ರಿ ಮೂಲತಹ ಅಮೆರಿಕದ ಸುಂದರಿ. 16ನೇ ವಯಸ್ಸಿನಲ್ಲಿಯೆ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನರ್ಗಿಸ್ ಗೆ ಆದ ಕೆಟ್ಟ ಅನುಭವವನ್ನು ಈಗ ಬಿಚ್ಚಿಟ್ಟಿದ್ದಾರೆ. ಅಮೆರಿಕದ ಅತೀ ದೊಡ್ಡ ಅಡಲ್ಟ್ ಮ್ಯಾಗಜಿನ್ 'ಪ್ಲೇಬಾಯ್' ಕವರ್ ಪೇಜ್ ಗೆ ಬೆತ್ತಲಾಗುವಂತೆ ನಟಿ ನರ್ಗಿಸ್ ಫಕ್ರಿಗೆ ಆಫರ್ ಮಾಡಿದ್ದರಂತೆ. ಅಷ್ಟೆಯಲ್ಲ ಕೋಟಿ ಕೋಟಿ ಹಣ ನೀಡುವುದಾಗಿ ಹೇಳಿದ್ದರಂತೆ.

  ಈಕೆಯ ಅಂದ ಚೆಂದ ನೋಡಿ ಕ್ಯಾಮರಾ ಕೂಡ ನಾಚುತ್ತಿದೆ, ಯಾರು ಆಕೆ?ಈಕೆಯ ಅಂದ ಚೆಂದ ನೋಡಿ ಕ್ಯಾಮರಾ ಕೂಡ ನಾಚುತ್ತಿದೆ, ಯಾರು ಆಕೆ?

  ಆದರೆ ನರ್ಗಿಸ್ ಕಡ್ಡಿ ತುಂಡಾಗುವಂತೆ ನೋ ಎಂದು ಹೇಳಿದ್ದರಂತೆ. ಈ ಬಗ್ಗೆ ಏಜೆಂಟ್ ಒಬ್ಬರು ನರ್ಗಿಸ್ ಸಂಪರ್ಕ ಮಾಡಿ ಪ್ಲೇಬಾಯ್ ಮ್ಯಾಗಜಿನ್ ಕವರ್ ಪೇಜ್ ಗೆ ಬೆತ್ತಲಾದರೆ ದೊಡ್ಡ ಮೊತ್ತದ ಹಣ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ಕೇಳಿದ್ರಂತೆ. ಆಗ ನರ್ಗಿಸ್ ನೋ ಎಂದು ಥ್ಯಾಂಕ್ಸ್ ಹೇಳಿ ಆಫರ್ ತಿರಸ್ಕರಿಸಿದ್ರಂತೆ.

  ಮಾಡಲಿಂಗ್ ಅಥವ ಜಾಹಿರಾತು ಜಗತ್ತಿನಲ್ಲಿ ಬೆತ್ತಲಾಗುವಂತೆ, ಟಾಪ್ ಲೆಸ್ ಆಗಿ ಕಾಣಿಸಿಕೊಳ್ಳುವಂತೆ ಕೇಳುವ ಸಾಕಷ್ಟು ಸಂಗತಿಗಳು ನಡೆಯುತ್ತೆ, ಮಾಡಲಿಂಗ್ ಅಷ್ಟು ಆರಾಮದಾಯಕವಾಗಿರಲ್ಲ ಎಂದು ನರ್ಗಿಸ್ ಹೇಳಿದ್ದಾರೆ. 2014ರಲ್ಲಿ ನರ್ಗಿಸ್ ಅಮೆರಿಕದ ಟಾಪ್ ಮಾಡೆಲ್ ಆಗಿ ಹೊರಹೊಮ್ಮಿದ್ದರು.

  ಅಮೆರಿಕದ ಟಾಪ್ ಮಾಡೆಲ್ ನರ್ಗಿಸ್ 2011ರಲ್ಲಿ ಬಾಲಿವುಡ್ ಗೆ ಕಾಲಿಟ್ಟಿದ್ದರು. ರಣಬೀರ್ ಕಪೂರ್ ಅಭಿನಯದ ರಾಕ್ ಸ್ಟಾರ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಬಾಲಿವುಡ್ ಬಗ್ಗೆ ಮಾತನಾಡಿದ ನರ್ಗಿಸ್ "ಬಾಲಿವುಡ್ ನಲ್ಲಿ ನನಗೆ ಕೆಲಸ ಮಾಡಲು ತುಂಬ ಸಂತೋಷ ವಾಗುತ್ತೆ. ಇಲ್ಲಿ ಸೆಕ್ಸ್ ದೃಶ್ಯಗಳು ಇರುವುದಿಲ್ಲ. ಹಾಗಾಗಿ ಸಂತೋಷವಾಗುತ್ತೆ" ಎಂದು ಹೇಳಿದ್ದಾರೆ. ಇನ್ನು ನಾನು ಕ್ಯಾಮರಾದ ಮುಂದೆ ಬೆತ್ತಲಾಗುವುದಿಲ್ಲ ಎಂದು ಹೇಳಿದ್ದಾರೆ.

  "ಇಂಟಿಮೇಟ್ ದೃಶ್ಯಗಳನ್ನು ಮಾಡಲು ನನಗೆ ಸಾಧ್ಯವಿಲ್ಲ. ತುಂಬಾ ಕಷ್ಟವಾಗುತ್ತೆ. ನಟನೆಯಾದರು ಸಹ ಅದನ್ನು ಮಾಡಬೇಕು. ಆದರೆ ಬಾಲಿವುಡ್ ನಲ್ಲಿ ಇಂತಹ ದೃಶ್ಯಗಳು ಕಮ್ಮಿ" ಅಂತ ಹೇಳಿದ್ದಾರೆ. ನರ್ಗಿಸ್ ಬಾಲಿವುಡ್ ನಲ್ಲಿ 'ಮದ್ರಾಸ್ ಕೆಫೆ', 'ಮೈನ್ ತೇರಾ ಹೀರೋ', 'ಹೌಸ್ ಫುಲ್-3' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ.

  English summary
  Bollywood actres Nargis Fakhri refused to Nude photoshoot when her modeling days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X