ಸ್ನಾನ ಮಾಡುವ ವಿಡಿಯೋ ಹಂಚಿಕೊಂಡ ನಾಯಕಿ ; 'ಆಭಾ' ಅಬ್ಬಬ್ಬಾ ಎಂದ ಪಡ್ಡೆಹೈಕ್ಳು..!
ಈಗೀಗ ಬಟ್ಟೆ ಬಿಚ್ಚುವುದು ಅದೇ ಅವತಾರದಲ್ಲಿ ಫೋಟೊಗೆ ಪೋಸು ಕೊಡುವುದು ಎಲ್ಲವೂ ಸರ್ವೇ ಸಾಧಾರಣವಾಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಆಗುತ್ತಿದ್ದಂತೆ ಇಂತಹ ಅಟಾಟೋಪಗಳಿಗೆ ಎಲ್ಲಿಲ್ಲದ ಬೇಡಿಕೆ. ಜನ ಇದನ್ನೇ ಬಯಸುತ್ತಾರೆ ಎಂದು ತಪ್ಪು ತಿಳಿದುಕೊಳ್ಳುವ ಸಾಕಷ್ಟು ಮಂದಿ ಇಂತಹ ಕುಕೃತ್ಯಗಳನ್ನು ಎಗ್ಗಿಲ್ಲದೇ ಸಿಗ್ಗಿಲ್ಲದೇ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಆಭಾ ಪೌಲ್ ಅತ್ಯುತ್ತಮ ಉದಾಹರಣೆ.
ಹೌದು, ಆಭಾ ಪೌಲ್.. ಕಾಮ ಪ್ರಚೋದಕ ಚಿತ್ರಗಳ ಮೂಲಕವೇ ಪಡ್ಡೆಗಳಿಗೆ ಕಾಡುವ ಬಿನ್ನಾಣಗಿತ್ತಿ. 2013ರಲ್ಲಿ ಸೆನ್ಸಾರ್ ಮಂಡಳಿಯಿಂದ ಭಾರತದಲ್ಲಿ ನಿಷೇಧಕ್ಕೊಳಗಾಗಿದ್ದ ಕಾಮಪ್ರಚೋದಕ ಚಲನ ಚಿತ್ರ ಕಾಮ ಸೂತ್ರ 3D ಚಿತ್ರದ ಮೂಲಕ ಜಗದ್ವಿಖ್ಯಾತಿಯನ್ನ ಗಳಿಸಿದ್ದ ನಾಯಕಿ ಈಕೆ. ಇಂಥ ಆಭಾ ಸದ್ಯಕ್ಕೆ ಅರೆ ಬೆತ್ತಲೆಯಾಗಿದ್ದಾರೆ. ಸೀರೆಯುಟ್ಟು ಟಾಪ್‌ಲೆಸ್ ಆಗಿ ಸ್ನಾನ ಮಾಡಿದ್ದಾರೆ. ತಮ್ಮ ಈ 'ಸ್ನಾನ ಧ್ಯಾನ'ದ ವಿಡಿಯೋವನ್ನೂ ಮಾಡಿ, ತಮ್ಮ ಹಿಂಬಾಲಕರಿಗಾಗಿ ಹಂಚಿಕೊಂಡಿದ್ದಾರೆ.

ಬ್ಲೌಸ್ ಹಾಕದೆ ಕೇವಲ ಬಿಳಿ ಬಣ್ಣದ ರೆಡ್ ಬಾರ್ಡರ್ ಸೀರೆ ಹಾಕಿಕೊಂಡು, ನೀರಿನಲ್ಲಿ ಮಿಂದೆದ್ದ ಆಭಾ ಅವರನ್ನು ಕಂಡು ಅನೇಕರು ಅಬ್ಬಬ್ಬಾ ಎನ್ನುತ್ತಿದ್ದಾರೆ. ಆಭಾ ಅವರ ಶಂಖದಂತಹ ಕೊರಳು.. ಹವಳದ ತುಟಿಗೆ ಮನ ಸೋಲುತ್ತಿದ್ದಾರೆ. ಬಾಳೆದಿಂಡಿನಂತ ತೋಳು, ಬೆಂಡೆಕಾಯಿ ಬೆರಳನ್ನೂ ಕಂಡು ಮೂಕ ವಿಸ್ಮಿತರಾಗಿದ್ದಾರೆ. ತಮ್ಮ ತಮ್ಮ ಇಷ್ಟಾನುಸಾರ ಆಭಾ ಅವರ ಸೌಂದರ್ಯವನ್ನೂ ಹಾಡಿ ಹೊಗಳುತ್ತಿದ್ದಾರೆ.
ಹತ್ ಹತ್ರ 10.000ಕ್ಕೂ ಹೆಚ್ಚಿನ ಜನರ ಹೃದಯವನ್ನ ಗೆದ್ದ ಈ ತುಣುಕು, ಇನ್ನೂರಕ್ಕೂ ಅಧಿಕ ಜನರ ಮನದ ಆಸೆ ಬಯಕೆಗಳಿಗೆ ಕೈಗನ್ನಡಿಯನ್ನೂ ಹಿಡಿದಿದೆ. ಇನ್ನೂ ಶೇರ್ ಆದ ಸಂಖ್ಯೆ ಒಂದು ಸಾವಿರದ ಮೇಲಿದೆ. ಈ ಕಾರಣದಿಂದ ಏಪ್ರಿಲ್ ನಲ್ಲಿ ಅಪ್ಲೋಡ್ ಆದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೆಚ್ಚೆಚ್ಚು ಸಿನಿ ರಸಿಕರನ್ನ ಸೆಳೆಯುತ್ತಿದೆ.
ಅಂದ್ಹಾಗೇ ಇಷ್ಟೆಲ್ಲಾ ಸರ್ಕಸ್ ಮಾಡಿದರೂ ಆಭಾ ಅದೃಷ್ಟ ಬಾಲಿವುಡ್‌ನಲ್ಲಿ ಇನ್ನೂ ಖುಲಾಯಿಸಿಲ್ಲ. 2010ರಿಂದ ಮುಂಬೈನಲ್ಲಿ ಸೈಕಲ್ ತುಳಿಯುತ್ತಿದ್ದರೂ ಒಂದೇ ಒಂದು ದೊಡ್ಡ ಸಿನಿಮಾ ಇವರಿಗೆ ಸಿಗಲಿಲ್ಲ. ತಮಿಳಿನ ಒಂದು ಚಿತ್ರದಲ್ಲಿ ಅಭಿನಯಿಸಿದರು, ದಕ್ಷಿಣ ಭಾರತೀಯ ಚಿತ್ರರಂಗ ತಲೆ ಎತ್ತಿ ಇವರನ್ನ ನೋಡಲಿಲ್ಲ. ಇವರಿಗೆ ಕ್ಯಾರೇ ಎನ್ನಲಿಲ್ಲ.
ಗಂದಿ ಬಾತ್..XXX..ಹಾಯ್ ತೌಬಾ.. ಹೀಗೆ ನಾಲ್ಕೈದು ವೆಬ್ ಸರಣಿಗಳನ್ನ ಹೊರತು ಪಡಿಸಿದರೆ, ಆಭಾ ಮಾಡಿದ ಸಾಧನೆ ಹೇಳಿಕೊಳ್ಳುವಂತಿಲ್ಲ.ಆ ವೆಬ್ ಸಿರೀಸ್‌ಗಳೂ ಕೂಡ ಬಿ-ಗ್ರೇಡ್ ಸಿನಿಮಾಗಳು ಅನ್ನುವುದು ಬೇರೆ ವಿಚಾರ. ಒಟ್ನಲ್ಲಿ ಸದ್ಯಕ್ಕೆ ಆಭಾ ಅವರ ಈ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚರ್ಚೆಗೀಡಾಗಿದೆ. ಕೆಲವರು ಅವಕಾಶಕ್ಕೆ ಈ ಹಂತಕ್ಕೆ ಇಳಿಯಬಾರದು ಎಂದು ಆಕ್ರೋಶವನ್ನ ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಗೌರಮ್ಮನಂತೆ ಇದ್ದರೆ ಬಾಲಿವುಡ್ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತ ಪಡಿಸುತ್ತಿದ್ಧಾರೆ.


Click it and Unblock the Notifications











