ಡೀಫ್‌ಫೇಕ್ ಗೆ ಮತ್ತೊಮ್ಮೆ ಬಲಿಯಾದ ಆಲಿಯಾ ಭಟ್ ; ವಿಡಿಯೋ ನೋಡಿ ಫ್ಯಾನ್ಸ್ ಶಾಕ್..!
ಆರಂಭದಲ್ಲಿ ಮನರಂಜನೆ ದೃಷ್ಟಿಯಿಂದ ಹುಟ್ಟಿಕೊಂಡ ಡೀಪ್ ಫೇಕ್ ಇದೀಗ ಚಾರಿತ್ರ್ಯ ಹರಣಕ್ಕೆ, ರಾಜಕೀಯ ಅಪಪ್ರಚಾರಕ್ಕೆ ಹಾಗೂ ಬ್ಲಾಕ್ ಮೇಲ್ ಮಾಡೋದಕ್ಕೂ ಬಳಕೆ ಆಗ್ತಿದೆ. ಅಸಲಿ ವಿಡಿಯೋಗಳನ್ನೇ ಮೀರಿಸುವಷ್ಟು ಅತ್ಯುತ್ತಮ ಗುಣಮಟ್ಟವನ್ನ ಹೊಂದಿರುವ ಈ ನಕಲಿ ವಿಡಿಯೋಗಳಿಂದ ಅನೇಕರು ಹೈರಾಣಾಗಿದ್ದಾರೆ. ದೂರು ಕೊಟ್ಟು ಸೆಲೆಬ್ರಿಟಿಗಳು ಸುಸ್ತಾಗಿದ್ದಾರೆ. ಇದರ ನಡುವೆ ಆಲಿಯಾ ಭಟ್ ಅವರ ಮತ್ತೊಂದು ವಿಡಿಯೋ ಈಗ ವೈರಲ್ ಆಗಿದೆ.
ಹೌದು, ಡೀಪ್ ಫೇಕ್ ತಂತ್ರಜ್ಞಾನಕ್ಕೆ ಆಲಿಯಾ ಭಟ್ ಮತ್ತೊಮ್ಮೆ ಬಲಿಯಾಗಿದ್ದಾರೆ. ಆಲಿಯಾ ಭಟ್ ಅವರ ಈ ಅವತಾರ ಕಂಡು ಅಭಿಮಾನಿಗಳು ಕೂಡ ದಂಗಾಗಿದ್ದಾರೆ. ಯಾಕೆಂದರೆ ಮೊನ್ನೆವರೆಗೆ ಬೇರೆಯವರ ದೇಹಕ್ಕೆ.. ತಾರೆಯರ ಮುಖವನ್ನ ಜೋಡಿಸುವ ಕೆಲಸವನ್ನ ಮಾಡ್ತಿದ್ದ ಕಿರಾತಕರು, ಈ ಬಾರಿ.. ಬೇರೆ ನಾಯಕಿಯ ದೇಹಕ್ಕೆ ಆಲಿಯಾ ಅವರ ಮುಖ ಮ್ಯಾಚ್ ಮಾಡಿದ್ದಾರೆ. ಹೀಗಾಗಿಯೇ.. ಇದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ ಎಂಬ ಅಭಿಪ್ರಾಯವನ್ನ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ದೂರು ದಾಖಲಿಸುವಂತೆ ಆಲಿಯಾ ಭಟ್ ಗೆ ಸಲಹೆಯನ್ನೂ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ ಇದು ಕಾನೂನುಬದ್ಧವೇ ?? ಎಂದು ಪ್ರಶ್ನೆಯನ್ನೂ ಕೂಡ ಕೇಳಿರುವ ಅನೇಕರು ಇದಕ್ಕೆಲ್ಲಾ ಬ್ರೇಕ್ ಬೀಳಲೇಬೇಕು ಎಂದಿದ್ದಾರೆ.

ಅಂದ್ಹಾಗೇ ಆಲಿಯಾ ಬದಲು ಇಲ್ಲಿ ನಿಜಕ್ಕೂ ಇರುವುದು ವಾಮಿಕಾ. ಈ ವಾಮಿಕಾ ಬೇರೆ ಯಾರು ಅಲ್ಲ ಬದಲಿಗೆ ಬಾಲಿವುಡ್ ನಟಿ. 2007ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ವಾಮಿಕಾ ಇಲ್ಲಿಯವರೆಗೆ ಎರಡು ಡಜನ್ ಸಿನಿಮಾ ಮಾಡಿದ್ದಾರೆ. ಆದರೆ ಯಾವ ಚಿತ್ರವೂ ಇವರಿಗೆ ಬೇಕಿರುವ ಹೆಸರನ್ನ ತಂದು ಕೊಟ್ಟಿಲ್ಲ. ಆ ಹೆಸರನ್ನ ಈಗ ಈ ಡೀಪ್ ಫೇಕ್ ತಂತ್ರಜ್ಞಾನ ಇವರಿಗೆ ತಂದು ಕೊಟ್ಟಿದೆ.
ಬಣ್ಣದ ಪ್ರಪಂಚವನ್ನ ಕಾಡುತ್ತಿರುವ ಡೀಫ್ ಫೇಕ್ ಗುಮ್ಮ
ಬಾಲಿವುಡ್ ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್, ಕಾಜೋಲ್ ಮಾತ್ರವಲ್ಲ, ಕ್ರಿಕೆಟಿಗ ಸಚಿನ್ ತೆಂಡೊಲ್ಕರ್ ಪುತ್ರಿ ಸಾರಾ ತೆಂಡೊಲ್ಕರ್ ಅವರ ಡೀಪ್ ಫೇಕ್ ವಿಡಿಯೋ ಕೂಡಾ ವೈರಲ್ ಆಗಿತ್ತು. ಸಾರಾ ತೆಂಡೊಲ್ಕರ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಖಾತೆ ಸೃಷ್ಟಿ ಮಾಡಿದ್ದ ಖದೀಮರು, ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಸಾರಾ ತೆಂಡೊಲ್ಕರ್ ಇರುವ ರೀತಿ ನಕಲಿ ಫೋಟೋ ಸೃಷ್ಟಿ ಮಾಡಿದ್ದರು. ಮೇಲ್ನೋಟಕ್ಕೆ ಗಮನಿಸಿದರೆ, ಖುದ್ದು ಸಾರಾ ತೆಂಡೊಲ್ಕರ್ ಅವರೇ ಶುಭಮನ್ ಗಿಲ್ ಜೊತೆಗಿನ ತಮ್ಮ ಗೆಳೆತನವನ್ನ ಹೇಳಿಕೊಂಡ ರೀತಿಯಲ್ಲಿತ್ತು. ಆದರೆ, ಟ್ವಿಟ್ಟರ್ ಖಾತೆಯೂ ನಕಲಿ, ಫೋಟೋ ಕೂಡಾ ನಕಲಿ
ಡೀಪ್ ಫೇಕ್ ಎಂದರೇನು..?
ಡೀಪ್ ಫೇಕ್ ಟೆಕ್ನಾಲಜಿ ಕೃತಕ ಬುದ್ಧಿಮತ್ತೆಯ ಒಂದು ಭಾಗ. ಅಲ್ಗಾರಿದಮ್‌ಗಳ ಮೂಲಕ ಇನ್ನೊಬ್ಬರ ಮುಖಭಾವಗಳನ್ನು ಆಳಪದರಗಳಲ್ಲಿ ವಿಶ್ಲೇಷಿಸಿ, ನಕಲಿ ರಚನೆಗಳನ್ನು ಇದು ಮುಂದಿಡುತ್ತದೆ. ವ್ಯಕ್ತಿಯ ಮೂಲ ಮುಖ ಮತ್ತು ಧ್ವನಿಯನ್ನು ಬದಲಿಸಿ, ನೈಜ ಎಂಬಂಥ ವಿಡಿಯೋ ಮತ್ತು ಆಡಿಯೋಗಳನ್ನು ರಚಿಸುವ ಸಾಮರ್ಥ್ಯ ಇದಕ್ಕಿದೆ. ಸರಳವಾಗಿ ಹೇಳಬೇಕೆಂದರೆ, ದೇಹ ಬೇರೆಯವರದ್ದು.. ಮುಖ ಮಾತ್ರ ನಿಮ್ಮದು.. ಇದು ಡೀಪ್ ಫೇಕ್‌ನ ಅಸಲಿಯತ್ತು.


Click it and Unblock the Notifications











