For Quick Alerts
  ALLOW NOTIFICATIONS  
  For Daily Alerts

  ಆಲಿಯಾ ಫ್ಯಾನ್ಸ್‌ಗೆ ಮತ್ತೊಂದು ಗುಡ್‌ನ್ಯೂಸ್‌: 'ಬ್ರಹ್ಮಾಸ್ತ್ರ' ನಟಿಗೆ 'ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿ'

  |

  ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ಗೆ ಅಭಿಮಾನಿಗಳಿಗೆ ಒಂದಾದ ಮೇಲೊಂದು ಗುಡ್‌ನ್ಯೂಸ್‌ ಸಿಗುತ್ತಿದೆ. ಆಲಿಯಾ ಭಟ್‌- ರಣಬೀರ್ ಕಪೂರ್‌ ಅಭಿನಯದ 'ಬ್ರಹ್ಮಾಸ್ತ್ರ' ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಬಾಕ್ಸ್‌ ಆಫೀಸ್‌ನ ದಾಖಲೆಗಳನ್ನು ಧೂಳಿಪಟ ಮಾಡಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.

  ಬಿಡುಗಡೆಗೂ ಮುನ್ನ ಅನೇಕ ವಿವಾದದಗಳಲ್ಲಿ ಸಿಲುಕಿದ್ದರೂ, ಪಂಚ ಭಾಷೆಗಳಲ್ಲಿ ತೆರೆ ಕಂಡ 'ಬ್ರಹ್ಮಾಸ್ತ್ರ' ಚಿತ್ರ, ಪ್ರೇಕ್ಷರಿಂದ ಮಿಶ್ರ ಪ್ರತಿಕ್ರಿಯೆ ದೊರೆತಿದ್ದರೂ ಸಹ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಉತ್ತಮ ಗಳಿಗೆ ಮಾಡಿದೆ. 'ಬ್ರಹ್ಮಾಸ್ತ್ರ' ಚಿತ್ರದಿಂದ ಆಲಿಯಾ ಭಟ್‌ ಖ್ಯಾತಿ ಕೂಡ ಹೆಚ್ಚಾಗಿದ್ದು, ಚಿತ್ರದಲ್ಲಿ ಆಕೆಯ ಪಾತ್ರಕ್ಕೆ ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಬ್ರಹ್ಮಾಸ್ತ್ರ' ನಿರೀಕ್ಷೆಗೂ ಮೀರಿದ ಯಶಸ್ಸಿನ ಮೂಲಕ ಆಲಿಯಾ, ಬಾಲಿವುಡ್‌ ಸಕ್ಸಸ್‌ಫುಲ್‌ ನಟಿಯರ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

  11ನೇ ದಿನವೂ ಬಾಕ್ಸಾಫೀಸ್‌ನಲ್ಲಿ 'ಬ್ರಹ್ಮಾಸ್ತ್ರ' ದರ್ಬಾರ್: 2ನೇ ಸ್ಥಾನಕ್ಕೇರಿದ ಆಲಿಯಾ ಭಟ್!11ನೇ ದಿನವೂ ಬಾಕ್ಸಾಫೀಸ್‌ನಲ್ಲಿ 'ಬ್ರಹ್ಮಾಸ್ತ್ರ' ದರ್ಬಾರ್: 2ನೇ ಸ್ಥಾನಕ್ಕೇರಿದ ಆಲಿಯಾ ಭಟ್!

  ಇನ್ನು ಮದುವೆಯಾದ ಮೂರೇ ತಿಂಗಳಿಗೆ ತಾಯಿಯಾಗುತ್ತಿರುವ ಖುಷಿ ಹಂಚಿಕೊಳ್ಳುವುದರ ಮೂಲಕ ಆಲಿಯಾ ಭಟ್‌ ತಮ್ಮ ಅಭಿಮಾನಿಗಳಿಗೆ ಬಿಗ್ ಗುಡ್‌ನ್ಯೂಸ್‌ ನೀಡಿದ್ದರು. ಸದ್ಯ ತಾಯಾಗುವ ಸಂತಸಲ್ಲಿದ್ದರುವ ಆಲಿಯಾ ಭಟ್‌ಗೆ ಮತ್ತೊಂದು ಖುಷಿಯ ವಿಚಾರ ಅರಸಿ ಬಂದಿದ್ದು, ಜನಪ್ರಿಯ ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿಗೆ ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ ಭಾಜನರಾಗಿದ್ದಾರೆ.

  ಪ್ರಿಯದರ್ಶಿನಿ ಅಕಾಡೆಮಿ ಕೊಡಮಾಡುವ 'ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿ'ಯನ್ನು ಚಿತ್ರರಂಗದಲ್ಲಿ ನಟಿಯೊಬ್ಬರು ಪಡೆಯಬಹುದಾದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಚಿತ್ರರಂಗದಲ್ಲಿ ಅಪ್ರತಿಮ ಖ್ಯಾತಿ ಹಾಗೂ ಅಪಾರ ಕೊಡುಗೆಗಳನ್ನು ನೀಡಿದವರಿಗೆ 'ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿ' ನೀಡಿ ಗೌರವಿಸಲಾಗುತ್ತದೆ. ಇದು ಸಿನಿಮಾ ರಂಗದಲ್ಲಿ ನೀಡುವ ಅಪರೂಪದ ಗೌರವವಾಗಿದೆ. ಈ ಹಿಂದೆ ಬಾಲಿವುಡ್‌ನ ಖ್ಯಾತ ನಟಿಯರಾದ ಟಬು, ಐಶ್ವರ್ಯ ರೈ ಬಚ್ಚನ್, ವಿದ್ಯಾ ಬಾಲನ್ ಮತ್ತು ಪ್ರಿಯಾಂಕಾ ಚೋಪ್ರಾ ಈ ಅತ್ಯುನ್ನತ ಗೌರವವನ್ನು ಪಡೆದುಕೊಂಡಿದ್ದು, ಆಲಿಯಾ ಭಟ್‌ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

  9ನೇ ದಿನ 'ಸೂರ್ಯವಂಶಿ' ಬೀಟ್ ಮಾಡಿದ 'ಬ್ರಹ್ಮಾಸ್ತ್ರ': 'ಕಾಶ್ಮೀರ್ ಫೈಲ್ಸ್' ಹಿಂದಿಕ್ಕಲು ಎಷ್ಟು ಬೇಕು?9ನೇ ದಿನ 'ಸೂರ್ಯವಂಶಿ' ಬೀಟ್ ಮಾಡಿದ 'ಬ್ರಹ್ಮಾಸ್ತ್ರ': 'ಕಾಶ್ಮೀರ್ ಫೈಲ್ಸ್' ಹಿಂದಿಕ್ಕಲು ಎಷ್ಟು ಬೇಕು?

  ಈ ಖುಷಿಯ ವಿಚಾರವನ್ನು ಆಲಿಯಾ ಭಟ್‌ ತಮ್ಮ ಅಭಿಮಾನಿಗಳೊಂದಿಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯದರ್ಶಿನಿ ಅಕಾಡೆಮಿಗೆ ಧನ್ಯವಾದ ಅರ್ಪಿಸಿರುವ ಆಲಿಯಾ ಮುಂದಿನ ದಿನಗಳಲ್ಲಿಯೂ ಉತ್ತಮ ಸಿನಿಮಾಗಳನ್ನು ನೀಡುವ ಮೂಲಕ ಇದೇ ರೀತಿಯನ್ನು ಪಾಲಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಸಿನಿಮಾ ನಮಗೆ ಸುಂದರ ಕನಸುಗಳ, ನಂಬಿಕೆ, ಶ್ರದ್ಧೆ ಹಾಗೂ ನಮ್ರತೆಯ ಮಹತ್ವವನ್ನು ಕಲಿಸುತ್ತದೆ ಎಂದು ತಮ್ಮ ಇನ್ಸ್ಟಾಗ್ರಾಮ್ಸ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

  ಸಪ್ಟೆಂಬರ್ 19ರಂದು ನಡೆದ ಪ್ರಿಯದರ್ಶಿನಿ ಅಕಾಡೆಮಿ ವರ್ಚುವಲ್ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರ ಸಮ್ಮುಖದಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ಗೆ 'ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ. ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿರುವ ಆಲಿಯಾ ಭಟ್‌ಗೆ ಕೋಟ್ಯಂತರ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.

  ದಿನದಿಂದ ದಿನಕ್ಕೆ ಕುಸಿದ ಕಲೆಕ್ಷನ್; 410 ಕೋಟಿ ಬಜೆಟ್‌ನ ಬ್ರಹ್ಮಾಸ್ತ್ರ ಮೊದಲ ವಾರ ಗಳಿಸಿದ್ದೆಷ್ಟು?ದಿನದಿಂದ ದಿನಕ್ಕೆ ಕುಸಿದ ಕಲೆಕ್ಷನ್; 410 ಕೋಟಿ ಬಜೆಟ್‌ನ ಬ್ರಹ್ಮಾಸ್ತ್ರ ಮೊದಲ ವಾರ ಗಳಿಸಿದ್ದೆಷ್ಟು?

  'ಹೈವೇ', 'ಆರ್‌ಆರ್‌ಆರ್‌', 'ಸ್ಟುಡೆಂಟ್‌ ಆಫ್‌ ದಿ ಇಯರ್', 'ಗಂಗೂಬಾಯಿ ಕಾಥಿಯಾವಾಡಿ', 'ರಾಝಿ', 'ಗಲ್ಲಿ ಬಾಯ್‌', 'ಡಾರ್ಲಿಂಗ್ಸ್‌', 'ಬ್ರಹ್ಮಾಸ್ತ್ರ' ಸೇರಿದಂತೆ ಉತ್ತಮ ಸಿನಿಮಾಗಳನ್ನೇ ನೀಡಿರುವ ಆಲಿಯಾ ಭಟ್‌ಗೆ ಈಗಾಗಲೇ ಅನೇಕ ಪ್ರಶಸ್ತಿಗಳು ಅರಸಿ ಬಂದಿದ್ದು, ನಾಲ್ಕು ಬಾರಿ ಫಿಲ್ಮಂ ಫೇರ್‌ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.

  ಆಲಿಯಾ ಭಟ್‌, ಫರ್ಹಾನ್ ಅಖ್ತರ್ ಅಭಿನಯದ 'ಜೀ ಲೆ ಜರಾ' ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಚಿತ್ರದ ಮತ್ತೋರ್ವ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಆಲಿಯಾ ರಣವೀರ್ ಸಿಂಗ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ.

  English summary
  Bollywood actress Alia Bhatt felicitated with the prestigious Smita Patil Memorial Award. She thanked the Priyadarshni Academy for the tremendous honour.
  Wednesday, September 21, 2022, 14:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X