ಸುಧಾ ಮೂರ್ತಿ ಪಾತ್ರದಲ್ಲಿ ಬಾಲಿವುಡ್ ನ ಈ ಸ್ಟಾರ್ ನಟಿ?

Recommended Video

Alia Bhatt to play Sudha Murthy in industrialist Narayana Murthy's biopic | FILMIBEAT KANNADA

ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ ಜೀವನ ಕತೆಯನ್ನು ತೆರೆ ಮೇಲೆ ತರುವ ಪ್ಲಾನ್ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೆ ಚಿತ್ರಕ್ಕೆ 'ಮೂರ್ತಿ' ಎಂದು ಟೈಟಲ್ ಇಡಲಾಗಿದೆ. ಆದ್ರೀಗ ಪ್ರೇಕ್ಷಕರಲ್ಲಿ ಮೂರ್ತಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಸುಧಾ ಮೂರ್ತಿ ಜೀವನವನ್ನು ತೆರೆಮೇಲೆ ತರುವ ಸಾಹಸಕ್ಕೆ ಕೈ ಹಾಕಿರುವುದು ಬಾಲಿವುಡ್ ನ ಖ್ಯಾತ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ. ಈಗಾಗಲೆ ಸ್ಕ್ರಿಪ್ಟ್ ಫೈನಲ್ ಮಾಡಿಕೊಂಡಿರುವ ಅಶ್ವಿನಿ ಪಾತ್ರಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅವರ ಮೊದಲ ಆಯ್ಕೆ ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್.

ಸುಧಾ ಮೂರ್ತಿ ಪಾತ್ರದಲ್ಲಿ ಅಲಿಯಾ ಭಟ್ ಕಾಣಿಸಿಕೊಳ್ಳಬೇಕು ಎನ್ನುವುದು ಅಶ್ವಿನಿಯವರ ಆಸೆ. 'ಗಲ್ಲಿ ಬಾಯ್', 'ಹೈವೇ', 'ರಾಝಿ' ಸಿನಿಮಾಗಳಲ್ಲಿ ಅಲಿಯಾ ಅದ್ಭುತ ಅಭಿನಯ ನೋಡಿ ಸುಧಾ ಮೂರ್ತಿ ಪಾತ್ರಕ್ಕೆ ಅಲಿಯಾ ಸೂಟ್ ಆಗುತ್ತಾರೆ ಎನ್ನುವುದು ಅವರ ನಿರ್ಧಾರ. ಆದ್ರೆ ಅಲಿಯಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Bollywood Actress Alia Bhatt In Talks For Biopic On Sudha Murthy

ಅಲಿಯಾ ಕಾಲ್ ಶೀಟ್ ಸಿಕ್ಕರೆ ಸುಧಾ ಮೂರ್ತಿ ಪಾತ್ರದಲ್ಲಿ ಅಲಿಯಾ ಕಾಣಿಸಿಕೊಳ್ಳುವುದು ಪಕ್ಕಾ. ವಿಶೇಷ ಅಂದ್ರೆ ಸಿನಿಮಾ ಹಿಂದಿಯಲ್ಲಿ ತಯಾರಾಗುತ್ತಿದೆ. ಸಿನಿಮಾ ಕನ್ನಡಲ್ಲೂ ತೆರೆಗೆ ಬರಲಿ ಎನ್ನುವುದ ಕನ್ನಡಿಗ ಬೇಡಿಕೆ.

ಅಶ್ವಿನಿ ತಿವಾರಿ ಸದ್ಯ ಕಂಗನಾ ರಣಾವತ್ ಜೊತೆ ಪಂಗಾ ಚಿತ್ರ ಮಾಡುತ್ತಿದ್ದಾರೆ. ಪಂಗಾ ಸಿನಿಮಾ ಮುಗಿದ ಬಳಿಕ ಸುಧಾ ಮೂರ್ತಿ ಪ್ರೋಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ. ಅಲಿಯಾ ಭಟ್ ಸದ್ಯ ಸಡಕ್-2,ತಖ್ತ್, ಬ್ರಹ್ಮಾಸ್ತ್ರ, ಹಾಗೂ ಸಂಜಯ್ ಲೀಲಾ ಬನ್ಸಾಲಿ ಜೊತೆ "ಗಂಗೂಬಾಯ್ ಕಥಿಯಾವಾಡಿ" ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Bollywood actress Alia Bhatt in talks for biopic on Sudha Murthy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X