For Quick Alerts
  ALLOW NOTIFICATIONS  
  For Daily Alerts

  ಒಂದು ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಆಲಿಯಾ ಪಡೆಯೋದಿಷ್ಟು? ಒಟ್ಟು ಆಸ್ತಿ ಮೌಲ್ಯ ಎಷ್ಟು?

  |

  ಆಲಿಯಾ ಭಟ್ ಸದ್ಯ ಭಾರತದಾದ್ಯಂತ ಚರ್ಚೆಯಲ್ಲಿರುವ ನಟಿ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಬಾಯ್‌ಕಾಟ್ ಆಲಿಯಾ ಭಟ್ ಅಭಿಯಾನ ನಡೆಯುತ್ತಿದೆ. ಇವರೇ ಮೊದಲ ಬಾರಿಗೆ ನಿರ್ಮಾಣ ಮಾಡಿರುವ 'ಡಾರ್ಲಿಂಗ್ಸ್' ಸಿನಿಮಾ ಕಾರಣ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರು ಈ ಅಭಿಯಾನವನ್ನು ಆರಂಭ ಮಾಡಿದ್ದಾರೆ.

  ಅಷ್ಟಕ್ಕೂ ಬಾಯ್‌ಕಾಟ್ ಆಲಿಯಾ ಭಟ್ ಅಭಿಯಾನ ಆರಂಭ ಮಾಡಿದ್ದಕ್ಕೆ ಅವರದ್ದೇ ಕಾರಣ ಕೂಡ ಇದೆ. ಆಲಿಯಾ ಭಟ್ ಅಭಿನಯದ 'ಡಾರ್ಲಿಂಗ್ಸ್' ಸಿನಿಮಾ ಕೌಟುಂಬಿಕ ಕಲಹವನ್ನು ಪ್ರಚೋದನೆ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಅಭಿಯಾನ ಆರಂಭ ಆಗಿದೆ. ಆದರೆ, ಇದೇ ಸೋಶಿಯಲ್ ಮೀಡಿಯಾದಲ್ಲಿ ಆಲಿಯಾ ಭಟ್ ಒಂದು ಪೋಸ್ಟ್ ಮಾಡಲು ಪಡೆಯುವ ಸಂಭಾವನೆ ಕೇಳಿದರೆ ಖಂಡಿತಾ ಬೆಚ್ಚಿಬೀಳುತ್ತೀರ.

  ಆಲಿಯಾ ಭಟ್ ಸದ್ಯ ಬಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟಿ. ಎಸ್ ಅಂದ ಸಿನಿಮಾಗಳೆಲ್ಲಾ ಸಕ್ಸಸ್ ಆಗಿವೆ. ಬಾಲಿವುಡ್‌ನಿಂದ ಹಾಲಿವುಡ್‌ಗೂ ಪ್ರಮೋಷನ್ ಸಿಕ್ಕಿದೆ. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಆಲಿಯಾ ಭಟ್ ಗರ್ಭಿಣಿಯಾಗಿದ್ದಾರೆ. ಹೀಗಿದ್ದರೂ, ಆಲಿಯಾ ಭಟ್‌ಗೆ ಹಣ ಹರಿದು ಬರುವುದೇನು ಕಮ್ಮಿಯಾಗಿಲ್ಲ. ಅಷ್ಟಕ್ಕೂ ಆಲಿಯಾ ಭಟ್ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಪಡೆಯುವ ಸಂಭಾವನೆ ಎಷ್ಟು? ಅವರ ಬಳಿಕ ಇರುವ ಆಸ್ತಿಯ ಮೌಲ್ಯ ಎಷ್ಟು? ಒಂದು ಸಿನಿಮಾ ಎಷ್ಟು ಸಂಭಾವನೆ ಪಡೆಯುತ್ತಾರೆ? ಅವರ ಕೈಲ್ಲಿರುವ ಬ್ರ್ಯಾಂಡ್‌ಗಳು ಯಾವುವು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಆಲಿಯಾ ಒಂದು ಪೋಸ್ಟ್‌ಗೆ ಪಡೆಯೋದೆಷ್ಟು?

  ಆಲಿಯಾ ಒಂದು ಪೋಸ್ಟ್‌ಗೆ ಪಡೆಯೋದೆಷ್ಟು?

  ಆಲಿಯಾ ಭಟ್ ನಟಿಸಿದ ಎರಡು ಮಹಿಳಾ ಪ್ರಧಾನ ಸಿನಿಮಾಗಳು 100 ಕೋಟಿ ಕ್ಲಬ್ ಸೇರಿವೆ. ಇತ್ತೀಚೆಗೆ ತೆರೆಕಂಡ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಕೂಡ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಲೂಟಿ ಮಾಡಿದೆ. ಹೀಗಾಗಿ ಆಲಿಯಾ ಭಟ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸದ್ಯ ಬಾಯ್‌ಕಾಟ್ ಬಿಸಿ ಎದುರಿಸುತ್ತಿರುವ ಆಲಿಯಾ ಭಟ್ ಅದೇ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಲು ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ಬಾಲಿವುಡ್‌ ಮೀಡಿಯಾಗಳಲ್ಲಿ ವರದಿಯಾಗಿವೆ. ಇಲ್ಲಿವರೆಗೂ 85 ಲಕ್ಷದಿಂದ 1 ಕೋಟಿ ರೂ.ವರೆಗೂ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.

  ಆಲಿಯಾ ಬಳಿ ಇರುವ ಆಸ್ತಿ ಮೌಲ್ಯವೆಷ್ಟು?

  ಆಲಿಯಾ ಬಳಿ ಇರುವ ಆಸ್ತಿ ಮೌಲ್ಯವೆಷ್ಟು?

  ಆಲಿಯಾ ಭಟ್ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. 2021ರ ವೇಳೆ ಆಲಿಯಾ ಭಟ್ ಸಂಭಾವನೆ ಕೂಡ ಗಗನಕ್ಕೇರಿದೆ. ಒಂದು ಸಿನಿಮಾಗೆ ಆಲಿಯಾ ಭಟ್ 15 ಕೋಟಿ ರೂ.ಯಿಂದ 18 ಕೋಟಿ ರೂ. ಪಡೆಯುತ್ತಾರೆ. ಅಲ್ಲದೆ 2021ರವರೆಗೆ ಇವರ ಆಸ್ತಿ ಮೌಲ್ಯ 517 ಕೋಟಿ ರೂ. ಎಂದು ಹಿಂದೂಸ್ತಾನ್ ಟೈಮ್ಸ್‌ನಲ್ಲಿ ವರದಿಯಾಗಿದೆ. ಆಲಿಯಾ ಭಟ್ ಸಿನಿಮಾದಿಂದ ಅತೀ ಹೆಚ್ಚು ಹಣವನ್ನು ಸಂಪಾಧನೆ ಮಾಡಿದರೆ, ಜಾಹೀರಾತು ಹಾಗೂ ತನ್ನದೇ ಬ್ರ್ಯಾಂಡ್ ಹಾಗೂ ಬೇರೆ ಬೇರೆ ಕಡೆಗಳಲ್ಲಿ ಹಣ ಹೂಡಿಕೆ ಮಾಡಿರುವುದರಿಂದಲೂ ಹಣ ಇವ ಜೇಬು ಸೇರಿದೆ.

  'ಡಾರ್ಲಿಂಗ್ಸ್' ನೆಟ್‌ಫ್ಲಿಕ್ಸ್‌ಗೆ ಸೇಲ್

  'ಡಾರ್ಲಿಂಗ್ಸ್' ನೆಟ್‌ಫ್ಲಿಕ್ಸ್‌ಗೆ ಸೇಲ್

  ಆಲಿಯಾ ಭಟ್ ಕೇವಲ ನಟಿಯಷ್ಟೇ ಅಲ್ಲ. ಕೇವಲ 29 ವರ್ಷದ ನಟಿ ನೂರಾರು ಕೋಟಿ ಹಣವನ್ನು ಸಂಪಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ಆಲಿಯಾ ಭಟ್ ಒಡೆತನದ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ ಕಂಪನಿ ಜಂಟಿಯಾಗಿ 'ಡಾರ್ಲಿಂಗ್ಸ್‌' ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಮೂಲಗಳ ಪ್ರಕಾರ, ನೆಟ್‌ಫ್ಲಿಕ್ಸ್ ಈ ಸಿನಿಮಾವನ್ನು 80 ಕೋಟಿ ರೂ.ಗೆ ಈ ಸಿನಿಮಾವನ್ನು ಖರೀದಿ ಮಾಡಿದೆ.

  ಆಲಿಯಾ ಬಳಿ ಇರುವ ಬ್ರ್ಯಾಂಡ್‌ಗಳೆಷ್ಟು?

  ಆಲಿಯಾ ಬಳಿ ಇರುವ ಬ್ರ್ಯಾಂಡ್‌ಗಳೆಷ್ಟು?

  ಆಲಿಯಾ ಭಟ್ ಬಳಿಕ ಕೆಲವು ಸ್ವಂತ ಬ್ರ್ಯಾಂಡ್‌ಗಳಿವೆ. 'ಎಡೆ ಮಾಮಾ' ಎಂಬ ಬ್ರ್ಯಾಂಡ್ ಇದೆ. ಇದು 2 ವರ್ಷದಿಂದ 14 ವರ್ಷದ ಮಕ್ಕಳಿಗಾಗಿ ಬಟ್ಟೆ ತಯಾರಿಸುತ್ತೆ. 2021ರಲ್ಲಿ ಈ ಬ್ರ್ಯಾಂಡ್ ಮೌಲ್ಯ 10 ಪಟ್ಟು ಏರಿಕೆಯಾಗಿದ್ದು, 150 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂದು ಬ್ಯುಸಿನೆಸ್ ಇನ್‌ಸೈಡರ್ ವರದಿ ಮಾಡಿತ್ತು. ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ ಕಂಪನಿ ನಿರ್ಮಾಣ ಸಂಸ್ಥೆ ಕೂಡ ಇವರದ್ದೇ. ಅಲ್ಲದೆ ಸ್ಟೈಲ್ ಕ್ರ್ಯಾಕರ್, ನೈಕಾ, ಫೂಲ್.ಕೋ ಕಂಪನಿಗಳಲ್ಲಿ ಇನ್ವೆಸ್ಟ್‌ಮೆಂಟ್ ಮಾಡಿದ್ದಾರೆ.

  English summary
  Bollywood Actress Alia Bhatt Net Worth And Social Media Post Charges Details, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X