ಮದುವೆ ತಯಾರಿಯಲ್ಲಿ ಆಲಿಯಾ-ರಣಬೀರ್ : ಸಜ್ಜಾಗುತ್ತಿದೆ ಅದ್ಧೂರಿ ಕಾಸ್ಟ್ಯೂಮ್
ಬಾಲಿವುಡ್ ನ ರೂಮರ್ ಲವ್ ಬರ್ಡ್ಸ್ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮುಂದಿನ ವರ್ಷ ಹಸೆಮಣೆ ಏರುತ್ತಾರೆ ಎನ್ನುವ ಸುದ್ದಿ ಬಾರಿ ಸದ್ದು ಮಾಡುತ್ತದೆ. ಅಂದ್ಹಾಗೆ ಇಬ್ಬರು ಮದುವೆ ಆಗ್ತಾರೆ ಎನ್ನುವ ವಿಚಾರ ಕೇಳಿಬರುತ್ತಿರುವುದು ಏನು ಹೊಸದೇನಲ್ಲ. ಆದ್ರೀಗ ಮುಂದಿನ ವರ್ಷ ಏಪ್ರಿಲ್ ನಲ್ಲಿ ಇಬ್ಬರ ಮದುವೆ ಎನ್ನುವ ವಿಚಾರ ಸದ್ದು ಮಾಡುತ್ತಿದೆ. ಆದ್ರಿಬಗ್ಗೆ ಈ ಜೋಡಿ ಎಲ್ಲೂ ತುಟಿ ಬಿಚ್ಚಿಲ್ಲ.
ಮೂಲಗಳ ಪ್ರಕಾರ ರಣಬೀರ್ ಮತ್ತು ಅಲಿಯಾ ಮುಂದಿನ ವರ್ಷ ಸಮ್ಮರ್ ನಲ್ಲಿ ಮದುವೆಯಾಗುವ ಪ್ಲಾನ್ ಮಾಡಿದ್ದಾರಂತೆ. ಅಂದ್ಹಾಗೆ ಇವರ ಮದುವೆ ವಿಚಾರ ಈ ಪರಿ ಚರ್ಚೆಯಾಗಲು ಕಾರಣವಾಗಿದ್ದು ಅಲಿಯಾ ಕಾಸ್ಟ್ಯೂಮ್. ಮದುವೆ ಕಾಸ್ಟ್ಯೂಮ್ ಅನ್ನು ಈಗಾಗಲೆ ಡಿಸೈನ್ ಮಾಡಿಸುತ್ತಿದ್ದಾರಂತೆ ಅಲಿಯಾ. ಯಾವುದೇ ಕಾರ್ಯಕ್ರಮವಾದ್ರು ವಿಶೇಷವಾಗಿ ಡಿಸೈನ್ ಮಾಡಿಸಿದ ಕಾಸ್ಟ್ಯೂಮ್ ಧರಿಸುವ ಸೆಲೆಬ್ರಿಟಿಗಳು, ಇನ್ನು ಮದುವೆ ವಿಚಾರಕ್ಕೆ ಬಂದರೆ ಕೇಳಬೇಕ.
ಸುಮಾರು ತಿಂಗಳುಗಳ ಮುಂಚಿತವಾಗಿಯೆ ಕಾಸ್ಟ್ಯೂಮ್ ಡಿಸೈನ್ ಗೆ ಅರ್ಡರ್ ಕೊಟ್ಟಿರುತ್ತಾರೆ. ಅಲಿಯಾ ಕೂಡ ತಮ್ಮ ಮದುವೆ ಕಾಸ್ಟ್ಯೂಮ್ ಗೆ ಈಗಾಗಲೆ ಆರ್ಡರ್ ಕೊಟ್ಟಿದ್ದಾರಂತೆ. ಭಾರತದ ಖ್ಯಾತ ಸೆಲೆಬ್ರಿಟಿ ಡಿಸೈನರ್ ಆಗಿರುವ ಸಬ್ಯಸಾಚಿ ಡಿಸೈನರ್ ಅಲಿಯಾ ಮದುವೆ ಲೆಹಂಗವನ್ನು ವಿಶೇಷವಾಗಿ ತಯಾರಿಸುತ್ತಿದ್ದಾರೆ.

ಬಾಲಿವುಡ್ ನ ಬಹುತೇಕ ಸೆಲೆಬ್ರಿಟಿಗಳಿಗೆ ಸಬ್ಯಸಾಚಿ ಡಿಸೈನರ್ ಅವರೇ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಪ್ರಿಯಾಂಕ ಚೋಪ್ರ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ಅನೇಕರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಮದುವೆ ಮಾತ್ರವಲ್ಲದೆ ವಿಶೇಷ ಕಾರ್ಯಕ್ರಮಗಳಿಗೂ ಸಬ್ಯಸಾಚಿ ಡಿಸೈನರ್ ವೇರ್ ಅನ್ನೆ ಬಾಲಿವುಡ್ ಸೆಲೆಬ್ರಿಟಿಗಳು ಧರಿಸುತ್ತಾರೆ.
ಅಲಿಯಾ ಭಟ್ ಕೂಡ ಅನೇಕ ಸಂದರ್ಭದಲ್ಲಿ ಸಬ್ಯಸಾಚಿ ಡಿಸೈನರ್ ವೇರ್ ಅನ್ನು ಧರಿಸಿದ್ದಾರೆ. ತಮ್ಮ ಮದುವೆಗೂ ಸಹ ವಿಶೇಷವಾಗಿ ಡಿಸೈನ್ ಮಾಡಿಸುತ್ತಿದ್ದಾರೆ ಅಲಿಯಾ. ಅಂದ್ಹಾಗೆ ಇಬ್ಬರ ಮದುವೆ ಹಬ್ಬಿರುವ ಸುದ್ದಿಗೆ ಅಲಿಯಾ ಕುಟುಂಬ ಗರಂ ಆಗಿದೆ. ಇದೆಲ್ಲ ಸುಳ್ಳು ಸುದ್ದಿ ಎಂದು ಹೇಳುತ್ತಿದ್ದಾರೆ. ಆದ್ರೆ ಮೂಲಗಳು ಮುಂದಿನ ವರ್ಷ ಇಬ್ಬರ ಮದುವೆ ಪಕ್ಕಾ ಎನ್ನುತ್ತಿವೆ. ಈ ಜೋಡಿ ಸದ್ಯ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಬ್ಯುಸಿಯಾಗಿದೆ.


Click it and Unblock the Notifications











