ಫೋಟೋ ವೈರಲ್; ಬಿಕಿನಿ ಧರಿಸಿ ಬೀಚ್ ನಲ್ಲಿ ಹಾಟ್ ಆದ ನಟಿ ಅಲಿಯಾ ಭಟ್

ಬಾಲಿವುಡ್ ಹಾಟ್ ನಟಿ ಅಲಿಯಾ ಭಟ್ ಸದ್ಯ ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಸೆಲೆಬ್ರಿಟಿಗಳ ಸ್ವರ್ಗ ಎಂದೇ ಖ್ಯಾತಿಗಳಿಸಿರುವ ಮಾಲ್ಡೀವ್ಸ್ ಗೆ ಭಾರತದ ಅನೇಕ ಸಿನಿ ಗಣ್ಯರು ಭೇಟಿ ನೀಡಿ ಸಖತ್ ಎಂಜಾಯ್ ಮಾಡಿದ್ದಾರೆ.

ಬಾಲಿವುಡ್ ಗಣ್ಯರು ಮಾತ್ರವಲ್ಲದೇ ದಕ್ಷಿಣ ಭಾರತದ ಖ್ಯಾತ ಕಲಾವಿದರು ಸಹ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದರು. ಇತ್ತೀಚಿಗಷ್ಟೆ ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಮತ್ತು ಇಬ್ಬರು ಮುದ್ದಾದ ಮಕ್ಕಳ ಜೊತೆ ಮಾಲ್ಡೀವ್ಸ್ ಪ್ರವಾಸ ಮುಗಿಸಿಕೊಂಡು ಬಂದಿದ್ದಾರೆ. ಇದೀಗ ಬಾಲಿವುಡ್ ನ ಮತ್ತೋರ್ವ ಖ್ಯಾತ ನಟಿ ಅಲಿಯಾ ಭಟ್ ಮಾಲ್ಡೀವ್ಸ್ ಕಡೆ ಪಯಣ ಬೆಳೆಸಿದ್ದಾರೆ.

ಬೀಚ್ ನಲ್ಲಿ ಹಾಟ್ ಆದ ಅಲಿಯಾ ಭಟ್

ಬೀಚ್ ನಲ್ಲಿ ಹಾಟ್ ಆದ ಅಲಿಯಾ ಭಟ್

ಅಲಿಯಾ ಭಟ್ ಮಾಲ್ಡೀವ್ಸ್ ಬೀಚ್ ನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲಿಯಾ ಬಿಕಿನಿ ಫೋಟೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕಾಮೆಂಟ್ ಗಳ ಸುರಿಮಳೆಯೇ ಬರುತ್ತಿದೆ.

ಸಮುದ್ರದಲ್ಲಿ ಕುಳಿತಿರುವ ಅಲಿಯಾ

ಸಮುದ್ರದಲ್ಲಿ ಕುಳಿತಿರುವ ಅಲಿಯಾ

ಅಲಿಯಾ ಬಿಕಿನಿ ಧರಿಸಿ ಸಮುದ್ರ ತೀರದ ಮರಳಿನ ಮೇಲೆ ಬಿಸಿಲಿಗೆ ಮೈಯೊಡ್ಡಿ ಕುಳಿತಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲಿಯಾ ಭಟ್ ಸಿನಿಮಾಗಳ ವಿಚಾರಕ್ಕೆ ಬರುವುದುದಾದರೆ, ಅಲಿಯಾ ಕೊನೆಯದಾಗಿ ಮಹೇಶ್ ಭಟ್ ನಿರ್ದೇಶನದ ಸಡಕ್ -2 ನಲ್ಲಿ ಕಾಣಿಸಿಕೊಂಡಿದ್ದರು.

ಆಲಿಯಾ ಬಳಿ ಇರುವ ಸಿನಿಮಾಗಳು

ಆಲಿಯಾ ಬಳಿ ಇರುವ ಸಿನಿಮಾಗಳು

ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಸದ್ಯ ರಣಬೀರ್ ಕಪೂರ್ ಜೊತೆ ಬ್ರಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಸಹ ಮುಗಿಸಿದ್ದಾರೆ.

Recommended Video

ಸಲಾರ್ ಗೆ ಎಂಟ್ರಿ ಕೊಟ್ಟ ಕನ್ನಡದ ಸ್ಟಾರ್ ವಿಲನ್ | Filmibeat Kannada
ಈ ವರ್ಷ ಹಸೆಮಣೆ ಏರುವ ಸಾಧ್ಯತೆ ಇದೆ

ಈ ವರ್ಷ ಹಸೆಮಣೆ ಏರುವ ಸಾಧ್ಯತೆ ಇದೆ

ಇನ್ನೂ ಈ ವರ್ಷ ಅಲಿಯಾ ಬಾಲಿವುಡ್ ಖ್ಯಾತ ನಟ ರಣ್ಬೀರ್ ಕಪೂರ್ ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಇಬ್ಬರ ಪ್ರೀತಿಯ ವಿಚಾರ ಗುಟ್ಟಾಗಿ ಉಳಿದಿಲ್ಲ. ಹೊಸ ವರ್ಷವನ್ನು ಒಟ್ಟಿಗೆ ಆಚರಣೆ ಮಾಡಿದ್ದ ಈ ಜೋಡಿ ಈ ವರ್ಷದಲ್ಲಿ ಹಸೆಮಣೆ ಏರುವುದು ಖಚಿತ ಎಂದು ಹೇಳಲಾಗುತ್ತಿದೆ.

More from Filmibeat

English summary
Bollywood Actress Alia Bhatt shares bikini photos from maldives.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X