For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಅಜ್ಜಿಯನ್ನು ಕಳೆದುಕೊಂಡ ದುಃಖದಲ್ಲಿ ನಟಿ ಅನನ್ಯಾ ಪಾಂಡೆ

  |

  ಬಾಲಿವುಡ್ ನ ಖ್ಯಾತ ನಟಿ ಅನನ್ಯಾ ಪಾಂಡೆ ಅಜ್ಜಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಅನನ್ಯಾ ಪಾಂಡೆ ಅಜ್ಜಿ, ಬಾಲಿವುಡ್ ನಟ ಚಂಕಿ ಪಾಂಡೆ ತಾಯಿ ಸ್ನೇಹಲತಾ ಪಾಂಡೆ ಶನಿವಾರ ಕೊನೆಯುಸಿರೆಳದರು. ಅಜ್ಜಿಯನ್ನು ಕಳೆದುಕೊಂಡ ದುಃಖವನ್ನು ಅನನ್ಯಾ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ.

  ಅಜ್ಜಿ "ಕುಟುಂಬದ ಜೀವ" ಎಂದು ಬರೆದುಕೊಂಡು ಅನನ್ಯಾ, ಅಜ್ಜಿ ಜೊತೆ ಇರುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 85 ವರ್ಷದ ಸ್ನೇಹಲತಾ ಪಾಂಡೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಖ್ಯಾತ ವೈದ್ಯರಾಗಿದ್ದ ಸ್ನೇಹಲತಾ ಅವರು ಅನೇಕ ತಿಂಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

  ಅನನ್ಯಾ ಪಂಡೆ ಅಜ್ಜಿ ನಿಧನಕ್ಕೆ ಅನೇಕ ಬಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಜ್ಜಿ ಜೊತೆ ಇರುವ ಫೋಟೋ ಶೇರ್ ಮಾಡಿ ಅನನ್ಯಾ, "85ನೇ ವಯಸ್ಸಿನ ವರೆಗೂ ಅವರ ಕೆಲಸಗಳನ್ನು ಅವರೇ ಮಾಡುತ್ತಿದ್ದರು. ಪ್ರತಿದಿನ ಬೆಳಗ್ಗೆ 7 ಗಂಟೆಗೆ ಎದ್ದು ಕೆಲಸ ಮಾಡುತ್ತಿದ್ದರು. ಪ್ರತಿದಿನ ನಮಗೆ ಸ್ಫೂರ್ತಿಯಾಗಿದ್ದರು. ನಮ್ಮ ಕುಟುಂಬದ ಜೀವ ಆಗಿದ್ದರು. ನಿಮ್ಮನ್ನು ಯಾವಾಗಲು ಪ್ರೀತಿಸುತ್ತೇನೆ" ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  ಅನನ್ಯಾ ಭಾವುಕ ಪೋಸ್ಟ್‌ಗೆ ಬಾಲಿವುಡ್‌ನ ಅನೇಕ ಮಂದಿ ಕಾಮಂಟ್ ಮಾಡಿದ್ದಾರೆ. ನವ್ಯಾನಂದಾ, ಭೂಮಿ ಪಡ್ನೇಕರ್, ಇಶಾನ್ ಖಟ್ಟರ್, ಶನಾಯಾ ಕಪೂರ್, ಮನೀಶ್ ಮಲ್ಹೋತ್ರಾ ಸೇರಿದಂತೆ ಅನೇಕರು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಕಳುಹಿಸಿದ್ದಾರೆ.

  ಎಲ್ಲದಕ್ಕೂ ಇವರಿಬ್ಬರೇ ಕಾರಣ ಎಂದ ರಕ್ಷಿತ್ ಶೆಟ್ಟಿ!! | Rakshith Shetty | Pushkar Mallikarjun | Filmibeat

  ಇನ್ನು ಸಿನಿಮಾ ವಿಚಾರಕ್ಕೆ ಬರುವಾದರೆ, ವಿಜಯ್ ದೇವರಕೊಂಡ ಜೊತೆ ಲೈಗರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಪುರಿ ಜನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಹಿಂದಿಯಲ್ಲಿ ಶಕುನ್ ಬಾತ್ರಾ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್ ಚತುರ್ವೇದಿ ಸಹ ಕಾಣಿಸಿಕೊಂಡಿದ್ದಾರೆ.

  English summary
  Bollywood Actress Ananya Pandey Grandmother, Chunky Panday mother passed away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X