''ನಾನು ಹುಡುಗರ ಜೊತೆ ಮಲಗೆದ್ದು ಮೂರು ವರ್ಷವಾಯಿತು'' ಎಂದ ಖ್ಯಾತ ನಟಿ..!
ಕ್ಷೇತ್ರ ಯಾವುದೇ ಇರಲಿ ಚಾಲ್ತಿಯಲ್ಲಿ ಇದ್ದರಷ್ಟೇ ಬೆಲೆ. ಇಲ್ಲದೇ ಇದ್ದರೆ ಎಷ್ಟೇ ಜಾಣನಾದರೂ ಜಗತ್ತು ಕೋಣ ಎಂದೇ ಅಂದುಕೊಳ್ಳುತ್ತೆ. ಗೆದ್ದೆತ್ತಿನ ಬಾಲವನ್ನೇ ಹಿಡಿಯುತ್ತೆ. ಈ ಕಾರಣಕ್ಕೆ ಚಲಾವಣೆಯಲ್ಲಿರಲು ಅನೇಕರು ಅನೇಕ ತರಹದ ಸರ್ಕಸ್ ಗಳನ್ನ ಇಲ್ಲಿ ಮಾಡ್ತಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಂತೂ ನಾನಾ ತರಹದ ಕಸರತ್ತುಗಳನ್ನ ಅನೇಕರು ಮಾಡಲು ಮುಂದಾಗುತ್ತಾರೆ. ತೀರಾ ತಮ್ಮ ಖಾಸಗಿ ವಿಚಾರಗಳ ಕುರಿತು ಬಹಿರಂಗವಾಗಿಯೇ ಮಾತನಾಡುವ ಮೂಲಕ ಪ್ರಚಾರದಲ್ಲಿರಲು ಬಯಸುತ್ತಾರೆ. ಇದಕ್ಕೆ ಉರ್ಫಿ ಜಾವೇದ್ ಸದ್ಯದ ಉದಾಹರಣೆ.
ಹೌದು, ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಆಗುತ್ತಿದ್ದಂತೆ ಅರ್ಧ ಮರ್ಧ ಬಟ್ಟೆ ಹಾಕಿಕೊಳ್ಳುವುದು ಮತ್ತು ಅದೇ ಅವತಾರದಲ್ಲಿ ಕ್ಯಾಮರಾಗಳಿಗೆ ಪೋಸು ಕೊಡುವುದನ್ನೇ ಫುಲ್ ಟೈಮ್ ಕೆಲಸವನ್ನಾಗಿಸಿಕೊಂಡಿರುವ ಉರ್ಫಿ ಜಾವೇದ್ ಸದ್ಯಕ್ಕೆ ತಮ್ಮ ಸೆ* ಲೈಫ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮೂರು ವರ್ಷ ಆಯಿತು ನಾನು ಪುರುಷನ ಜೊತೆ ದೈಹಿಕ ಸಂಪರ್ಕವನ್ನು ಬೆಳೆಸಿಲ್ಲ ಎಂದಿದ್ದಾರೆ.

''ಫಾಲೋ ಕರ್ ಲೇ ಯಾರ್'' ಎಂಬ ವೆಬ್ ಸರಣಿಯಲ್ಲಿ ಮಾತನಾಡಿರುವ ಉರ್ಫಿ ಜಾವೇದ್, ನಾನು ಕಳೆದ ಮೂರು ವರ್ಷಗಳಿಂದ ಸೆ* ಮಾಡಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಈ ಮೂರು ವರ್ಷದಲ್ಲಿ ನಾನು ಕಿಸ್ ಕೂಡ ಮಾಡಿಲ್ಲ, ಪುರುಷನ ಜೊತೆ ರೊಮ್ಯಾಂಟಿಕ್ ಆಗಿ ಮಾತನಾಡಿಯೂ ಇಲ್ಲ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.
ಇದಕ್ಕೆ ಕಾರಣವನ್ನು ಕೂಡ ನೀಡಿರುವ ಉರ್ಫಿ ಜಾವೇದ್ ನಾನು ಸಾಯುವದರೊಳಗೆ ನನ್ನ ಬಳಿ ಪ್ರೈವೆಟ್ ಜೆಟ್ ಇರಬೇಕು ಅನ್ನುವುದು ನನ್ನ ಆಸೆ. ಹೀಗಾಗಿ ನಾನು ಎಲ್ಲಿಯವರೆಗೆ ಪ್ರೈವೆಟ್ ಜೆಟ್ ಖರೀದಿ ಮಾಡುವುದಿಲ್ಲವೋ ಅಲ್ಲಿಯವರೆಗೆ ನಾನು ಈ ಮೋಹ ಮತ್ತು ಕಾಮದಿಂದ ದೂರ ಇರುವುದಾಗಿ ಮೂರು ವರ್ಷದ ಹಿಂದೆ ಶಪಥ ಮಾಡಿದ್ದೆ ಎಂದಿದ್ದಾರೆ. ನಾನು ತುಂಬಾನೇ ಸ್ವಾಭಿಮಾನಿ. ನಾನು ಈ ಹಂತಕ್ಕೆ ಬರಲು ನನ್ನ ಪರಿಶ್ರಮವೇ ಕಾರಣ, ಬದುಕಿನಲ್ಲಿ ಏನೆಲ್ಲ ಇದೆ ಅದೆಲ್ಲವನ್ನು ನಾನೇ ಪಡೆದುಕೊಂಡಿದ್ದೇನೆ ಎಂದಿರುವ ಉರ್ಫಿ, ನನ್ನ ಸಂಗಾತಿ ಜೊತೆ ನಾನು ದುರ್ಬಲವಾಗಿ ಕಾಣಿಸಿಕೊಳ್ಳಲು ಇಷ್ಟ ಪಡಲ್ಲ ಎಂದು ಹೇಳಿದ್ದಾರೆ.

ಅಂದ್ಹಾಗೇ ಈ ''ಫಾಲೋ ಕರ್ ಲೇ ಯಾರ್'' ಎಂಬ ವೆಬ್ ಸರಣಿ ಮೂಲಕ ಉರ್ಫಿ ಜಾವೇದ್, ತಮ್ಮ ಬದುಕಿನ ಚಿತ್ರಣವನ್ನು ಜನರ ಮುಂದೆ ಇಡುವ ಪ್ರಯತ್ನ ಮಾಡಿದ್ದಾರೆ. ತಮ್ಮ ದೈನಂದಿನ ಚಟುವಟಿಕೆಗಳಿಗೆ ಈ ಸರಣಿ ಮೂಲಕ ಕೈಗನ್ನಡಿ ಹಿಡಿದಿದ್ದಾರೆ. ಅರ್ಧ ಘಂಟೆಯ ಒಂಬತ್ತು ಸಂಚಿಕೆಗಳನ್ನೊಂದಿರುವ ಈ ವೆಬ್ ಸರಣಿಯಲ್ಲಿ, ಉರ್ಫಿ ಬದುಕಿನ ಕುರಿತು ಹತ್ತಾರು ಪ್ರಶ್ನೆಗಳಿಗೆ ಉತ್ತರಗಳಿವೆ. ಕ್ಯಾಮರಾದ ಮೇಲೆ ತಮಗೆ ಇರುವ ಮೋಹ, ತಮ್ಮ ಜೀವನ ಶೈಲಿ ಎಲ್ಲದರ ಕುರಿತು ಉರ್ಫಿ ಇಲ್ಲಿ ಮಾತನಾಡಿದ್ದಾರೆ. ಈ ವೆಬ್ ಸೀರಿಸ್‌ನಲ್ಲಿ ಉರ್ಫಿಯ ಸ್ನೇಹಿತರು ಮತ್ತು ಕುಟುಂಬಸ್ಥರು ಕೂಡ ಇದ್ದಾರೆ. ಆಸಕ್ತರು ಈ ವೆಬ್ ಸರಣಿಯನ್ನು ಅಮೆಜಾನ್ ಫ್ರೈಮ್‌ನಲ್ಲಿ ನೋಡಬಹುದು. '
ಸದ್ಯಕ್ಕೆ ಉರ್ಫಿ ಜಾವೇದ್ ಸೆ* ಕುರಿತು ಮಾತನಾಡಿದ ಈ ಮಾತು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಪರ ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಕೆಲ ವ್ಯೆಯಕ್ತಿಕ ವಿಚಾರಗಳು ವ್ಯೆಯಕ್ತಿವಾಗಿಯೇ ಇರಬೇಕು, ಎಲ್ಲವನ್ನೂ ಪ್ರಚಾರದ ಸರಕನ್ನಾಗಿ ಬಳಿಸಿಕೊಳ್ಳಬಾರದು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











