'ಗರ್ಭಿಣಿ ಆಗಿದ್ದಾರೆ' ಎನ್ನುವ ಸುದ್ದಿ ಕೇಳಿ ಗರಂ ಆದ ವಿರಾಟ್ ಕೊಹ್ಲಿ ಪತ್ನಿ

ಬಾಲಿವುಡ್ ನಟಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಫುಲ್ ಗರಂ ಆಗಿದ್ದಾರೆ. ಇತ್ತೀಚಿಗೆ ಅನುಷ್ಕಾ ಶರ್ಮಾ ಅಭಿನಯದ ಯಾವುದೆ ಸಿನಿಮಾಗಳು ರಿಲೀಸ್ ಆಗಿಲ್ಲ. ಅಷ್ಟಕ್ಕೂ ಅನುಷ್ಕಾ ಕಳೆದ ಒಂದು ವರ್ಷದಿಂದ ಯಾವುದೆ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿಲ್ಲ.

ಶಾರುಖ್ ಖಾನ್ ಜೊತೆ ಝೀರೋ ಸಿನಿಮಾದಲ್ಲಿ ಮಿಂಚಿದ್ದ ಅನುಷ್ಕಾ ಆನಂತರ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಹಾಗಾಗೆ ಅನುಷ್ಕಾ ಬಗ್ಗೆ ದೊಡ್ಡ ಸುದ್ದಿಯೊಂದು ಹರಿದಾಡುತ್ತಿತ್ತು. ಹೌದು, ಅನುಷ್ಕಾ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿತ್ತು. ಆದ್ರೆ ಈ ಬಗ್ಗೆ ಅನುಷ್ಕಾ ಎಲ್ಲೂ ಪ್ರತಿಕ್ರಿಯೆ ನೀಜಿರಲಿಲ್ಲ. ಆದ್ರೀಗ ಪ್ರಗ್ನೆನ್ಸಿ ವದಂತಿ ಬಗ್ಗೆ ಮೌನ ಮುರಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿದ ಅನುಷ್ಕಾ "ಮದುವೆ ಆದ ನಂತರ ಎಲ್ಲರು ಗರ್ಭಿಣಿನಾ? ಅಂತ ಕೇಳುತ್ತಾರೆ. ಗಾಳಿ ಸುದ್ದಿಯನ್ನು ಸುಮ್ಮನೆ ಹಬ್ಬಿಸುತ್ತಿರುತ್ತಾರೆ. ಯಾರಾದ್ರು ಇಬ್ಬರು ಫ್ರೆಂಡ್ಸ್ ಆಗಿದ್ದರೆ ಮದುವೆ ಯಾವಾಗ? ಎಂದು ಕೇಳುತ್ತಾರೆ. ಅನಗತ್ಯ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಸ್ವಲ್ಪ ದೊಡ್ಡ ಬಟ್ಟೆಯನ್ನು ಹಾಕಿಕೊಂಡರೆ ಅವರು ಗರ್ಭಿಣಿ ಎಂದು ನಿರ್ಧಾರ ಮಾಡುತ್ತಾರೆ. ಆದ್ರೆ ಅದು ಟ್ರೆಂಡ್ ಆಗಿರುತ್ತೆ. ಅವರೆಲ್ಲ ಹೀಗೆ ಹೇಳುತ್ತಿರವುದು ಮಂಗನನ್ನು ಬೆನ್ನಹಿಂದೆ ಕಟ್ಟಿಕೊಂಡಹಾಗೆ ಹಾಗಿದೆ. ಏನು ಮಾಡಲು ಸಾಧ್ಯವಿಲ್ಲ, ಹಾಗಾಗಿ ನಿರ್ಲಕ್ಷ್ಯ ಮಾಡಬೇಕಿದೆ ಅಷ್ಟೆ" ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Bollywood Actress Anushka Sharma Reaction About Against Pregnancy Rumours

ಅನುಷ್ಕಾ ಸೂಯಿ ಧಾಗ ಚಿತ್ರದ ನಂತರ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದ್ರೀಗ ಚಿತ್ರದಿಂದ ಕೊಂಚ ಬ್ರೇಕ್ ಪಡಿಸಿದ್ದಾರೆ. ಚಿತ್ರೀಕರಣದಿಂದ ದೂರ ಉಳಿದಿರುವ ಅನುಷ್ಕಾ ಪತಿ ವಿರಾಟ್ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ವರ್ಲ್ಡ್ ಕಪ್ ನಲ್ಲಿ ಪತಿಗೆ ಚಿಯರ್ ಮಾಡಿಲು ಇಂಗ್ಲೆಂಡ್ ಗೆ ತೆರಳಿದ್ದರು. ಆನಂತರ ಪತಿಯ ಜೊತೆಗೆ ವಿದೇಶ ಸುತ್ತಾಡುತ್ತಿದ್ದಾರೆ.

More from Filmibeat

English summary
Bollywood actress Anushka Sharma reaction about against pregnancy rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X