ಸೀರೆ ಉಡೋಕೆ ಮರೆತು ಕೈಯಿಂದ ಮೈ ಮುಚ್ಚಿಕೊಂಡ ಭೂಮಿ ಪೆಡ್ನೇಕರ್..!

ಕ್ಷೇತ್ರ ಯಾವುದೇ ಇರಲಿ ಚಾಲ್ತಿಯಲ್ಲಿ ಇದ್ದರಷ್ಟೇ ಬೆಲೆ. ಇಲ್ಲದೇ ಇದ್ದರೆ ಎಷ್ಟೇ ಜಾಣನಾದರೂ ಜಗತ್ತು ಕೋಣ ಎಂದೇ ಅಂದುಕೊಳ್ಳುತ್ತೆ. ಗೆದ್ದೆತ್ತಿನ ಬಾಲವನ್ನೇ ಹಿಡಿಯುತ್ತೆ. ಈ ಕಾರಣಕ್ಕೆ ಚಲಾವಣೆಯಲ್ಲಿರಲು ಅನೇಕರು ಅನೇಕ ತರಹದ ಸರ್ಕಸ್ ಗಳನ್ನ ಇಲ್ಲಿ ಮಾಡ್ತಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಂತೂ ನಾನಾ ತರಹದ ಕಸರತ್ತುಗಳನ್ನ ಅನೇಕರು ಮಾಡಲು ಮುಂದಾಗ್ತಾರೆ. ಇದಕ್ಕೆ ಭೂಮಿ ಪೆಡ್ನೇಕರ್ ಸದ್ಯದ ತಾಜಾ ಉದಾಹರಣೆ

ಹೌದು, ಭೂಮಿ ಪೆಡ್ನೇಕರ್.. ಒಂದ್ಕಾಲದ ಗಜಗಾಮಿನಿ. ಧಮ್ ಲಗಾಕೇ ಐಸಾ ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿದ ಭೂಮಿ, ಆ ನಂತರ ಟಾಯ್ಲೆಟ್ - ಏಕ್ ಪ್ರೇಮ್ ಕತಾ ಚಿತ್ರ ಬಂದಾಗ ಬಳುಕುವ ಬಳ್ಳಿಯಂತೆ ಆಗಿದ್ದರು. ಭೂಮಿಯಲ್ಲಾದ ಈ ಬದಲಾವಣೆಯನ್ನ ಕಂಡು, ಆ ಕಾಲಕ್ಕೆ.. ಅನೇಕರು ನಿಬ್ಬೇರಗಾಗಿದ್ದರು. ಭೂಮಿ ಪೆಡ್ನೇಕರ್ ಅವರ ಶ್ರದ್ಧೆ-ಹಠ ಮೆಚ್ಚಿ ಒಳ್ಳೇಯ ಮಾತುಗಳನ್ನಾಡಿದ್ದರು.

bollywood-actress-bhumi-pednekar-turns-heads-in-striking-all-black-attire

ಆದರೆ ಅವತ್ತು ಭೂಮಿ ಪೆಡ್ನೇಕರ್ ಅವರನ್ನ ಹೊಗಳಿದ್ದ.. ಮೆಚ್ಚಿಕೊಂಡಿದ್ದ.. ಜನರೇ ಇವತ್ತು ಭೂಮಿಗೆ ಉಗಿತಿದ್ದಾರೆ. ಯಾಕೆಂದರೆ .. ತನ್ನ ಅಭಿನಯದಿಂದ ಮತ್ತು ಪಾತ್ರಗಳ ಆಯ್ಕೆಯಿಂದ ಜನ ಮನ ಗೆದ್ದಿರುವ ಭೂಮಿ ಪಡ್ನೇಕರ್ ಅವರ ತಲೆಯನ್ನ ಅದ್ಯಾವ ಪುಣ್ಯಾತ್ಮ ಕೆಡಿಸಿದನೋ ಗೊತ್ತಿಲ್ಲ. ಗೋಣಿ ಚೀಲವನ್ನೂ ಬಿಡದ ಉರ್ಫಿ ಜಾವೇದ್ ಜೊತೆ ಭೂಮಿ ಪೆಡ್ನೇಕರ್ ಸ್ಫರ್ಧೆಗಿಳಿದಿದ್ದಾರೆ. ಇದಕ್ಕೆ ಈ ಹೊಚ್ಚ ಹೊಸ ಫೋಟೋಗಳೇ ಸಾಕ್ಷಿ

ಹೌದು, ಮೊನ್ನೆಯಷ್ಟೇ ಬ್ರಾ ಧರಿಸದೇ ವೈಟ್‌ ಲಾಂಗ್‌ ಸ್ಕರ್ಟ್‌ ಹಾಗೂ ವಿಭಿನ್ನವಾಗಿರುವ ವೈಟ್‌ ಬ್ಲೇಜರ್‌ ಹಾಕಿಕೊಂಡು ಕಣ್ಮನ ಸೆಳೆಯುವ ಪ್ರಯತ್ನ ಮಾಡಿದ್ದ ಭೂಮಿ ಪೆಡ್ನೇಕರ್ ಸದ್ಯಕ್ಕೆ ಕಪ್ಪು ಬಟ್ಟೆಯಲ್ಲಿ ಕಂಗೊಳಿಸಿದ್ದಾರೆ. ಸೀರೆ ಉಡುವುದನ್ನೇ ಮರೆತಂತೆ, ಕೇವಲ ತಮ್ಮ ಕೈಯಿಂದ ಮೈ ಮುಚ್ಚಿಕೊಂಡಿದ್ದಾರೆ. ಸದ್ಯಕ್ಕೆ.. ಭೂಮಿ ಪೆಡ್ನೇಕರ್ ಈ ಹಾಟ್ ಅವತಾರ ಸಾಮಾಜಿಕ ಜಾಲತಾಣಕ್ಕೆ ಕಿಚ್ಚು ಹಚ್ಚಿದೆ. ಪಡ್ಡೆ ಹುಡುಗರ ತಾಪಮಾನ ಕೂಡ ಈ ಫೋಟೋಗಳಿಂದ ಹೆಚ್ಚಾಗಿದೆ.

bollywood-actress-bhumi-pednekar-turns-heads-in-striking-all-black-attire

ಭೂಮಿ ಪೆಡ್ನೇಕರ್ ಅವರ ಈ ಬಿಂದಾಸ್ ಅವತಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ನೀವು ತುಂಬಾನೇ ಔಟ್ ಡೇಟೆಡ್ ಯಾಕೆಂದರೆ ಜೀರೋ ಫಿಗರ್ ತೋರಿಸೋದೆಲ್ಲ ಈಗ ವರ್ಕ್ ಆಗೋದಿಲ್ಲ ಎಂದರೆ, ಇನ್ನೂ ಕೆಲವರು ಇದೆಲ್ಲ ಓಲ್ಡ್ ಫ್ಯಾಷನ್ ಅಂದಿದ್ದಾರೆ.

ಇನ್ನೂ ಹಲವರು ಬಾಲಿವುಡ್‌ನಲ್ಲಿ ನಿಮಗೆ ನಿಮ್ಮದೇ ಆದ ಸ್ಥಾನ-ಮಾನ ಇದೆ ಅದನ್ನ ಕಳೆದುಕೊಳ್ಳಬೇಡಿ ಎಂಬ ಕಿವಿ ಮಾತನ್ನ ಹೇಳಿದ್ದರೆ, ಇನ್ನೂ ಬಹುತೇಕರು ಕಾಲ ಉರುಳಿದಂತೆ ನೀವ್ಯಾಕೇ ಇಷ್ಟು ಬದಲಾಗುತ್ತಿದ್ದೀರಾ ಎಂದು ಕಿಡಿಯನ್ನೂ ಕಾರಿದ್ದಾರೆ. ಭೂಮಿ ಪೆಡ್ನೇಕರ್ ಅವರ ಅವತಾರಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಕಿಡಿಯನ್ನೂ ಕಾರಿದ್ದಾರೆ

bollywood-actress-bhumi-pednekar-turns-heads-in-striking-all-black-attire

ಇನ್ನೂ ಭೂಮಿ ಪೆಡ್ನೇಕರ್ ಗೆ ಈಗ 34ರ ಹರೆಯ. ಬಾಲಿವುಡ್‌ಗೆ ಬಂದು 09 ವರ್ಷಗಳಾಗಿವೆ. ಈ 09 ವರ್ಷದಲ್ಲಿ ಭೂಮಿ ಪೆಡ್ನೇಕರ್ ಖಾಲಿ ಕುಳಿತ ಉದಾಹರಣೆ ಇಲ್ಲ. ಅದರಲ್ಲಿಯೂ 2019ರ ನಂತರ ವರ್ಷಕ್ಕೆ ಮೂರು ನಾಲ್ಕು ಸಿನಿಮಾಗಳನ್ನ ಮಾಡುತ್ತಾ ಬಂದವರು ಭೂಮಿ ಪೆಡ್ನೇಕರ್.

ಇಂಥಾ ಭೂಮಿ ಪೆಡ್ನೇಕರ್ ಕೈಯಲ್ಲಿ ಸದ್ಯಕ್ಕೆ ಕೇವಲ ಒಂದು ಸಿನಿಮಾ ಮಾತ್ರ ಇದೆ. ಉಳಿದಂತೆ ಬಾಲಿವುಡ್ ನಲ್ಲಿ ಸದ್ಯಕ್ಕೆ ಹೊರಬರದ್ದೇ ಪಾತುಪತ್ಯ. ಈ ಕಾರಣಕ್ಕೆ ಬಾಲಿವುಡ್‌ನವರ ಗಮನ ಸೆಳೆಯಲು, ಭೂಮಿ ಪೆಡ್ನೇಕರ್ ಮಾಡ್ತಿರುವ ಬಗೆ ಬಗೆಯ ಕಸರತ್ತುಗಳ ಪೈಕಿ ಇದು ಕೂಡ ಒಂದು ಎಂಬ ಭೂಮಿ ಪೆಡ್ನೇಕರ್ ಮಾಡ್ತಿರುವ ಬಗೆ ಬಗೆಯ ಕಸರತ್ತುಗಳ ಪೈಕಿ ಇದು ಒಂದು ಎಂಬ ವಾದ ಅನೇಕರದ್ದು.

bollywood-actress-bhumi-pednekar-turns-heads-in-striking-all-black-attire

ಒಟ್ನಲ್ಲಿ ಭೂಮಿ ಪೆಡ್ನೇಕರ್ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಈ ಅವತಾರದಿಂದ ಹಿಗ್ಗಾಮುಗ್ಗಾ ಟ್ರೋಲ್‌ಗೆ ಒಳಗಾಗ್ತಿದ್ದಾರೆ. ಹೇಗಿದ್ದ ನಟಿ ಹೀಗ್ಯಾಕೇ ಆದರು ಎಂದು ಅನೇಕರು, ಭೂಮಿಯನ್ನ ತರಾಟೆ ತೆಗೆದುಕೊಳ್ತಿದ್ದಾರೆ. ಭೂಮಿ ಪೆಡ್ನೇಕರ್ ಇವೆಲ್ಲ ಅಭಿಪ್ರಾಯಗಳನ್ನ ಗಮನಿಸಿದ್ದಾರಾ ಅನ್ನುವುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.

More from Filmibeat

English summary
Bollywood Actress Bhumi Pednekar Mesmerizes Fans with Stunning Photos in a Black Bandeau Top and Skirt
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X