ಉರ್ಫಿ ಜಾವೇದ್ ಗೆ ಸೆಡ್ಡು ಹೊಡೆಯಲು ಭೂಮಿ ಪೆಡ್ನೇಕರ್ ತಯಾರಿ..!
ಕ್ಷೇತ್ರ ಯಾವುದೇ ಇರಲಿ ಚಾಲ್ತಿಯಲ್ಲಿ ಇದ್ದರಷ್ಟೇ ಬೆಲೆ. ಇಲ್ಲದೇ ಇದ್ದರೆ ಎಷ್ಟೇ ಜಾಣನಾದರೂ ಜಗತ್ತು ಕೋಣ ಎಂದೇ ಅಂದುಕೊಳ್ಳುತ್ತೆ. ಗೆದ್ದೆತ್ತಿನ ಬಾಲವನ್ನೇ ಹಿಡಿಯುತ್ತೆ. ಈ ಕಾರಣಕ್ಕೆ ಚಲಾವಣೆಯಲ್ಲಿರಲು ಅನೇಕರು ಅನೇಕ ತರಹದ ಸರ್ಕಸ್ ಗಳನ್ನ ಇಲ್ಲಿ ಮಾಡ್ತಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಂತೂ ನಾನಾ ತರಹದ ಕಸರತ್ತುಗಳನ್ನ ಅನೇಕರು ಮಾಡಲು ಮುಂದಾಗ್ತಾರೆ. ಇದಕ್ಕೆ ಭೂಮಿ ಪೆಡ್ನೇಕರ್ ಸದ್ಯದ ತಾಜಾ ಉದಾಹರಣೆ
ಹೌದು, ಭೂಮಿ ಪೆಡ್ನೇಕರ್.. ಒಂದ್ಕಾಲದ ಗಜಗಾಮಿನಿ. ಧಮ್ ಲಗಾಕೇ ಐಸಾ ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿದ ಭೂಮಿ, ಆ ನಂತರ ಟಾಯ್ಲೆಟ್ - ಏಕ್ ಪ್ರೇಮ್ ಕತಾ ಚಿತ್ರ ಬಂದಾಗ ಬಳುಕುವ ಬಳ್ಳಿಯಂತೆ ಆಗಿದ್ದರು. ಭೂಮಿಯಲ್ಲಾದ ಈ ಬದಲಾವಣೆಯನ್ನ ಕಂಡು, ಆ ಕಾಲಕ್ಕೆ.. ಅನೇಕರು ನಿಬ್ಬೇರಗಾಗಿದ್ದರು. ಭೂಮಿ ಪೆಡ್ನೇಕರ್ ಅವರ ಶ್ರದ್ಧೆ-ಹಠ ಮೆಚ್ಚಿ ಒಳ್ಳೇಯ ಮಾತುಗಳನ್ನಾಡಿದ್ದರು.

ಆದರೆ ಅವತ್ತು ಭೂಮಿ ಪೆಡ್ನೇಕರ್ ಅವರನ್ನ ಹೊಗಳಿದ್ದ.. ಮೆಚ್ಚಿಕೊಂಡಿದ್ದ.. ಜನರೇ ಇವತ್ತು ಭೂಮಿಗೆ ಉಗಿತಿದ್ದಾರೆ. ಯಾಕೆಂದರೆ .. ತನ್ನ ಅಭಿನಯದಿಂದ ಮತ್ತು ಪಾತ್ರಗಳ ಆಯ್ಕೆಯಿಂದ ಜನ ಮನ ಗೆದ್ದಿರುವ ಭೂಮಿ ಪಡ್ನೇಕರ್ ಅವರ ತಲೆಯನ್ನ ಅದ್ಯಾವ ಪುಣ್ಯಾತ್ಮ ಕೆಡಿಸಿದನೋ ಗೊತ್ತಿಲ್ಲ. ಗೋಣಿ ಚೀಲವನ್ನೂ ಬಿಡದ ಉರ್ಫಿ ಜಾವೇದ್ ಜೊತೆ ಭೂಮಿ ಪೆಡ್ನೇಕರ್ ಸ್ಫರ್ಧೆಗಿಳಿದಿದ್ದಾರೆ. ಇದಕ್ಕೆ ಮೊನ್ನೆ ನಡೆದ ಫ್ಯಾಷನ್ ಶೋ ಸಾಕ್ಷಿ
ಫ್ಯಾಷನ್ ಶೋವೊಂದರಲ್ಲಿ ಇತ್ತೀಚೆಗಷ್ಟೇ ಭಾಗಿಯಾಗಿದ್ದ ಭೂಮಿ, ಬ್ರಾ ಇಲ್ಲದೆ ವಿಚಿತ್ರವಾದ ಕಾಸ್ಟೂಮ್‌ನಲ್ಲಿ ಕಣ್ಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ವೈಟ್ ಲಾಂಗ್ ಸ್ಕರ್ಟ್ ಹಾಗೂ ವಿಭಿನ್ನವಾಗಿರುವ ವೈಟ್ ಬ್ಲೇಜರ್ ಹಾಕಿಕೊಂಡು ಪ್ರತ್ಯಕ್ಷವಾದ ಭೂಮಿ ಪೆಡ್ನೇಕರ್ ಅನೇಕರನ್ನ ತಬ್ಬಿಬ್ಬುಗೊಳಿಸಿದ್ದಾರೆ. ಬೇರೆಯವರ ಕಥೆ ಬಿಡಿ ತಾವೇ ಖುದ್ದು ಮುಜಗರಕ್ಕೂ ಒಳಗಾಗಿದ್ದಾರೆ
ಅಸಲಿಗೆ ಭೂಮಿ ಧರಿಸಿದ್ದ ಬಟ್ಟೆಯಲ್ಲಿ, ಏನೋ ವ್ಯತ್ಯಾಸ ಕಂಡು ಬಂದಿದೆ. ಅಲ್ಲಿದ್ದವರ ಗಮನಕ್ಕೂ ಬಂದಿದೆ. ಆ ವಿಚಾರವನ್ನ ಭೂಮಿ ಬಳಿ ಅವರು ಹೇಳಿದ್ದೇ ತಡ, ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಂಡು ಬೋರ್ಡ್ ಹಿಂದೆ ಹೋಗಿದ್ದಾರೆ. ಅಲ್ಲಿ ಕಾಸ್ಟ್ಯೂಮ್ ಸರಿ ಪಡಿಸಿಕೊಂಡಿದ್ದಾರೆ. ಭೂಮಿಯ ಈ ನಡೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್ ಕೂಡ ಆಗಿದೆ
ಈ ಎಲ್ಲ ಕಾರಣಗಳಿಂದ ಭೂಮಿ ಮೇಲೆ ಸಿಟ್ಟಾಗಿರುವ ಅನೇಕರು, ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಉರ್ಫಿ ಜಾವೇದ್ ಜೊತೆ ಭೂಮಿ ಪೆಡ್ನೇಕರ್ ಅವರ ಹೋಲಿಕೆಯನ್ನ ಮಾಡುತ್ತಿದ್ದಾರೆ. ಇರುವ ಒಬ್ಬ ಉರ್ಫಿ ಜಾವೇದ್ ಅವರನ್ನೇ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಈ ಸಮಯದಲ್ಲಿ ನೀವು ಅವರಂತೆ ಆಗಬೇಡಿ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಬಾಲಿವುಡ್‌ನಲ್ಲಿ ನಿಮಗೆ ನಿಮ್ಮದೇ ಆದ ಸ್ಥಾನ-ಮಾನ ಇದೆ ಅದನ್ನ ಕಳೆದುಕೊಳ್ಳಬೇಡಿ ಅನ್ನುತ್ತಿದ್ದಾರೆ. ಉರ್ಫಿ ಜಾವೇದ್ ಜೊತೆ ಬಟ್ಟೆಯ ವಿಚಾರದಲ್ಲಿ ಸ್ಫರ್ಧೆ ಎಲ್ಲ ಮಾಡಬೇಡಿ ಎಂಬ ಸಲಹೆಯನ್ನ ಕೂಡ ಅನೇಕರು ಭೂಮಿ ಪೆಡ್ನೇಕರ್ ಅವರಿಗೆ ಕೊಡುತ್ತಿದ್ದಾರೆ.
ಇನ್ನೂ ಭೂಮಿ ಪೆಡ್ನೇಕರ್ ಗೆ ಈಗ 34ರ ಹರೆಯ. ಬಾಲಿವುಡ್‌ಗೆ ಬಂದು 09 ವರ್ಷಗಳಾಗಿವೆ. ಈ 09 ವರ್ಷದಲ್ಲಿ ಭೂಮಿ ಪೆಡ್ನೇಕರ್ ಖಾಲಿ ಕುಳಿತ ಉದಾಹರಣೆ ಇಲ್ಲ. ಅದರಲ್ಲಿಯೂ 2019ರ ನಂತರ ವರ್ಷಕ್ಕೆ ಮೂರು ನಾಲ್ಕು ಸಿನಿಮಾಗಳನ್ನ ಮಾಡುತ್ತಾ ಬಂದವರು ಭೂಮಿ ಪೆಡ್ನೇಕರ್. ಇಂಥಾ ಭೂಮಿ ಪೆಡ್ನೇಕರ್ ಕೈಯಲ್ಲಿ ಸದ್ಯಕ್ಕೆ ಕೇವಲ ಒಂದು ಸಿನಿಮಾ ಮಾತ್ರ ಇದೆ. ಉಳಿದಂತೆ ಬಾಲಿವುಡ್ ನಲ್ಲಿ ಸದ್ಯಕ್ಕೆ ಹೊರಬರದ್ದೇ ಪಾತುಪತ್ಯ. ಈ ಕಾರಣಕ್ಕೆ ಬಾಲಿವುಡ್‌ನವರ ಗಮನ ಸೆಳೆಯಲು, ಭೂಮಿ ಪೆಡ್ನೇಕರ್ ಮಾಡ್ತಿರುವ ಬಗೆ ಬಗೆಯ ಕಸರತ್ತುಗಳ ಪೈಕಿ ಇದು ಒಂದು ಎಂಬ ಅಭಿಪ್ರಾಯವನ್ನೂ ಕೂಡ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಒಟ್ನಲ್ಲಿ ಭೂಮಿ ಪೆಡ್ನೇಕರ್ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಈ ಅವತಾರದಿಂದ ಹಿಗ್ಗಾಮುಗ್ಗಾ ಟ್ರೋಲ್‌ಗೆ ಒಳಗಾಗ್ತಿದ್ದಾರೆ. ಹೇಗಿದ್ದ ನಟಿ ಹೀಗ್ಯಾಕೇ ಆದರು ಎಂದು ಅನೇಕರು, ಭೂಮಿಯನ್ನ ತರಾಟೆ ತೆಗೆದುಕೊಳ್ತಿದ್ದಾರೆ. ಭೂಮಿ ಪೆಡ್ನೇಕರ್ ಇವೆಲ್ಲ ಅಭಿಪ್ರಾಯಗಳನ್ನ ಗಮನಿಸಿದ್ದಾರಾ ಅನ್ನುವುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.


Click it and Unblock the Notifications











