ಆ ಕನ್ನಡ ನಟನ ಸಿನಿಮಾಗಳಲ್ಲಿ ನಾಯಕಿ ಹೊಕ್ಕಳು ಮೇಲೆ ಹಣ್ಣು, ತರಕಾರಿ ಹಾಕೋದೇ ಆಯ್ತು.. ವಿಚಿತ್ರ ಅನ್ನಿಸ್ತು

ದಕ್ಷಿಣದ ಸಿನಿಮಾಗಳಲ್ಲಿ ನಟಿಯರ ಸೊಂಟ, ಹೊಕ್ಕುಳ ಮೇಲೆ ಬಹಳ ಫೋಕಸ್ ಮಾಡ್ತಾರೆ. ನಟಿಯರ ಹೊಕ್ಕುಳ ಮೇಲೆ ಹಣ್ಣಿನಿಂದ ಹೊಡೆದರೆ ಅವರಿಗೆ ಅದೇನು ಸಂತೋಷ ಸಿಗುತ್ತೋ ಗೊತ್ತಿಲ್ಲ ಎಂದು ಬಾಲಿವುಡ್ ನಟಿಯರು ಆಗಾಗ್ಗೆ ಕಾಮೆಂಟ್ ಮಾಡುತ್ತಾರೆ. ತಾಪ್ಸಿ ಪನ್ನು ಸೇರಿದಂತೆ ಉತ್ತರದ ಕೆಲ ನಟಿಯರು ಇಂತಹ ವಾದ ಮುಂದಿಡುತ್ತಾರೆ. ಮುಂಬೈ ಬೆಡಗಿ ಡೈಸಿ ಶಾ ಈಗ ಇಂಥದ್ದೇ ಕಾಮೆಂಟ್ ಮಾಡಿದ್ದಾರೆ.

ಕನ್ನಡದ 'ಭದ್ರ', 'ಬಾಡಿಗಾರ್ಡ್', 'ಗಜೇಂದ್ರ', 'ಬಚ್ಚನ್' ಸೇರಿ ಕೆಲ ಕನ್ನಡ ಸಿನಿಮಾಗಳಲ್ಲಿ ಡೈಸಿ ಶಾ ನಟಿಸಿದ್ದಾರೆ. ಕನ್ನಡ ನಟನೊಬ್ಬನ ಸಿನಿಮಾ ಹಾಡುಗಳನ್ನು ನೋಡಿ ನಾನು ಶಾಕ್ ಆಗಿದ್ದೆ. ಆತನ ಎಲ್ಲಾ ಹಾಡುಗಳಲ್ಲಿ ನಾಯಕಿಯ ಹೊಕ್ಕುಳ ಮೇಲೆ ಹಣ್ಣು, ತರಕಾರಿ ಹಾಕುವುದು ನೋಡಿ ವಿಚಿತ್ರ ಅನ್ನಿಸಿತ್ತು ಎಂದು ಆಕೆ ಹೇಳಿರುವುದು ವೈರಲ್ ಆಗ್ತಿದೆ. ಯಾರಪ್ಪಾ ಆ ನಟ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. Hauterrfly ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಡೈಸಿ ಶಾ ಈ ರೀತಿ ಹೇಳಿದ್ದರು.

Bollywood Actress Daisy Shah Opens up on navel obsession of Kannada films

ದಕ್ಷಿಣದ ಸಿನಿಮಾಗಳಲ್ಲಿ ನಾಯಕಿಯರ ಎದೆ ಹಾಗೂ ಹೊಕ್ಕುಳನ್ನು ಬಹಳ ಫೋಕಸ್ ಮಾಡ್ತಾರಂತಲ್ಲ. ನಿಮಗೂ ಅದೇ ರೀತಿ ಅನ್ನಿಸಿದ್ಯಾ ಎನ್ನುವ ಪ್ರಶ್ನೆಗೆ ಎದೆಯ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಹೊಕ್ಕುಳ ಬಗ್ಗೆ ಇಂತಹ ಗೀಳು ಇರುವಂತೆ ನನಗೆ ಅನ್ನಿಸಿತ್ತು ಎಂದು ಡೈಸಿ ಶಾ ನೆನಪಿಸಿಕೊಂಡಿದ್ದಾರೆ. ನಾನು ಒಂದು ಕನ್ನಡ ಚಿತ್ರದಲ್ಲಿ ನಟಿಸುವಾಗ ಅಲ್ಲಿಗೆ ಹೋಗಿದ್ದೆ. ಚಿತ್ರೀಕರಣ ಇಲ್ಲದೇ ಹೋಟೆಲ್‌ ರೂಮ್‌ನಲ್ಲಿ ಇದ್ದಾಗ ಟಿವಿ ಹಾಕಿದ್ದೆ. ಕನ್ನಡ ಚಾನಲ್ಸ್ ನೋಡುತ್ತಿದ್ದೆ. ಆಗ ಒಬ್ಬ ಕನ್ನಡ ನಟನ ಹಾಡುಗಳನ್ನು ಬಂತು. ಅದ್ರಲ್ಲಿ ಒಬ್ಬ ನಟ ಇದ್ದಾರೆ. ಆತನ ಎಲ್ಲಾ ಸಿನಿಮಾ ಹಾಡುಗಳಲ್ಲಿ ನಾಯಕಿ ಹೊಕ್ಕುಳ ಮೇಲೆ ಫ್ರೂಟ್ ಸಲಾಡ್, ತರಕಾರಿ ಸಲಾಡ್ ಹಾಕ್ತಿದ್ದಾರೆ, ಮೇಲೆಯಿಂದ ಹೊಕ್ಕುಳ ಮೇಲೆ ನೀರು ಸುರಿಯುತ್ತಾರೆ" ಎಂದು ನಕ್ಕಿದ್ದಾರೆ.

ನೀವು ಮಾಡಿರುವ ಎಕ್ಸ್‌ಪೋಸ್‌ಗಿಂತ ಆ ಹಾಡುಗಳು ಕೆಟ್ಟದಾಗಿ ಇಲ್ಲ ಬಿಡಿ. ಹಿಂದಿಯಲ್ಲಿ ಬರುವ ಐಟಂ ಸಾಂಗ್ಸ್‌ಗಿಂತ ಕನ್ನಡ ಹಾಡುಗಳು ಎಷ್ಟೋ ವಾಸಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದ ಡೈಸಿ ಶಾ ಮಾಡೆಲಿಂಗ್ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 'ರೆಹನಾ ಹೈ ತೇರೆ ದಿಲ್ ಮೇ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದಿದ್ದರು. ಹಿಂದಿ ಜೊತೆಗೆ ಕನ್ನಡ, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ತಾಪ್ನಿ ಪನ್ನು "ಬಾಲಿವುಡ್ ಸಿನಿಮಾ ಐಟಂ ಸಾಂಗ್ಸ್‌ನಲ್ಲಿ ಹೊಕ್ಕುಳ ಮೇಲೆ ಹೆಚ್ಚು ಫೋಕಸ್ ಮಾಡಲ್ಲ, ನಟಿಯರ ಎದೆಸೀಳು ಹೆಚ್ಚು ತೋರಿಸಲು ಪ್ರಯತ್ನಿಸುತ್ತಾರೆ" ಎಂದಿದ್ದರು. ದಕ್ಷಿಣದ ಸಿನಿಮಾಗಳಲ್ಲಿ ಪ್ಯಾಡೆಡ್ ಬ್ರಾ* ಧರಿಸೋಕೆ ಹೇಳುತ್ತಾರೆ ಎಂದು ಕೂಡ ಬೇಸರ ವ್ಯಕ್ತಪಡಿಸಿದ್ದರು.

ತೆಲುಗಿನ 'ಜುಮ್ಮಂದಿ ನಾದಂ' ಚಿತ್ರದಲ್ಲಿ ತಾಪ್ಸಿ ಮೊದಲಿಗೆ ನಟಿಸಿದ್ದರು. ಕೆ. ರಾಘವೇಂದ್ರ ರಾವ್ ಆಕ್ಷನ್ ಕಟ್ ಹೇಳಿದ್ದ ಚಿತ್ರದಲ್ಲಿ ಹಾಡುಗಳನ್ನು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಚಿತ್ರಿಸಲಾಗಿತ್ತು. "ಹಾಡಿನ ಚಿತ್ರೀಕರಣದ ವೇಳೆ ನನ್ನ ಹೊಕ್ಕುಳ ಮೇಲೆ ಹೂವು, ಹಣ್ಣಿನಿಂದ ಹೊಡೆದಿದ್ದರು. ನೋವಾಗುತ್ತಿತ್ತು. ನಟಿಯರ ಹೊಕ್ಕುಳ ಮೇಲೆ ಹಣ್ಣಿನಿಂದ ಹೊಡೆದರೆ ಅವರಿಗೆ ಅದೇನು ಸಂತೋಷ ಸಿಗುತ್ತೋ ಗೊತ್ತಿಲ್ಲ. ನನಗಂತೂ ನಗು ಬರ್ತಿತ್ತು" ಎಂದು ತಾಪ್ಸಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಕ್ಷಮೆ ಕೂಡ ಕೇಳಿದ್ದರು.

ಉತ್ತರದ ನಟಿಯರು ದಕ್ಷಿಣದ ಭಾರತದ ಸಿನಿಮಾಗಳ ಬಗ್ಗೆ ಈ ರೀತಿ ಕಾಮೆಂಟ್ ಮಾಡುವ ಬಗ್ಗೆ ಕನ್ನಡ ನಟಿ ಜ್ಯೋತಿ ರೈ ಪ್ರತಿಕ್ರಿಯಿಸಿದ್ದರು. ತೆಲುಗು ಸಿನಿಮಾ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ್ದರು. ಚಿತ್ರರಂಗದಲ್ಲಿ ಈ ರೀತಿ ನಟಿಸಬೇಕು ಎಂದು ಹೇಳುತ್ತಾರೆ. ಒಪ್ಪಿಗೆ ಇದ್ದರೆ ನಟಿಸಬಹುದು, ಇಲ್ಲದಿದ್ದರೆ ಬಿಡಬಹುದು. ಅದು ನಟಿಯರ ಆಯ್ಕೆ. ನಟಿಸಿದ ಬಳಿಕ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಜ್ಯೋತಿ ತಿರುಗೇಟು ನೀಡಿದ್ದರು.

Read more about: actress sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X