For Quick Alerts
  ALLOW NOTIFICATIONS  
  For Daily Alerts

  ಬರ್ತಡೇ ಗರ್ಲ್ ದೀಪಿಕಾ ಅಭಿನಯದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಿವು

  |

  ಬಾಲಿವುಡ್ ನ ಬ್ಯೂಟಿಫುಲ್ ಅಂಡ್ ಟ್ಯಾಲೆಂಟೆಡ್ ನಟಿ ದೀಪಿಕಾ ಪಡುಕೋಣೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟ ನಟಿ ದೀಪಿಕಾ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ಜನ್ಮದಿನಾಚರಣೆಯ ಸಂಭ್ರಮದ ಜೊತೆಗೆ ದೀಪಿಕಾ ಬಹುನಿರೀಕ್ಷೆಯ ಚಪಾಕ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

  ಕನ್ನಡ ಸಿನಿಮಾದಿಂದ ಪ್ರಾರಂಭವಾದ ದೀಪಿಕಾ ಸಿನಿ ಪಯಣ ಹಾಲಿವುಡ್ ಸಿನಿ ಜತ್ತಿನವರೆಗೂ ಸಾಗಿದೆ. ಇಂದು ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತ, ಟಾಪ್ ನಟಿಯಾಗಿ ಮೆರೆಯುತ್ತಿದ್ದಾರೆ. ಕನ್ನಡ ಸಿನಿಮಾ ನಂತರ ಏಕಾಏಕಿ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡ ದೀಪಿಕಾ ನಂತರ ಮುಟ್ಟಿದ್ದೆಲ್ಲ ಚಿನ್ನ.

  ಪತ್ನಿಯ ಸ್ವಂತ ಫ್ಲ್ಯಾಟ್ ಇರುವಲ್ಲೇ ಪ್ರತ್ಯೇಕ ಬಾಡಿಗೆ ಮನೆ ಮಾಡಿದ್ದೇಕೆ ರಣ್ವೀರ್.?ಪತ್ನಿಯ ಸ್ವಂತ ಫ್ಲ್ಯಾಟ್ ಇರುವಲ್ಲೇ ಪ್ರತ್ಯೇಕ ಬಾಡಿಗೆ ಮನೆ ಮಾಡಿದ್ದೇಕೆ ರಣ್ವೀರ್.?

  ದೀಪಿಕಾ ನಿರ್ಮಾಪಕರ ಪಾಲಿನ ಅದೃಷ್ಟ ದೇವತೆ. ಕನ್ನಡದ ಈ ಸುಂದರಿ ಅಭಿನಯದ ಬಹುತೇಕ ಚಿತ್ರಗಳು ಸೂಪರ್ ಹಿಟ್. ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ದೀಪಿಕಾ ಅಭಿನಯದ ಸಿನಿಮಾಗಳ ಲಿಸ್ಟ್ ಹೀಗಿದೆ.

  ಯೆ ಜವಾನಿ ಹೈ ದಿವಾನಿ

  ಯೆ ಜವಾನಿ ಹೈ ದಿವಾನಿ

  ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಅಭಿನಯದ ಯೆ ಜವಾನಿ ಹೈ ದಿವಾನಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಆಗಲೆ ಮಾಜಿ ಪ್ರೇಮಿಗಳಾಗಿದ್ದ ದೀಪಿಕಾ ಮತ್ತು ರಣಬೀರ್ ಇಬ್ಬರ ಯೆ ಜವಾನಿ ಹೈ ದಿವಾನಿ ಸಿನಿಮಾ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ರೋಮ್ಯಾಂಟಿಕ್ ಸಿನಿಮಾ ಬರೋಬ್ಬರಿ 177.99 ಕೋಟಿ ಕಲೆಕ್ಷನ್ ಮಾಡಿತ್ತು. ಜೊತೆಗೆ 59ನೇ ಫಿಲ್ಮ್ ಫೇರ್ ಪ್ರಶಸ್ತಿಯಲ್ಲಿ ಅತೀ ಹೆಚ್ಚು ವಿಭಾಗದಲ್ಲಿ ನಾಮ ನಿರ್ದೇಶನ ಗೊಂಡಿತ್ತು.

  ದೀಪಿಕಾ ಪಡುಕೋಣೆ ಮತ್ತು ನಿತ್ಯಾ ಮೆನನ್ ಇಬ್ಬರ ಕಾಮನ್ ಸೀಕ್ರೆಟ್ ರಿವೀಲ್ದೀಪಿಕಾ ಪಡುಕೋಣೆ ಮತ್ತು ನಿತ್ಯಾ ಮೆನನ್ ಇಬ್ಬರ ಕಾಮನ್ ಸೀಕ್ರೆಟ್ ರಿವೀಲ್

  ಚೆನ್ನೈ ಎಕ್ಸ್ ಪ್ರೆಸ್

  ಚೆನ್ನೈ ಎಕ್ಸ್ ಪ್ರೆಸ್

  ದೀಪಿಕಾ ಸಿನಿ ಬದುಕಿಗೆ ತಿರುವು ನೀಡಿದ ಸಿನಿಮಾ ಚೆನ್ನೈ ಎಕ್ಸ್ ಪ್ರೆಸ್. ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ ಜೊತೆ ಮತ್ತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಚೆನ್ನೈ ಎಕ್ಸ್ ಪ್ರೆಸ್ ಸೂಪರ್ ಹಿಟ್ ಆಗುತ್ತೆ. ಬಾಕ್ಸ್ ಆಫೀಸ್ ನಲ್ಲಿಯೂ ಧೂಳ್ ಎಬ್ಬಿಸುತ್ತೆ. ಆಕ್ಷನ್, ಕಾಮಿಡಿ ಚೆನ್ನೈ ಎಕ್ಸ್ ಪ್ರೆಸ್ ಬರೋಬ್ಬರಿ 207.69 ಕೋಟಿ ಕಲೆಕ್ಷನ್ ಮಾಡಿದೆ.

  ಹ್ಯಾಪಿ ನ್ಯೂ ಇಯರ್

  ಹ್ಯಾಪಿ ನ್ಯೂ ಇಯರ್

  ದೀಪಿಕಾ ಸಿನಿ ಬದುಕಿನ ಮತ್ತೊಂದು ದೊಡ್ಡ ಮತ್ತು ಖ್ಯಾತಿ ತಂದುಕೊಟ್ಟ ಸಿನಿಮಾ ಹ್ಯಾಪಿ ನ್ಯೂ ಇಯರ್. ಬಾಲಿವುಡ್ ನ ಸ್ಟಾರ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ಮೂರನೆ ಬಾರಿ ತೆರೆಹಂಚಿಕೊಂಡ ಸಿನಿಮಾ. ಶಾರುಖ್ ಮತ್ತು ದೀಪಿಕಾ ಜೋಡಿಗೆ ಅಭಿಮಾನಿಗಳು ಮತ್ತೊಮ್ಮೆ ಮನಸೋತಿದ್ದರು. ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಸಕ್ಸಸ್ ಕಂಡ ಹ್ಯಾಪಿ ನ್ಯೂ ಇಯರ್ 178.41 ಕೋಟಿ ಬಾಚಿಕೊಂಡಿತ್ತು.

  ''ಎಕ್ಸ್ ಕ್ಯೂಸ್ ಮೀ, ಯಾರ್ರೀ ಹೇಳಿದ್ದು.? ಇದು ನನ್ನ ದುಡ್ಡು'' ಎಂದ ದೀಪಿಕಾ.!''ಎಕ್ಸ್ ಕ್ಯೂಸ್ ಮೀ, ಯಾರ್ರೀ ಹೇಳಿದ್ದು.? ಇದು ನನ್ನ ದುಡ್ಡು'' ಎಂದ ದೀಪಿಕಾ.!

  ಬಾಜಿರಾವ್ ಮಸ್ತಾನಿ

  ಬಾಜಿರಾವ್ ಮಸ್ತಾನಿ

  ದೀಪಿಕಾ ಸಿನಿಮಾ ಬದುಕನ್ನು ಮತ್ತೊಂದು ಲೆವೆಲ್ ಗೆ ಕರೆದೊಯ್ದ ಸಿನಿಮಾ ಬಾಜಿರಾವ್ ಮಸ್ತಾನಿ. ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಾಂಬಿನೇಷ್ ನಲ್ಲಿ ಮೂಡಿಬಂದ ಈ ಐತಿಹಾಸಿಕ ಸಿನಿಮಾಗೆ ಭಾರತೀಯ ಚಿತ್ರರಂಗವೇ ದಂಗ್ ಆಗಿತ್ತು. ಆ ಸಿನಿಮಾದಲ್ಲಿ ದೀಪಿಕಾ ಅಭಿನಯಕ್ಕೆ ಮನಸೋಲದವರೆ ಇಲ್ಲ. ಭಾರತೀಯ ಚಿತ್ರಪ್ರಿಯರ ಮನಗೆದ್ದ ಬಾಜಿರಾವ್ ಮಸ್ತಾನಿ 183.75 ಕೋಟಿ ಬಾಚಿಕೊಂಡಿತ್ತು.

  ಪದ್ಮಾಪತ್

  ಪದ್ಮಾಪತ್

  ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ದೀಪಿಕಾ, ರಣ್ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಕಾಂಬಿನೇಷನ್ ನಲ್ಲಿ ಬಂದ ಪದ್ಮಾಪತ್ ಸಿನಿಮಾ ದೀಪಿಕಾ ಯಶಸ್ಸಿಗೆ ಮತ್ತೊಂದು ಗರಿ ತಂದು ಕೊಟ್ಟಿತ್ತು. ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ್ದ ಪದ್ಮಾಪತ್ ರಿಲೀಸ್ ಆದಮೇಲೆ ಚಿತ್ರಭಿಮಾನಿಗಳ ಹೃದಯಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಸಿನಿಮಾ ಬರೋಬ್ಬರಿ 282.28 ಕೋಟಿ ಬಾಚಿಕೊಂಡಿದೆ. ದೀಪಿಕಾ ಸಿನಿ ಬದುಕಿನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಿದು.

  English summary
  Bollywood actress Deepika Padukone celebrating her 34th birthday. deepika padukone highest collection movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X